ಕಲ್ಯಾಣ ಮಂಟಪ, ಹೋಟೆಲ್ ಪಾರ್ಟಿ ಮತ್ತು ರೆಸಾರ್ಟ್ ಆರಂಭಕ್ಕೆ ಸರ್ಕಾರ ಷರತ್ತುಬದ್ಧ ಅನುಮತಿ-Times of karkala

ಕಲ್ಯಾಣ ಮಂಟಪ, ಹೋಟೆಲ್ ಪಾರ್ಟಿ ಮತ್ತು ರೆಸಾರ್ಟ್ ಆರಂಭಕ್ಕೆ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ.

ಇಂದು ಕಾವೇರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕೋವಿಡ್ ಸಂಬಂಧಿತ ಸಚಿವರೊಂದಿಗೆ ಸಭೆ ನಡೆಸಲಾಯ್ತು. ಸಭೆಯ ಆರಂಭದಲ್ಲಿ ಕೋವಿಡ್ ನಿಯಮಗಳನ್ನು ಸಡಿಲಗೊಳಿಸುವ ಕುರಿತ ಪ್ರಸ್ತಾಪವನ್ನು ಇರಿಸಲಾಯ್ತು.

ಕಲ್ಯಾಣ ಮಂಟಪ ಹೋಟೆಲ್ ಪಾರ್ಟಿ ಹಾಲ್ ಮತ್ತು ರೆಸಾರ್ಟ್ ಗಳಲ್ಲಿ 40 ಜನ ಕ್ಕೆ ಸೀಮಿತಗೊಳಿಸಿ ಅನುಮತಿ ತೆಗೆದುಕೊಂಡು ವೈಯಕ್ತಿಕ ಪಾಸ್ ಗಳೊಂದಿಗೆ ಸೋಮವಾರದಿಂದ ಜಾರಿಗೆ ಬರುವಂತೆ ಮದುವೆ ಸಮಾರಂಭಗಳಿಗೆ ಅನುಮತಿ ನೀಡಲು ಸರ್ಕಾರ ನಿರ್ಧರಿಸಿದೆ. ಕಲ್ಯಾಣ ಮಂಟಪಗಳು, ಪಾರ್ಟಿ ಹಾಲ್ ಮತ್ತು ರೆಸಾರ್ಟ್ ಗಳಿಗೆ ಷರತ್ತುಬದ್ಧ ಅನುಮತಿ ನೀಡಿದ್ದು, 40 ಜನರಿಗೆ ಸೀಮಿತವಾಗಿ ಕಾರ್ಯನಿರ್ವಹಣೆಗೆ ಅವಕಾಶ ನೀಡಲಾಗಿದೆ. ಮದುವೆ, ಪಾರ್ಟಿ ಹಾಲ್ ಗೆ ಹೋಗೋರು ವೈಯಕ್ತಿಕ ಪಾಸ್ ತಗೋಬೇಕು ಎಂದು ಷರತ್ತು ವಿಧಿಸಲಾಗಿದೆ.

ಕೋವಿಡ್ 19 ರ ರೂಪಾಂತರಿ ಡೆಲ್ಟಾ ಬಗ್ಗೆ ರಾಜ್ಯದಲ್ಲಿರುವ ಪ್ರಸ್ತುತ ಇರುವ ಪರಿಸ್ಥಿತಿ ಯ ಬಗ್ಗೆ ಪರಾಮರ್ಶೆ ನಡೆಸಲಾಯಿತು. ರಾಜ್ಯದಲ್ಲಿ ಡೆಲ್ಟಾ ವೈರಸ್ ಸಧ್ಯಕ್ಕೆ ಹತೋಟಿಯಲ್ಲಿದ್ದು ವೈರಸ್ ಬಗ್ಗೆ ತೀವ್ರ ನಿಗಾ ಇಡಲು ಮುಖ್ಯಮಂತ್ರಿಗಳು ಸೂಚಿಸಿದರು. ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡೆಲ್ಟಾ ವೈರಸ್ ಕಂಡುಬರುತ್ತಿದೆ ಬಾರ್ಡರ್ ಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಯಿತು. ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವವರ ಬಗ್ಗೆನು ಸಹ ತೀವ್ರ ನಿಗಾ ಇಟ್ಟು ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸುವಂತೆ ಸಿಎಂ ಸೂಚಿಸಿದ್ದಾರೆ.


ಕೇರಳ ಹಾಗು ಮಹಾರಾಷ್ಟ್ರದಲ್ಲಿ ಎರಡನೇ ಅಲೆಯ ತೀವ್ರತೆ ಕಡಿಮೆಯಾಗದಿರುವ ಆತಂಕ ವ್ಯಕ್ತಪಡಿಸಿ ರಾಜ್ಯದಲ್ಲಿ ಕೋವಿಡ್ ನಿರ್ಬಂಧಗಳನ್ನು ಸಡಿಲಿಗೊಳಿಸಿದರು ಎಚ್ಚರಿಕೆಯಿಂದ ಇರುವಂತೆ ರಾಜ್ಯದ ಜನರಿಗೆ ಮನವಿ ಮಾಡಲಾಯಿತು.

 ಜಾಹೀರಾತು Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget