ಕಾರ್ಕಳ:ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ವೃದ್ಧ ದಂಪತಿಗಳು-Times of karkala

ಕಾರ್ಕಳ:ವೃದ್ಧ ದಂಪತಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಹವಾಲ್ದಾರ್ ಬೆಟ್ಟು ಎಂಬಲ್ಲಿನಡೆದಿದೆ.


ಮೃತರನ್ನು ಕೆ.ಪಿ.ಅನಂತ ಪ್ರಭು(84),ಕೆಪಿ.ಪದ್ಮಾ ಪ್ರಭು(82) ಎಂದು ಗುರುತಿಸಲಾಗಿದೆ. ಇವರು ಮೇ 31 ರಂದು ತಮ್ಮದೇ ಮನೆಯಲ್ಲಿ ವಿಷ ಪದಾರ್ಥ ಸೇವನೆಗೈದು ಅಸ್ವಸ್ಥರಾಗಿದ್ದರು . ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆಗೆ ಸ್ಪಂದಿಸದೇ ದಂಪತಿಗಳು ಕೊನೆಯುಸಿರೆಳೆದಿದ್ದಾರೆ.


ಅನಂತಪ್ರಭು ಜೂ.1 ರ ಬೆಳಗ್ಗೆ ಮೃತರಾದರೆ ಪದ್ಮಾಪ್ರಭುರವರು ಮಧ್ಯಾಹ್ನದ ವೇಳೆಗೆ ಮೃತರಾದರು. ದಂಪತಿಗಳಿಬ್ಬರು ಒಂದು ತಾಸಿನ ಅಂತರದಲ್ಲಿ ಮೃತಪಟ್ಟಿದ್ದಾರೆ.


ಕೆ.ಪಿ ಅನಂತ ಪ್ರಭು ಕಾರ್ಕಳದಲ್ಲಿ ಪಾತ್ರೆ ಮಳಿಗೆ ನಡೆಸುತ್ತಿದ್ದರು.ಈ ನಡುವೆ ಪತ್ನಿ ಕೆ.ಪಿ ಪದ್ಮಾ ಪ್ರಭು ಅನಾರೋಗ್ಯಕ್ಕೆ ತುತ್ತಾಗಿದ್ದರೆಂದು ತಿಳಿದುಬಂದಿದ್ದು, ಇದುವೇ ಘಟನೆಗೆ ಕಾರಣವೆನ್ನಲಾಗಿದೆ.ದಂಪತಿಗಳು ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿರುವ ಮಗನನ್ನು ಸೇರಿ ಇಬ್ಬರು ಪುತ್ರರನ್ನು ಅಗಲಿದ್ದಾರೆ.

 ಜಾಹೀರಾತು 







Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget