ವಿಕಲಚೇತನರ ಹಾಗೂ ಖಾಸಗಿ ವಿಶೇಷ ಶಾಲಾ ಶಿಕ್ಷಕರ ಬಗ್ಗೆ ಸರಕಾರದ ನಿರ್ಲಕ್ಷ್ಯ-ಡಾ. ಕಾಂತಿ ಹರೀಶ್-Times of karkala

ಕಾರ್ಕಳ:ವಿಕಲಚೇತನರ  ಹಾಗೂ ಖಾಸಗಿ ವಿಶೇಷ ಶಾಲಾ  ಶಿಕ್ಷಕರ ಬಗ್ಗೆ  ಸರಕಾರದ ನಿರ್ಲಕ್ಷ್ಯದಿಂದಾಗಿ ವಿಕಲಚೇತನರು ಹಾಗೂ ಖಾಸಗಿ ವಿಶೇಷ ಶಾಲಾ ಶಿಕ್ಷಕರು ಕೊರೊನಾ ಸಂದರ್ಭದಲ್ಲಿ ಸರಕಾರದಿಂದ ಯಾವುದೇ ಸವಲತ್ತು ಲಭಿಸದೆ ವಂಚಿತರಾಗಿದ್ದಾರೆ ಎಂದು ಕ.ರಾ.ವಿಶೇಷ ಶಿಕ್ಷಕ ಶಿಕ್ಷಕೇತರರ ಸಂಘದ ರಾಜ್ಯಾಧ್ಯಕ್ಷೆ ಡಾ. ಕಾಂತಿ ಹರೀಶ್ ಆತಂಕ ವ್ಯಕ್ತಪಡಿಸಿದ್ದಾರೆ. 


ಈಗಾಗಲೇ ಶಿಶು ಕೇಂದ್ರೀಕೃತ ಸಹಾಯಧನ ಯೋಜನೆಯಡಿಯಲ್ಲಿ ಈ ಹಿಂದೆ ನೀಡುತ್ತಿದ್ದ ಆಹಾರ ಸಾಮಗ್ರಿಗಳ ವೆಚ್ಚವನ್ನು ಕೂಡ ಕೊರೊನಾ ಸಂದರ್ಭದಲ್ಲಿ  ಖಡಿತಗೊಳಿಸಲಾಗಿದೆ.ಸಾಮಾನ್ಯ ಮಕ್ಕಳಿಗೆ ಸಿಗುವಂತೆ ವಿಕಲಚೇತನ ಮಕ್ಕಳಿಗೆ ಫುಡ್ ಕಿಟ್ ಕೂಡ ಇಲ್ಲ.  ಒಂದು ವೇಳೆ ಆಹಾರ ಸಾಮಗ್ರಿ ವೆಚ್ಚ ನೀಡುತ್ತಿದ್ದರೆ  ವಿಶೇಷ ಮಕ್ಕಳು ತರಬೇತಿ ಪಡೆಯುತ್ತಿದ್ದ  ಸಂಸ್ಥೆಗಳ ಮುಲಕ  ಮಕ್ಕಳ ಮನೆಗಳಿಗೆ ಫುಡ್ ಕಿಟ್  ತಲುಪಿಸುವ ಕೆಲಸ ಮಾಡಬಹುದಾಗಿದೆ.

ಖಾಸಗಿ ವಿಶೇಷ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ವಿಶೇಷ ಶಿಕ್ಷಕ ಶಿಕ್ಷಕೇತರರ ಸ್ಥಿತಿ ಬಹಳ ಶೋಚನೀಯವಾಗಿದೆ.ಅನುದಾನಿತ ವಿಶೇಷ ಶಾಲೆಯ ಶಿಕ್ಷಕರಿಗೆ ಸರಕಾರದ ಗೌರವಧನ ಲಭಿಸುತ್ತಿದೆ. ಆದರೆ ಅನುದಾನ ರಹಿತ ಸಂಸ್ಥೆಯ ಶಿಕ್ಷಕರಿಗೆ ಸಂಸ್ಥೆಯ ವತಿಯಿಂದಲೂ  ಗೌರವಧನ ನೀಡಲಾಗುತ್ತಿಲ್ಲ. ಕೊರೊನಾದಿಂದಾಗಿ ಸಂಸ್ಥೆಯಲ್ಲಿ ಮಕ್ಕಳ ಹಾಜರಾತಿ ಇಲ್ಲ ಹಾಗೂ ದೇಣಿಗೆ ಸಂಗ್ರಹವಾಗುತ್ತಿಲ್ಲ. ಸಂಸ್ಥೆಯವರು ವೇತನ ಪಾವತಿಸಲು ಅಸಹಾಯಕರಾಗಿದ್ದಾರೆ.ಸರಕಾರ ಕೂಡ ಇವರ ಬಗ್ಗೆ ಯಾವುದೇ ಕ್ರಮ ವಹಿಸಿಲ್ಲ

ಈಗ ಮಾನ್ಯ ಮುಖ್ಯಮಂತ್ರಿ ಗಳ ಘೋಷಣೆಯಂತೆ ಖಾಸಗಿ ಶಾಲಾ ಶಿಕ್ಷಕರಿಗೆ ರೂ. 5,000 ಘೋಷಿಸಿರುವ0ತಹ  ಸೌಲಭ್ಯ ನಮ್ಮ ಖಾಸಗಿ ಶಾಲೆಯಲ್ಲಿರುವ  ವಿಶೇಷ ಶಿಕ್ಷಕರಿಗೂ ಕಲ್ಪಿಸುವಂತಾಗಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಜಾಹೀರಾತು Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget