July 2021

 "ನಮ್ಮ ಶಾಸಕರಾದ  ಸುನೀಲ್ ಕುಮಾರ್  ಕುಮಾರವರು ಸಂಘಪರಿವಾರ ಹಿನ್ನೆಲೆಯಿಂದ ಬಂದು ಕಾಂಗ್ರೆಸ್ ಭದ್ರ ಕೋಟೆಯಾಗಿದ್ದ ಕಾರ್ಕಳದಲ್ಲಿ ಬಿಜೆಪಿ ಬಾವುಟ ಹಾರಿಸಿದ್ದಲ್ಲದೆ,ಅಭಿವೃದಿಯಲ್ಲಿ ರಾಜ್ಯಕ್ಕೆ ಮಾದರಿ ಎಂಬ ರೀತಿಯಲ್ಲಿ ಕಾರ್ಕಳವನ್ನು ಅಭಿವೃದ್ಧಿಗೊಳಿಸಿದ್ದಾರೆ"

"ಸುನೀಲ್ ಕುಮಾರ್ ರವರು ಅಭಿವೃದ್ಧಿ ಮತ್ತು ಹಿಂದುತ್ವದ ವಿಚಾರದಲ್ಲಿ ಎಂದಿಗೂ ರಾಜಿಯಾಗದೆ   ನಿರಂತರ ಮೌಲ್ಯಾಧಾರಿತ ರಾಜಕೀಯ ಮಾಡಿ ರಾಜ್ಯಕ್ಕೆ ಮಾದರಿ ಆದವರು.ಅಲ್ಲದೆ ವಿಧಾನಸಭೆಯಲ್ಲೂ ವಿರೋಧ -ಆಡಳಿತ ಪಕ್ಷದ ಮುಖ್ಯ ಸಚೇತಕರಾಗಿಯೂ ದುಡಿದ ಅನುಭವಿ,ಕ್ರಿಯಾಶೀಲ ವ್ಯಕ್ತಿತ್ವದವರು."


"ಜನರ ಗಂಭೀರ ಸಮಸ್ಯೆಗಳ ಬಗ್ಗೆ ಹಲವಾರು ಬಾರಿ  ವಿಧಾನಸಭೆಯಲ್ಲಿ ವಿಷಯ ಮಂಡನೆಯಲ್ಲೂ ಗಮನ ಸೆಳದವರು.ಅಲ್ಲದೆ ಎಂದು ವ್ಯಕ್ತಿಗತ ಜಾತಿ ರಾಜಕೀಯ ಮಾಡಿದವರಲ್ಲ.ರಾಜ್ಯಾದ್ಯಂತ ಯುವಕರಿಗೆ ಸ್ಫೂರ್ತಿ ತುಂಬಿ ತಳಮಟ್ಟದಲ್ಲಿ ಸಂಘಟನೆ ಮಾಡುವ ಸಂಘಟನಾ ಚತುರ.ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು   ಈ ಎಲ್ಲಾ ಅಂಶಗಳನ್ನು ಪರಿಗಣಿಸಿ  ಸಂಪುಟದಲ್ಲಿ ಪ್ರಮುಖ ಖಾತೆ ಕೊಟ್ಟರೆ ಸಂಪುಟದ ಘನತೆ ಹೆಚ್ಚವುದರಲ್ಲಿ ಸಂಶಯ ಇಲ್ಲ ಎಂದು ಕಾರ್ಕಳ  ಬಿಜೆಪಿ ಕ್ಷೇತ್ರಾಧ್ಯಕ್ಷ  ಮಹಾವೀರ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 ಜಾಹೀರಾತು ಕಾರ್ಕಳ:"ವಿದ್ಯೆಗಿಂತ ಮಿಗಿಲಾದ ಸಂಪತ್ತು ಬೇರೆ ಯಾವುದೂ ಇಲ್ಲ, ಕಲಿಯಬೇಕೆಂಬ‌ ಮನಸ್ಸಿನ ಮಕ್ಕಳಿಗೆ ಬಡತನ ಅಡ್ಡಿಯಾಗದು, ವಾರ್ಡಿನ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವೆ ಎಂದು ಪುರಸಭಾ ಸದಸ್ಯರಾದ ಶುಭದರಾವ್ ಹೇಳಿದರು. 


 ಅವರು ಕಾರ್ಕಳ ಪುರಸಭಾ ವ್ಯಾಪ್ತಿಯ ಉಚ್ಚಂಗಿ ನಗರದ ಪ್ರಾಥಮಿಕ, ಹೈಸ್ಕೂಲ್, ಪದವಿಪೂರ್ವ ಮತ್ತು ಕಾಲೇಜಿನ 60  ವಿದ್ಯಾರ್ಥಿಗಳಿಗೆ  ಪುಸ್ತಕಗಳನ್ನು ವಿತರಿಸಿ ಮಾತನಾಡಿದರು. 

ಪುರಸಭಾ ಸದಸ್ಯ‌ ಪ್ರದೀಪ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು,  ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ‌ಪ್ರತಿಮಾ ರಾಣೆ, ಉದ್ಯಮಿ ನವೀನ್ ರಾವ್, ಚೇತನ್ ರಾವ್, ಸ್ಥಳಿಯರಾದ ನವೀನ್ ರಾಣೆ, ಸಂದೇಶ್, ಮತ್ತಿತರರು ಉಪಸ್ಥಿತರಿದ್ದರು ಪ್ರಜ್ವಲ್ ದನ್ಯವಾದವಿತ್ತರು.

 ಜಾಹೀರಾತು 


"ಸಮಾಜದ ಕೌಟುಂಬಿಕ ದೃಡತೆಗೆ ರೋಟರಿ ಆನ್ಸ್ ಕ್ಲಬ್ ಸಹಕಾರಿಯಾಗಿದೆ" - ಆನ್ಸ್ ಪಿಹೆಚ್ಎಫ್ ವೃಂದಾ ಹರಿಪ್ರಕಾಶ್ ಶೆಟ್ಟಿ


ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ - ಆನ್ಸ್ ಕ್ಲಬ್ ಪದಗ್ರಹಣ ಸಮಾರಂಭ

ರೋಟರಿಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ಆನ್ಸ್ ಕ್ಲಬ್ಬಿನ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಪ್ರದಾನ ಸಮಾರಂಭ ನಡೆಯಿತು.ಈ ಸಂಧರ್ಭ ಪದಪ್ರದಾನ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿದ ಆನ್ಸ್ ಪಿಹೆಚ್ಎಫ್ ವೃಂದಾ ಹರಿಪ್ರಕಾಶ್ ಶೆಟ್ಟಿ ಸಮಾಜದ ಕೌಟುಂಬಿಕ ದೃಡತೆಗೆ ರೋಟರಿ ಆನ್ಸ್ ಕ್ಲಬ್ ಸಹಕಾರಿಯಾಗಿದೆ ಎಂದು ಹೇಳಿದರು.


ರೋಟರಿ ಕ್ಲಬ್ ಅಧ್ಯಕ್ಷರಾದ ರೊ.ಪ್ರಕಾಶ್ ಪೈ ಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಆನ್ಸ್  ಮೇಘಶ್ರೀ ಪ್ರಶಾಂತ್ ಜೈನ್ ಸತತವಾಗಿ ದ್ವಿತೀಯ ವರ್ಷಕ್ಕೆ ಕ್ಲಬ್ಬಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಆನ್ಸ್  ಲಕ್ಷ್ಮಿ ಹೆಗ್ಡೆ ಯವರು ಕಾರ್ಯದರ್ಶಿಯಾಗಿ ಪ್ರಭಾರ ವಹಿಸಿಕೊಂಡರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ 'ಗ್ಲೋಬಲ್ ಗ್ರಾಂಟ್ ಯೋಜನೆ'ಗೆ ಮೇಜರ್ ಡೋನರ್ ಆಗಿರುವ ಶ್ರೀಮತಿ ಜ್ಯೋತಿ ಪೈ ಹಾಗೂ  ಜಗನಾಥ ಪೈ ಇವರಿಗೆ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಪಿಹೆಚ್ಎಫ್ ಪದಕ ಮತ್ತು ಪ್ರಶಸ್ತಿ ಪತ್ರವನ್ನು  ರೊ.ಪಿಡಿಜಿ .ಡಾ.ಭರತೇಶ್ ಆದಿರಾಜ್ ರವರು ನೀಡಿ ಗೌರವಿಸಿದರು.ದಾನಿಗಳಾದ ಶ್ರೀ ಜಗದೀಶ್ ಹೆಗ್ಡಯವರನ್ನು ಸಹ ಗೌರವಿಸಲಾಯಿತು. ಪಿಯುಸಿ ವಾರ್ಷಿಕ ಪರೀಕ್ಷೆ ಯಲ್ಲಿ  ಅತ್ಯಧಿಕ   ಅಂಕ ಪಡೆದ ರೋಟರಿ ಕುಟುಂಬ ಸದಸ್ಯರನ್ನು ಗುರುತಿಸಲಾಯಿತು.  

ರೊ. ಗೀತಾ ರಾವ್ ಅತಿಥಿಗಳನ್ನು ಸ್ವಾಗತಿಸಿದರು.ಈ ಸಮಾರಂಭದಲ್ಲಿ ವಲಯ ಸೇನಾನಿ ರೊ.ಸುರೇಂದ್ರ ನಾಯಕ್, ನಿಕಟಪೂರ್ವ ಅಧ್ಯಕ್ಷರಾದ ರೊ.ಪ್ರಶಾಂತ್ ಬೆಳಿರಾಯ, ಕ್ಲಬ್ಬಿನ ರೋಟರಿ , ಆನ್ಸ್ ,ಜೋನ್ ಮತ್ತು ಆನೆಟ್ ಸದಸ್ಯರು ಭಾಗವಹಿಸಿದರು. ಆನ್ಸ್ ಲಕ್ಷ್ಮಿ ಹೆಗ್ಡೆ ವಂದನಾರ್ಪಣೆ ಮಾಡಿದರು.ರೊ.ಸುರೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

 ಜಾಹೀರಾತು ಹೆಬ್ರಿ:ತೋಟದ ಕರೆಯ ಬಳಿವಿರುವ ಕೃಷಿಗೆ ಅಳವಡಿಸಿದ ಪಂಪ್ ಶೆಡ್ ನ್ನು ಪರೀಕ್ಷಿಸಲು ಹೋದ ಸಂಧರ್ಭ ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಹೆಬ್ರಿಯ ನಾಡ್ಪಾಲು ಎಂಬಲ್ಲಿ  ದಿನಾಂಕ ಜು.27 ರಂದು ಸಂಭವಿಸಿದೆ.

ನಾಡ್ಪಾಲು ಗ್ರಾಮ ಮುರ್ಸೆ ಕಾಸನಮಕ್ಕಿ ನಿವಾಸಿ ಎಸ್ ಪುರಂದರ ಹೇರಳೆ (61) ಮೃತಪಟ್ಟವರು.


ದಿನಾಂಕ ಜುಲೈ 27 ರಂದು ಬೆಳಿಗ್ಗೆ 09:30 ಗಂಟೆಯಿಂದ ಬೆಳಿಗ್ಗೆ 11:30 ಗಂಟೆಯ ಮದ್ಯಾವಧಿಯಲ್ಲಿ ಎಸ್ ಪುರಂದರ ಹೇರಳೆ (61) ಎಂಬುವವರು ತನ್ನ ತೋಟದ ಕರೆಯ ಬಳಿವಿರುವ ಕೃಷಿಗೆ ಅಳವಡಿಸಿದ ಪಂಪ್ ಶೆಡ್ ನ್ನು ಪರೀಕ್ಷಿಸಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಪರಿಣಾಮವಾಗಿ ಅವರು ಕೆರೆಗೆ ಬಿದ್ದು ಮುಳುಗಿ ಉಸಿರು ಕಟ್ಟಿ ಮೃತಪಟ್ಟಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

 ಜಾಹೀರಾತು 

ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬಿಜೆಪಿ ಬಸವರಾಜ ಬೊಮ್ಮಾಯಿ ಅವರನ್ನ ಆಯ್ಕೆ ಮಾಡಿದೆ. ಇಂದು ನಡೆದ ಶಾಸಕಾಂಗ ಸಭೆಯಲ್ಲಿ ಚರ್ಚೆ ಇಲ್ಲದೆ ಬೊಮ್ಮಾಯಿ ಹೆಸರನ್ನು ಘೋಷಣೆ ಮಾಡಲಾಗಿದ್ದು, ಇದಕ್ಕೆ ಗೋವಿಂದ ಕಾರಜೋಳ ಅನುಮೋದನೆ ನೀಡಿದ್ದಾರೆ.ನಾಳೆ ರಾಜಭವನದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಯಡಿಯೂರಪ್ಪನವರ ರಾಜೀನಾಮೆಯಿಂದಾಗಿ ಸಂಪುಟ ವಿಸರ್ಜನೆಯಾಗಿದ್ದು, ಯಾರಿಗೆ ಲಕ್? ಯಾರಿಗೆ ಶಾಕ್ ಎದುರಾಗುತ್ತೆ ಅನ್ನೋದರ ಬಗ್ಗೆ ಕುತೂಹಲ ಮನೆ ಮಾಡಿತ್ತು. ಇದೀಗ ಈ ಕುತೂಹಲಕ್ಕೆ ತೆರೆಬಿದ್ದಿದೆ.


ಇಂದು ಸಂಜೆ ಕ್ಯಾಪಿಟಲ್ಸ್ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಈ ಹೆಸರನ್ನು ಅಂತಿಮಗೊಳಿಸಲಾಯಿತು. ಸೋಮವಾರ ಬಿಜೆಪಿ ಸರ್ಕಾರ ರಚನೆಯಾದ ಎರಡು ವರ್ಷದ ಸಂಭ್ರಮಾಚರಣೆಯಲ್ಲಿಯೇ ಬಿ.ಎಸ್.ಯಡಿಯೂರಪ್ಪ ಅವರು ಗದ್ಗದಿತರಾಗಿಯೇ ತಮ್ಮ ರಾಜೀನಾಮೆಯನ್ನು ಘೋಷಣೆ ಮಾಡಿ, ತದನಂತರ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ನೀಡಿದ್ದರು.


ಆ ಬಳಿಕದಿಂದ ರಾಜ್ಯ ರಾಜಕೀಯ ಚಟುವಟಿಕೆಗಳು ಗರಿಗೆದರಿತ್ತು. ಮುಂದಿನ ಸಿಎಂ ಆಯ್ಕೆಯ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಭೆ ನಡೆದಿತ್ತು. ಸಭೆ ಬಳಿಕ ರಾಜ್ಯಕ್ಕೆ ವೀಕ್ಷಕರಾಗಿ ಧರ್ಮೇಂದ್ರ ಪ್ರಧಾನ್ ಮತ್ತು ಕಿಶನ್ ರೆಡ್ಡಿ ಅವರನ್ನು ಕಳುಹಿಸಿತ್ತು. ಇದಕ್ಕೂ ಮೊದಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಬಂದು ಹಂಗಾಮಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ತದನಂತರ ನೇರವಾಗಿ ಕ್ಯಾಪಿಟಲ್ಸ್ ಹೋಟೆಲ್ ನಲ್ಲಿಯ ಸಭೆಗೆ ಹಾಜರಾಗಿದ್ರು.


ಇನ್ನು ವೀಕ್ಷಕರಾಗಿ ಆಗಮಿಸಿದ ಧರ್ಮೇಂದ್ರ ಪ್ರಧಾನ್ ಮತ್ತು ಕಿಶನ್ ರೆಡ್ಡಿ ಸಹ ಮೊದಲಿಗೆ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನಂತರ ವೀಕ್ಷಕರ ಜೊತೆಯಲ್ಲಿಯೇ ಯಡಿಯೂರಪ್ಪ ಶಾಸಕಾಂಗ ಸಭೆಗೆ ಆಗಮಿಸಿದರು. ಕಾರ್ ನಿಂದ ಕೆಳಗೆ ಇಳಿಯುತ್ತಿದ್ದಂತೆ ಯಡಿಯೂರಪ್ಪ ವಿಜಯದ ಸಂಕೇತ ತೋರಿಸಿ ಮುಗಳ್ನಗೆ ಬೀರಿ ಸಭೆಗೆ ಹೋದರು. ಇದೀಗ ಈ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ನೂತನ ಸಿಎಂ ಎಂದು ಘೋಷಣೆ ಮಾಡಲಾಯಿತು.

 ಜಾಹೀರಾತು 

ನವಿಮುಂಬಯಿಯ ನೆರುಲು ನಿವಾಸಿ ಸಮಾಜ ಸೇವಕ ಕಾರ್ಕಳ ಮೂಲದ ಶ್ರೀ ಹರೀಶ್ ಪೂಜಾರಿಯವರಿಗೆ ಇಂಡಿಯನ್ ಏಂಪಯೈರ್ ಯುನಿವರ್ಸಿಟಿ ಮತ್ತು ಯುನಿವರ್ಶಲ್ ಡೆವಲಪ್ಮೆಂಟ್ ಕೌನ್ಸಿಲ್ ಜಂಟಿಯಾಗಿ ಹರೀಶರವರು ಮಾಡಿದ ಸಮಾಜ ಸೇವೆಯನ್ನು ಗುರುತಿಸಿ ಡಾಕ್ಟರೇಟ್ ಗೌರವ ಪ್ರಶಸ್ತಿವಿತ್ತು ಸನ್ಮಾನಿಸಿದರು.

ತಾರೀಕು. 24.07.2021 ಬೆಂಗಳೂರಿನ ಹೊಸುರುನಲ್ಲಿರುವ ಕ್ರೀಸ್ಟಲ್ ಪಂಚತಾರಾ ಹೊಟೇಲ್ನಲ್ಲಿ ನಡೆದ ವೈಭಯುಕ್ತ ಕಾರ್ಯಕ್ರಮ ದಲ್ಲಿ ಇಂಡಿಯನ್ ಏಂಪಯೈರ್ ಯುನಿವರ್ಸಿಟಿಯ ಅಧ್ಯಕ್ಷರಾದ ಡಾ. ಕೆ. ಪ್ರಭಾಕರ , ಯುನಿವರ್ಶಲ್ ಡೆವಲಪ್ಮೆಂಟ್ ಕೌನ್ಸಿಲನ ಅಧ್ಯಕ್ಷ ಡಾ. ಪೌಲ್ ಇಮನುಜಾರ್, ಮುಖ್ಯ ಅತಿಥಿಗಳಾಗಿ ಡಾ. ಜೆ ಹರಿಡೋಶ್ ಉಪಜಡ್ಜ್ ಕಾಳಹಸ್ತಿ ಸಬ್ ಕೋರ್ಟ್ , ಚಿತ್ತೂರು, ಅಂಧ್ರಪ್ರದೇಶ, ಡಾ. ಅರ್. ಶಿವಕುಮಾರ್ (IPS), ಉಪ ಪೊಲೀಸ್ ಆಯುಕ್ತ , ತಮಿಳುನಾಡು, ಡಾ. ಕೆ. ಎ. ಮನೋಹರನ್ ಮಾಜಿ ಶಾಸಕ , ಶ್ರೀಮತಿ ಪದ್ಮಾ ಸುಬಯ್ಯ ಪ್ರಸಿದ್ಧ ನ್ರತ್ಯ ಕಲಾವಿದೆ ಇವರ ಗಣ್ಯರ ಉಪಸ್ಥಿತಯಲ್ಲಿ ಗೌರವ ಪ್ರಧಾನ ಮಾಡಲಾಯಿತು.

ಶ್ರೀ ಹರೀಶ್ ಪೂಜರಿಯವರು ಮೂಲತಃ ಕಾರ್ಕಳದ ನಕ್ರೇ ಪೆತ್ತಾಜೆಯ ಶ್ರೀಮತಿ ಸಂಜೀವಿ ಪೂಜಾರಿ ಮತ್ತು ಕಾರ್ಕಳ ದಿ. ಪೆರ್ವಾಜೆ ಸುಂದರ ಪೂಜಾರಿಯವರ ದ್ವಿತೀಯ ಪುತ್ರರಾಗಿರುವರು.

ಮುಂಬಯಿ, ನವಿಮುಂಬಯಿಯ ಹಲವಾರು ಪ್ರತಿಷ್ಠಿತ ಸಂಘ-ಸಂಸ್ಥೆಗಳಲ್ಲಿ ಬೇರೆ ಬೇರೆ ಹುದ್ದೆಗಳನ್ನು ಅಲಂಕರಿಸಿ ತನ್ನಿಂದಾದ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಇತ್ತೀಚೆಗೆಯಷ್ಟೆ ಡಿ.ಪಿ. ವರ್ಲ್ಡ್ ನವಾಸೇವಾ ಇಂಟರನೇಶನಲ್ ಬಹು ಅಂತಾರಾಷ್ಟ್ರೀಯ ಕಂಪನಿಯಲ್ಲಿ ಸತತ 21 ವರ್ಷ ಉನ್ನತ ಅಧಿಕಾರಿಯಾಗಿ ಸುದೀರ್ಘ ಸೇವೆ ಮಾಡಿ ನಿವೃತ್ತಿ ಹೊಂದಿದ್ದಾರೆ.

ಶ್ರೀ ಹರೀಶ್ ಪೂಜಾರಿಯವರು , ಅಧ್ಯಕ್ಷರಾಗಿ 1.ಶ್ರೀ ನಾರಾಯಣ ಗುರು ಧರ್ಮ ಪರಿಪಾಲನೆ ಸಂಘ – ಮಾಹಾರಾಷ್ಟ್ರ, 2. ಸೆಲ್ಯೂಟ್ ತಿರಂಗ, ಕರ್ನಾಟಕ ಘಟಕ – ಮಾಹಾರಾಷ್ಟ್ರ, 3. ಬಿಜೆಪಿ ದಕ್ಷಿಣ ಭಾರತ ಘಟಕ, ನವಿಮುಂಬಯಿ, 4. ವಿಶ್ವ ಮಾನವದಿಕಾರ ಸಂಸ್ಥೆ – ನವಿಮುಂಬಯಿ, 5. ಗ್ರಾಹಕರ ಉಪಬೋಕ್ತ ಸಮಿತಿ – ನವಿಮುಂಬಯಿ, 6. ಉಪಾಧ್ಯಕ್ಷರು : ಶ್ರೀ ಶಬರಿಮಲೆ ಅಯ್ಯಪ್ಪ ಸೇವಾಸಂಗಮ್ – ನವಿಮುಂಬಯಿ, 7. ಅಡಳಿತ ಸಮಿತಿ ಸದಸ್ಯರು : ಬಿಲ್ಲವರ ಏಶೋಸಿಯೇಶನ್ ನವಿಮುಂಬಯಿ ಸ್ಥಳೀಯ ಸಮಿತಿ, 8. ಜನತಾ ಶಿಕ್ಷಣ ಸಂಘ ಮತ್ತು ಮದರ್ ಇಂಡಿಯಾ ಧರ್ಮಾರ್ಥ ರಾತ್ರಿ ಶಾಲಾ ಹಳೆ ವಿದ್ಯಾರ್ಥಿ ಸಂಘ – ಮುಂಬಯಿ, 9. ರಂಗಭೂಮಿ ಫೈನ ಅರ್ಟ್ಸ್ – ನವಿಮುಂಬಯಿ, ಹಾಗೂ ಹತ್ತು ಹಲವಾರು ಸಂಘ- ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಇವರು ಕ್ಯಾಂಟಿನಿನಲ್ಲಿ ಕೆಲಸ ಮಾಡಿ ಮದರ್ ಇಂಡಿಯಾ ಧರ್ಮಾರ್ಥಾ ರಾತ್ರಿ ಶಾಲಾ ಹಳೆ ಕಲಿತವರಾಗಿದ್ದಾರೆ. ಇಂತಹ ಸರಳ ಸಜ್ಜನ ಸಮಾಜ ಸೇವಕ ವ್ಯಕ್ತಿತ್ವಕ್ಕೆ ಡಾಕ್ಟರೇಟ್ ಪದವಿ ದೊರಕಿರುವುದು ನಿಜಕ್ಕೂ ಅಭಿನಂದನಾರ್ಹ ಎಂದು ಇವರನ್ನು ಬೆಂಗಳೂರಿನಲ್ಲಿ ಬೇಟಿಯಾದ ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಅಧ್ಯಕ್ಷರಾದ ಡಾ. ಎಲ್ ಕೆ ಸುವರ್ಣಹಾಗೂ ಮುರಳಿ,ಹಿಂದುವಾದಿ ಹನಿ ಹಿಂದೂಸ್ತಾನಿ ಅವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.


 ಜಾಹೀರಾತು 
ಮಂಗಳೂರು:ಮಂಗಳೂರಿನ ಯೆನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಂಡಿಸ್ ಅವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.


ಆಸ್ಪತ್ರೆಗೆ ಭೇಟಿ ನೀಡಿದ ವೀರೇಂದ್ರ ಹೆಗ್ಗಡೆ ಅವರು ಆಸ್ಕರ್ ಫೆರ್ನಾಂಡಿಸ್ ಅವರಿಗೆ ಧರ್ಮಸ್ಥಳ ಮಂಜುನಾಥ ದೇವರ ಪ್ರಸಾದವನ್ನು ನೀಡಿ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದರು. ಬಳಿಕ ಕುಟುಂಬ ವರ್ಗದವರು ಮತ್ತು ವೈದ್ಯರೊಂದಿಗೆ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು. 

ಈ ಸಂದರ್ಭದಲ್ಲಿ ಮಾತನಾಡಿದ ವೀರೇಂದ್ರ ಹೆಗ್ಗಡೆ ಅವರು, ಆಸ್ಕರ್ ಫೆರ್ನಾಂಡಿಸ್ ರವರು ಇಂದಿರಾಗಾಂಧಿ, ರಾಜೀವ್ ಗಾಂಧಿಯವರಿಗೆ ಆಪ್ತರಾಗಿದ್ದರು. ರಾಜ್ಯಕ್ಕೆ ಬಹಳಷ್ಟು ಸೇವೆ ಮಾಡಿದ್ದಾರೆ. ಅವರಿಗೆ ಧರ್ಮಸ್ಥಳ ಮಂಜುನಾಥ ದೇವರ ಪ್ರಸಾದ ಹಾಕಿ, ಶುಭಹಾರೈಸಿ ಬಂದಿದ್ದೇನೆ. ವೈದ್ಯರ ವರದಿ ಪ್ರಕಾರ, ಅವರ ಮೆದುಳು ಇನ್ನೂ ಚುರುಕಾಗಿದೆ. ಪಕ್ಷಾತೀತವಾಗಿ ಕರ್ನಾಟಕ ಹಾಗೂ ತುಳುನಾಡಿನ ಜನತೆ ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಿದ್ದೇವೆ ಅವರು ಶೀಘ್ರ ಗುಣಮುಖರಾಗಲಿ ಎಂದು ವೀರೇಂದ್ರ ಹೆಗ್ಗಡೆ ಹಾರೈಸಿದರು.

 ಜಾಹೀರಾತು 
MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget