"ಕಾರ್ಕಳವನ್ನು ಅಭಿವೃದಿಯಲ್ಲಿ ರಾಜ್ಯಕ್ಕೆ ಮಾದರಿಯನ್ನಾಗಿಸಿದ ಸುನೀಲ್ ಕುಮಾರ್ ರವರಿಗೆ ಸಂಪುಟದಲ್ಲಿ ಪ್ರಮುಖ ಖಾತೆ ಕೊಟ್ಟರೆ ಸಂಪುಟದ ಘನತೆ ಇನ್ನಷ್ಟು ಹೆಚ್ಚಲಿದೆ"-ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ ಅಭಿಪ್ರಾಯ-Times of karkala

 "ನಮ್ಮ ಶಾಸಕರಾದ  ಸುನೀಲ್ ಕುಮಾರ್  ಕುಮಾರವರು ಸಂಘಪರಿವಾರ ಹಿನ್ನೆಲೆಯಿಂದ ಬಂದು ಕಾಂಗ್ರೆಸ್ ಭದ್ರ ಕೋಟೆಯಾಗಿದ್ದ ಕಾರ್ಕಳದಲ್ಲಿ ಬಿಜೆಪಿ ಬಾವುಟ ಹಾರಿಸಿದ್ದಲ್ಲದೆ,ಅಭಿವೃದಿಯಲ್ಲಿ ರಾಜ್ಯಕ್ಕೆ ಮಾದರಿ ಎಂಬ ರೀತಿಯಲ್ಲಿ ಕಾರ್ಕಳವನ್ನು ಅಭಿವೃದ್ಧಿಗೊಳಿಸಿದ್ದಾರೆ"

"ಸುನೀಲ್ ಕುಮಾರ್ ರವರು ಅಭಿವೃದ್ಧಿ ಮತ್ತು ಹಿಂದುತ್ವದ ವಿಚಾರದಲ್ಲಿ ಎಂದಿಗೂ ರಾಜಿಯಾಗದೆ   ನಿರಂತರ ಮೌಲ್ಯಾಧಾರಿತ ರಾಜಕೀಯ ಮಾಡಿ ರಾಜ್ಯಕ್ಕೆ ಮಾದರಿ ಆದವರು.ಅಲ್ಲದೆ ವಿಧಾನಸಭೆಯಲ್ಲೂ ವಿರೋಧ -ಆಡಳಿತ ಪಕ್ಷದ ಮುಖ್ಯ ಸಚೇತಕರಾಗಿಯೂ ದುಡಿದ ಅನುಭವಿ,ಕ್ರಿಯಾಶೀಲ ವ್ಯಕ್ತಿತ್ವದವರು."


"ಜನರ ಗಂಭೀರ ಸಮಸ್ಯೆಗಳ ಬಗ್ಗೆ ಹಲವಾರು ಬಾರಿ  ವಿಧಾನಸಭೆಯಲ್ಲಿ ವಿಷಯ ಮಂಡನೆಯಲ್ಲೂ ಗಮನ ಸೆಳದವರು.ಅಲ್ಲದೆ ಎಂದು ವ್ಯಕ್ತಿಗತ ಜಾತಿ ರಾಜಕೀಯ ಮಾಡಿದವರಲ್ಲ.ರಾಜ್ಯಾದ್ಯಂತ ಯುವಕರಿಗೆ ಸ್ಫೂರ್ತಿ ತುಂಬಿ ತಳಮಟ್ಟದಲ್ಲಿ ಸಂಘಟನೆ ಮಾಡುವ ಸಂಘಟನಾ ಚತುರ.ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು   ಈ ಎಲ್ಲಾ ಅಂಶಗಳನ್ನು ಪರಿಗಣಿಸಿ  ಸಂಪುಟದಲ್ಲಿ ಪ್ರಮುಖ ಖಾತೆ ಕೊಟ್ಟರೆ ಸಂಪುಟದ ಘನತೆ ಹೆಚ್ಚವುದರಲ್ಲಿ ಸಂಶಯ ಇಲ್ಲ ಎಂದು ಕಾರ್ಕಳ  ಬಿಜೆಪಿ ಕ್ಷೇತ್ರಾಧ್ಯಕ್ಷ  ಮಹಾವೀರ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 ಜಾಹೀರಾತು Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget