ಕಾರ್ಕಳ ತಾಲೂಕಿನ ಶೈಕ್ಷಣಿಕ ಅಭಿವೃದ್ಧಿಯ ಹರಿಕಾರ ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಎಸ್ ಶಶಿಧರ್ ಸರ್ ........! ✍🏻ಬರಹ:-ಪ್ರಭಾಕರ ಶೆಟ್ಟಿ ಕೊಂಡಳ್ಳಿ-Times of karkala

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಶೈಕ್ಷಣಿಕ ಅಭಿವೃದ್ಧಿಯ ಹರಿಕಾರ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಎಸ್ ಶಶಿಧರ್ ಸರ್ ........!


ಜಿ ಎಸ್ ಶಶಿಧರ್


ಬರಹ:-ಪ್ರಭಾಕರ ಶೆಟ್ಟಿ ಕೊಂಡಳ್ಳಿ

'ಸಿದ್ಧನೆಂದರೆ ಯಾರು? ಮನವ ನೋಯಿಸದಾತ,ನೂರು ನೋವನು ಸಹಿಸಿ ನಗುತಲಿರುವಾತ,ಒಂದಾದ ನಡೆನುಡಿಗೆ ದಿಕ್ಕುದೆಸೆ ತೋರ್ವಾತ,ಪರಮಗುರು ಆ ಸಾಧು-ಮುದ್ದುರಾಮ ಎಂಬ ಕವಿ ಕೆ.ಶಿವಪ್ಪನವರ ನುಡಿಗೆ ಮಾದರಿಯಾಗಿ ಆಕರ್ಷಕ ವ್ಯಕ್ತಿತ್ವ ಮತ್ತು ಅಪೂರ್ವವಾದ ಕರ್ತವ್ಯ ನಿರ್ವಹಣೆಯಿಂದ ಕಾರ್ಕಳದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ತಾವು ಜಾರಿಗೆ ತಂದ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೆ ತಂದು ಮಾಡಿದ ಸಾಧನೆ,ಗಳಿಸಿದ ಕೀರ್ತಿ ಹಾಗೂ ಸಮಸ್ತ ಶಿಕ್ಷಕರ ಪ್ರೀತಿ. ಬಹಳ ಮುಖ್ಯವಾಗಿ ಶಿಕ್ಷಕರನ್ನು,ಅಧಿಕಾರಿಗಳನ್ನು,ಮತ್ತು ಜನಪ್ರತಿನಿಧಿಗಳನ್ನು ಹೀಗೆ ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಸುವ ರೀತಿ ಕಾರ್ಕಳದ ಶೈಕ್ಷಣಿಕ ಇತಿಹಾಸದಲ್ಲಿ ಸ್ವರ್ಣಾಕ್ಷರದಲ್ಲಿ ಬರೆದಿಡುವಂತಹದ್ದು.ದಣಿವರಿಯದೆ ತಾವು  ಕೆಲಸ ಮಾಡುವ ರೀತಿ ಮತ್ತು ನೀತಿ ಇತರರಿಗೆ ಮಾದರಿ.

ಹತ್ತನೆ ತರಗತಿಯ ಫಲಿಶಾಂಶ ವೃದ್ದಿಗಾಗಿ ರೂಪಿಸಿದ 'ಮಿಷನ್ ಹಡ್ರಂಡ್ 'ಮೂಲಕ ಮನೆಮಾತಾದ ತಾವು ತಾಲೂಕಿನ ಶೈಕ್ಷಣಿಕ ಪ್ರಗತಿಗಾಗಿ ತಂದ 'ಗುಬ್ಬಚ್ಚಿ ಸ್ಪೀಕಿಂಗ್' 'ಕುಟೀರ ಶಿಕ್ಷಣ' ಮಿಷನ್ ಕ್ವಾಲಿಟಿ' ವರ್ಲಿ ಶಾಲೆಗೆ ಬರಲಿ' 'ಸ್ವಚ್ಛತೆಗಾಗಿ 'ಗುರುವಾರದ ವೃತ'   ಇ ಮ್ಯಾಗಜೀನ್ 'ಸ್ವರ್ಣ ತಿರುಳು' 'ಎನ್ ಎಮ್ ಎಮ್ ಎಸ್' ಹಾಗೂ 'ಎನ್ ಟಿ ಎಸ್ ಇ' ಯ ಫಲಿತಾಂಶ ವೃದ್ಧಿಗಾಗಿ 'ಸ್ವರ್ಣ ಪ್ರತಿಭಾನ್ವೇಷಣೆ' ಇದಲ್ಲದೆ ಶಿಕ್ಷಕರ ವೃತ್ತಿ ಗೌರವವನ್ನು ಹೆಚ್ಚಿಸಲು ತಂದ 'ಗುರುಸೇವೆ' ಮತ್ತು 'ಗುರುಭ್ಯೋನಮಃ' ಪ್ರತಿಭಾವಂತ ಶಿಕ್ಷಕರನ್ನು ಶೈಕ್ಷಣಿಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ರೂಪಿಸಿದ 'ಕಲರ್ಸ್ ಡ್ರೀಮ್ಸ್ ' 'ಟೆಕ್ ಟೀಂ' 'ಪೆನ್ ಟೀಂ'  'ಹಸಿರು ಕಾರ್ಲ' 'ಕ್ರೀಡಾ ಕಾರ್ಲ'  ಹೀಗೆ ತಾವು ರೂಪಿಸಿದ ಹತ್ತು ಹಲವು ವಿನೂತನ  ಯೋಚನೆ  ಯೋಜನೆಗಳು  ಅನನ್ಯ ಹಾಗೂ ಅನುಪಮ.

ಕಾಲಮರಳಿನ ಮೇಲೆ ನಡೆದುಹೋದವರೆಲ್ಲ ತಮ್ಮ ಹೆಜ್ಜೆಯ ಗುರುತ ಬಿಟ್ಟರೇನಿಲ್ಲ,ಇಲ್ಲೊಬ್ಬರಲ್ಲೊಬ್ಬರಿರಬಹುದು ಹಿರಿತನಕೆ ಮಾಹಿತಿ ಬಲು ಅಪರೂಪ' ಎಂಬ ಕವಿವಾಣಿಯಂತೆ ಕಾರ್ಕಳದ ಶಿಕ್ಷಣಾಧಿಕಾರಿಯಾಗಿ ಬಂದ ಎರಡು ವರ್ಷದಲ್ಲಿಯೆ  ಅಳಿಸಲಾಗದ ಸಾಧನೆಯ ಹೆಜ್ಜೆಯ ಗುರುತನ್ನು ತಾವು ಮೂಡಿಸಿರುವಿರಿ.

ಪ್ರಭಾಕರ ಶೆಟ್ಟಿ ಕೊಂಡಳ್ಳಿ

"ಗರ್ವ ಪಡದುಪಕಾರಿ, ದರ್ಪ ಬಿಟ್ಟಧಿಕಾರಿ| ನಿರ್ವಿಕಾರದ ನಯನದಿಂ ನೋಳ್ಪುದಾರಿ|| ಸರ್ವಧರ್ಮಾಧಿಕಾರಿ ನಿರ್ವಾಣ ಸಂಚಾರಿ| ಉರ್ವರೆಗೆ ಗುರುವವನು-ಮಂಕುತಿಮ್ಮ ಎಂಬ ಡಿ‌.ವಿ.ಜಿ ಯವರ  ಕಗ್ಗದ ಸಾಲುಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿ   ತಮ್ಮ ಸರಳ ಸೌಜನ್ಯದ ನಿರಾಡಂಬರ ವ್ಯಕ್ತಿತ್ವದಿಂದ ಎಲ್ಲರ ಪ್ರೀತಿ ಮತ್ತು ಗೌರವಾದರಗಳಿಗೆ ಪಾತ್ರರಾಗಿರುವಿರಿ. ಕಲಾ ಸೊಬಗಿನಿಂದ ಕಂಗೊಳಿಸುತ್ತಿರುವ ನಮ್ಮ ಶಿಕ್ಷಣ ಇಲಾಖೆಯ  ಕಛೇರಿ "ಅಕ್ಷರ ಭವನ" ತಮ್ಮ ಕರ್ತವ್ಯ ನಿಷ್ಠೆ ಹಾಗೂ ಸೃಜನಶೀಲತೆ ಹಿಡಿದ ಕೈಗನ್ನಡಿಯಂತಿದೆ.ದಕ್ಷತೆ  ಮತ್ತು ಪ್ರಮಾಣಿಕತೆಗೆ ಹೆಸರಾಗಿರುವ ತಮ್ಮ ಕೀರ್ತಿ ಇನ್ನಷ್ಟು ಎತ್ತರಕ್ಕೇರಲಿ.ನಿಮ್ಮ ಎಲ್ಲಾ ಉದಾತ್ತ ಕಾರ್ಯಗಳು ಶಿಕಾರಿಪುರದಲ್ಲಿಯೂ ಮುಂದುವರಿಯಲಿ.ನೀವು ತೋರಿದ ಪ್ರೀತಿ ಮತ್ತು ಉದಾತ್ತ ನೀತಿ ನಮ್ಮ ಹೃದಯದಲ್ಲಿ ಸದಾ ಹಸಿರಾಗಿರುತ್ತದೆ ಸರ್ ನೀವು ಮರೆತರೂ ನಾವು ಎಂದಿಗೂ ಮರೆಯಲಾರೆವು ಸರ್ ಅನಿವಾರ್ಯ ಕಾರಣದಿಂದ ಶಿಕಾರಪುರದ ಶಿಕ್ಷಣಾಧಿಕಾರಯಾಗಿ ವರ್ಗಾವಣೆಗೊಂಡಿರುವ ತಮ್ಮನ್ನು ನಿಮ್ನ ಅನನ್ಯಸಾಧನೆಗಳನ್ನು ನೆನಪಿಸಿಕೊಳ್ಳುತ್ತಾ ಅತ್ಯಂತ ಬೇಸರ ಮತ್ತು ನೋವಿನಿಂದ ಬೀಳ್ಕೊಡುತ್ತಿದ್ದೇವೆ ಸರ್‌ ಭಗವಂತನು ತಮಗೆ ಮತ್ತು ತಮ್ಮ ಕುಟುಂಬಕ್ಕೆ ಸಕಲ ಭಾಗ್ಯಳನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇವೆ.

-ಪ್ರಭಾಕರ ಶೆಟ್ಟಿ ಕೊಂಡಳ್ಳಿ.ಕಾರ್ಯದರ್ಶಿ ,ಪ್ರೌಢಶಾಲಾ ಸಹ ಶಿಕ್ಷಕರ  ಸಂಘ ಉಡುಪಿ ಜಿಲ್ಲೆ.ಅಧ್ಯಕ್ಷರು ಕಸಾಪ ಕಾರ್ಕಳ ತಾಲೂಕು ಘಟಕ.

 ಜಾಹೀರಾತು 

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget