"ಸಮಾಜದ ಕೌಟುಂಬಿಕ ದೃಡತೆಗೆ ರೋಟರಿ ಆನ್ಸ್ ಕ್ಲಬ್ ಸಹಕಾರಿಯಾಗಿದೆ" - ಆನ್ಸ್ ಪಿಹೆಚ್ಎಫ್ ವೃಂದಾ ಹರಿಪ್ರಕಾಶ್ ಶೆಟ್ಟಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ - ಆನ್ಸ್ ಕ್ಲಬ್ ಪದಗ್ರಹಣ ಸಮಾರಂಭ-Times of karkala

"ಸಮಾಜದ ಕೌಟುಂಬಿಕ ದೃಡತೆಗೆ ರೋಟರಿ ಆನ್ಸ್ ಕ್ಲಬ್ ಸಹಕಾರಿಯಾಗಿದೆ" - ಆನ್ಸ್ ಪಿಹೆಚ್ಎಫ್ ವೃಂದಾ ಹರಿಪ್ರಕಾಶ್ ಶೆಟ್ಟಿ


ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ - ಆನ್ಸ್ ಕ್ಲಬ್ ಪದಗ್ರಹಣ ಸಮಾರಂಭ

ರೋಟರಿಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ಆನ್ಸ್ ಕ್ಲಬ್ಬಿನ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಪ್ರದಾನ ಸಮಾರಂಭ ನಡೆಯಿತು.ಈ ಸಂಧರ್ಭ ಪದಪ್ರದಾನ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿದ ಆನ್ಸ್ ಪಿಹೆಚ್ಎಫ್ ವೃಂದಾ ಹರಿಪ್ರಕಾಶ್ ಶೆಟ್ಟಿ ಸಮಾಜದ ಕೌಟುಂಬಿಕ ದೃಡತೆಗೆ ರೋಟರಿ ಆನ್ಸ್ ಕ್ಲಬ್ ಸಹಕಾರಿಯಾಗಿದೆ ಎಂದು ಹೇಳಿದರು.


ರೋಟರಿ ಕ್ಲಬ್ ಅಧ್ಯಕ್ಷರಾದ ರೊ.ಪ್ರಕಾಶ್ ಪೈ ಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಆನ್ಸ್  ಮೇಘಶ್ರೀ ಪ್ರಶಾಂತ್ ಜೈನ್ ಸತತವಾಗಿ ದ್ವಿತೀಯ ವರ್ಷಕ್ಕೆ ಕ್ಲಬ್ಬಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಆನ್ಸ್  ಲಕ್ಷ್ಮಿ ಹೆಗ್ಡೆ ಯವರು ಕಾರ್ಯದರ್ಶಿಯಾಗಿ ಪ್ರಭಾರ ವಹಿಸಿಕೊಂಡರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ 'ಗ್ಲೋಬಲ್ ಗ್ರಾಂಟ್ ಯೋಜನೆ'ಗೆ ಮೇಜರ್ ಡೋನರ್ ಆಗಿರುವ ಶ್ರೀಮತಿ ಜ್ಯೋತಿ ಪೈ ಹಾಗೂ  ಜಗನಾಥ ಪೈ ಇವರಿಗೆ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಪಿಹೆಚ್ಎಫ್ ಪದಕ ಮತ್ತು ಪ್ರಶಸ್ತಿ ಪತ್ರವನ್ನು  ರೊ.ಪಿಡಿಜಿ .ಡಾ.ಭರತೇಶ್ ಆದಿರಾಜ್ ರವರು ನೀಡಿ ಗೌರವಿಸಿದರು.ದಾನಿಗಳಾದ ಶ್ರೀ ಜಗದೀಶ್ ಹೆಗ್ಡಯವರನ್ನು ಸಹ ಗೌರವಿಸಲಾಯಿತು. ಪಿಯುಸಿ ವಾರ್ಷಿಕ ಪರೀಕ್ಷೆ ಯಲ್ಲಿ  ಅತ್ಯಧಿಕ   ಅಂಕ ಪಡೆದ ರೋಟರಿ ಕುಟುಂಬ ಸದಸ್ಯರನ್ನು ಗುರುತಿಸಲಾಯಿತು.  

ರೊ. ಗೀತಾ ರಾವ್ ಅತಿಥಿಗಳನ್ನು ಸ್ವಾಗತಿಸಿದರು.ಈ ಸಮಾರಂಭದಲ್ಲಿ ವಲಯ ಸೇನಾನಿ ರೊ.ಸುರೇಂದ್ರ ನಾಯಕ್, ನಿಕಟಪೂರ್ವ ಅಧ್ಯಕ್ಷರಾದ ರೊ.ಪ್ರಶಾಂತ್ ಬೆಳಿರಾಯ, ಕ್ಲಬ್ಬಿನ ರೋಟರಿ , ಆನ್ಸ್ ,ಜೋನ್ ಮತ್ತು ಆನೆಟ್ ಸದಸ್ಯರು ಭಾಗವಹಿಸಿದರು. ಆನ್ಸ್ ಲಕ್ಷ್ಮಿ ಹೆಗ್ಡೆ ವಂದನಾರ್ಪಣೆ ಮಾಡಿದರು.ರೊ.ಸುರೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

 ಜಾಹೀರಾತು 



Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget