ರೆಂಜಾಳ:ಮಸೀದಿಯ ಕಮಿಟಿಯವರೊಂದಿಗೆ ತಕರಾರು,ಹಲ್ಲೆ:ದೂರು ಪ್ರತಿದೂರು ದಾಖಲು-Times of karkala

ರೆಂಜಾಳ ಮಸೀದಿಯ ಕಮಿಟಿಯೊಂದಿಗೆ ವಯಕ್ತಿಕ ತಕರಾರಿನ ಕಾರಣದಿಂದ  ಅವಾಚ್ಯ ಶಬ್ದದಿಂದ ಬೈದು  ಹಲ್ಲೆ ನಡೆಸಿದ ಘಟನೆ ನಡೆದಿದೆ.ಈ ಕುರಿತಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿದೆ.ಕಾರ್ಕಳ ತಾಲೂಕು ರೆಂಜಾಳ ಗ್ರಾಮದ ನಿವಾಸಿ ದೂರುದಾರರಾದ ರಶೀದಾರವರ ಮನೆಯವರಿಗೂ ರೆಂಜಾಳ ಮಸೀದಿಯ ಕಮಿಟಿಯವರಿಗೂ ವೈಯಕ್ತಿಕ ಕಾರಣದಿಂದ ತಕರಾರು ಇತ್ತು. ಇದೇ ಕಾರಣದಿಂದ ದಿನಾಂಕ ಜುಲೈ 04 ರಂದು ರಶೀದಾ ತಂದೆ ಇಬ್ರಾಹಿಂ ಮಸೀದಿಯ ಬಳಿ ನಡೆದುಕೊಂಡು ಹೋಗುತ್ತಿದ್ದಾಗ  ಮಸೀದಿಯ ಅಧ್ಯಕ್ಷರಾದ ಮೈಯುದ್ದೀನ್ ಎಂಬುವವರು  ಕೈಯಿಂದ ಹಲ್ಲೆ ನಡೆಸಿದ್ದಾರೆ.ಕೂಡಲೇ ರಶೀದಾ ಗಂಡ ಅಲ್ಲಿಗೆ ತೆರಳಿದ್ದು ಜೋರಾಗಿ ಬೊಬ್ಬೆ ಕೇಳಿದಾಗ ರಶೀದಾ ಮನೆಯವರೂ ಸ್ಥಳಕ್ಕೆ ಓಡಿ ಬಂದಿದ್ದಾರೆ.

ಆ ಸಮಯ ಮೈಯುದ್ದೀನ್ ರವರು ಹಂಝಾ,ಇಕ್ಬಾಲ್, ಅಬೂಬಕರ್, ಇಕ್ಬಾಲ್, ಮುಕ್ರಿ ಹಂಜಾ, ಸಿರಾಜ್ ಸೇರಿ ರಶೀದಾ ತಂದೆ ಇಬ್ರಾಹಿಂ ಹಾಗೂ ಗಂಡ ಶಬ್ಬೀರ್ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು  ಕೈಯಿಂದ ಹಲ್ಲೆ ಮಾಡುತ್ತಿದ್ದರು.


ಈ ಕುರಿತಂತೆ  ರಶೀದಾರವರು ಕಾರ್ಕಳ ಗ್ರಾಮಾಂತರ ಫೋಲಿಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


ಪ್ರತಿದೂರು ದಾಖಲು:

ಮಸೀದಿಯ ಅಧ್ಯಕ್ಷ  ಮೈಯುದ್ದೀನ್ ಪ್ರತಿದೂರು ದಾಖಲಿಸಿದ್ದು,ಇಬ್ರಾಹಿಂ ಮೈಮುದ್ದೀನ್ ಮನೆಗೆ  ಮನೆಗೆ ಹೋಗಿ ಗಲಾಟೆ ಮಾಡಿ ಮನೆಯಲ್ಲಿ ಇದ್ದ ಹೆಂಗಸರಿಗೆ ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡಿದ್ದು ಅಲ್ಲದೆ ಸಂಜೆ ಮಸೀದಿಯ ಬಳಿ ನಡೆದುಕೊಂಡು ಹೋಗುತ್ತಿದ್ದಾಗ  ಇಬ್ರಾಹಿಂ ಹಾಗೂ ಶಬ್ಬೀರ್ ಇವರನ್ನು  ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.ಕಾರ್ಕಳ ಗ್ರಾಮಾಂತರ ಫೋಲಿಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸ್ ವರದಿ:

ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ರಶೀದಾ (27), ತಂದೆ: ಶಬ್ಬೀರ್, ವಾಸ: ಮಹಿಮೂನಾ ಮಂಜಿಲ್ , ಮಸೀದಿ ಹತ್ತಿರ ರೆಂಜಾಳ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರು ಹಾಗೂ ಅವರ ಮನೆಯವರಿಗೂ ಮತ್ತು ರೆಂಜಾಳ ಮಸೀದಿಯ ಕಮಿಟಿಯವರಿಗೂ ವೈಯಕ್ತಿಕ ಕಾರಣದಿಂದ ತಕರಾರು ಇದ್ದು ಇದೇ ಕಾರಣದಿಂದ ದಿನಾಂಕ 04/07/2021 ರಂದು 16:30 ಗಂಟೆಗೆ  ಕಾರ್ಕಳ ತಾಲೂಕು ರೆಂಜಾಳ ಗ್ರಾಮದ ರೆಂಜಾಳ ಮಸೀದಿ ಬಳಿಯ ರಸ್ತೆಯಲ್ಲಿ ಪಿರ್ಯಾದಿದಾರರ ತಂದೆ  ಇಬ್ರಾಹಿಂ ರವರಿಗೆ ಮಸೀದಿಯ ಅಧ್ಯಕ್ಷರಾದ ಮೈಯುದ್ದೀನ್ ಎಂಬುವವರು ಕೈಯಿಂದ ಹಲ್ಲೆ ಮಾಡುತ್ತಿರುವಾಗ ಪಿರ್ಯಾದಿದಾರರರು ನೋಡಿ ಬರಲು ತನ್ನ ಗಂಡ ಶಬ್ಬೀರ್ ರವರನ್ನು ಕಳುಹಿಸಿಕೊಟ್ಟಿದ್ದು, ಜೋರಾಗಿ ಬೊಬ್ಬೆ ಕೇಳಿದಾಗ ಪಿರ್ಯಾದಿದಾರರು ಹಾಗೂ ಅವರ ಮನೆಯವರು ಸ್ಥಳಕ್ಕೆ ಓಡಿ ಹೋಗಿದ್ದು ಆ ಸಮಯ ಮೈಯುದ್ದೀನ್ ರವರು ಶಬ್ಬೀರ್ ರವರಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು ಆ ಸಮಯ ಮೈಯುದ್ದೀನ್, ಹಂಝಾ,ಇಕ್ಬಾಲ್, ಅಬೂಬಕರ್, ಇಕ್ಬಾಲ್, ಮುಕ್ರಿ ಹಂಜಾ, ಸಿರಾಜ್ ಸೇರಿ ಪಿರ್ಯಾದಿದಾರರ ತಂದೆ ಇಬ್ರಾಹಿಂ ಹಾಗೂ ಗಂಡ ಶಬ್ಬೀರ್ ರವರಿಗೆ ಕೈಯಿಂದ ಹಲ್ಲೆ ಮಾಡುತ್ತಿರುವಾಗ ಪಿರ್ಯಾದಿದಾರರು ತಪ್ಪಿಸಲು ಹೋದಾಗ ಆರೋಪಿತರುಗಳು ಪಿರ್ಯಾದಾರರಿಗೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 80/2021 ಕಲಂ: 143,147, 323, 504, 354 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಾರ್ಕಳ: ಪಿರ್ಯಾದಿದಾರರಾದ ಮೊಹಿಯುದ್ದೀನ್ (31), ತಂದೆ: ಹುಸೇನ್, ವಾಸ: ಮಸೀದಿ ಹತ್ತಿರ, ರೆಂಜಾಳ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರು ರೆಂಜಾಳ ಮಸೀದಿಯ ಅಧ್ಯಕ್ಷರಾಗಿದ್ದು, ರೆಂಜಾಳ ಮಸೀದಿಯ ಕಮಿಟಿಯವರಿಗೂ ಹಾಗೂ ಆರೋಪಿತರಾದ 1.ಇಬ್ರಾಹಿಂ, 2.ಶಬ್ಬೀರ್ ಇವರಿಗೂ ವೈಯಕ್ತಿಕ ಕಾರಣದಿಂದ ತಕರಾರು ಇದ್ದು ಇದೇ ಕಾರಣದಿಂದ ದಿನಾಂಕ 04/07/2021 ರಂದು 12:00 ಗಂಟೆಗೆ ಆರೋಪಿ ಇಬ್ರಾಹಿಂ ಪಿರ್ಯಾದಿದಾರರ ಮನೆಗೆ ಹೋಗಿ ಗಲಾಟೆ ಮಾಡಿ ಮನೆಯಲ್ಲಿ ಇದ್ದ ಹೆಂಗಸರಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿದ್ದು ಸಂಜೆ 04:30 ಗಂಟೆಗೆ ಪಿರ್ಯಾದಿದಾರರು ಕಾರ್ಕಳ ತಾಲೂಕು ರೆಂಜಾಳ ಗ್ರಾಮದ ರೆಂಜಾಳ ಮಸೀದಿ ಬಳಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆರೋಪಿತರುಗಳಾದ ಇಬ್ರಾಹಿಂ ಹಾಗೂ ಶಬ್ಬೀರ್ ರವರುಗಳು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 81/2021 ಕಲಂ: 341,323,504,506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಜಾಹೀರಾತು 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget