ಕಾರ್ಕಳ:"ಸಂಕಷ್ಟದ ನಡುವೆಯೂ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ‌ಮಾಡಿದ ತೃಪ್ತಿ ಇದೆ"-ಪುರಂದರ ಹೆಗ್ಡೆ-Times of karkala

ಕಾರ್ಕಳ:ಸಾರ್ವಜನಿಕರು ತಮ್ಮ ಸಮಸ್ಯೆಗಳೊಂದಿಗೆ ನಮ್ಮ ಬಳಿ ಬಂದಾಗ ಆ ಎಲ್ಲಾ ಸಮಸ್ಯೆಗೆ  ಪರಿಹಾರ‌ ಕಂಡುಕೊಳ್ಳಲು  ಸಾದ್ಯವಾಗುವುದಿಲ್ಲ‌ ಎನ್ನುವ ನೋವು ನನಗಿದೆ, ಆದರೆ ಬರವಸೆ ಇಟ್ಟು ಬಂದವರ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸಿ ಸ್ಪಂದಿಸುವ ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ, ಎಂದು ಸೇವಾ ಭರ್ತಿಹೊಂದಿ ವರ್ಗಾವಣೆಗೊಂಡ ಕಾರ್ಕಳ ತಹಶಿಲ್ದಾರರಾದ ಪುರಂದರ ಹೆಗ್ಡೆ ಹೇಳಿದರು. 


ಅವರು  ತಮ್ಮ ‌ಕಛೇರಿಯಲ್ಲಿ ಪುರಸಭೆಯ ವಿಪಕ್ಷ ಸದಸ್ಯರು ಹಮ್ಮಿಕೊಂಡ ಗೌರವಾರ್ಪಣೆ ಮತ್ತು ಬೀಳ್ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿದರು.ಕೋವಿಡ್ ಸಂಕಷ್ಟದ ‌ಸಂದರ್ಭದಲ್ಲಿ ಸಾರ್ವಜನಿಕರ ಗರಿಷ್ಠ ಸೇವೆ ಸಲ್ಲಿಸಿದ್ದೇವೆ ಎನ್ನುವ ತೃಪ್ತಿ ಇದೆ.ಕಾರ್ಕಳದ ಜನರು ಶಾಂತಿ ಪ್ರಿಯರು ನಮ್ಮ ಸೇವೆಯಲ್ಲಿ ಸಹಕರಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ರು ಸಾರ್ವಜನಿಕರನ್ನು ಎಂದೂ ಮರೆಯಲು ಸಾದ್ಯವಿಲ್ಲ ಎಂದರು.

ಪುರಸಭಾ ಸದಸ್ಯರಾದ ಶುಭದರಾವ್, ಆಶ್ಫಕ್ ಅಹ್ಮದ್, ಪ್ರತಿಮಾ ರಾಣೆ ಅಭಿನಂದನಾ ಮಾತುಗಳನ್ನು ಆಡಿ ತಮ್ಮ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು, ಈ ವೇಳೆಯಲ್ಲಿ ಅಧಿಕಾರ ಸ್ವೀಕರಿಸಲು ಆಗಮಿಸಿದ ನೂತನ ತಹಶಿಲ್ದಾರರಾದ  ಶ್ರೀ ಪ್ರಕಾಶ್ ಮಾರಬಳ್ಳಿಯವರನ್ನು ಪುರಸಭಾ ಸದಸ್ಯರು ಹೂ‌ ನೀಡಿ ಸ್ವಾಗತಿಸಿದರು. 

ಈ ಸಂದರ್ಬದಲ್ಲಿ ಪುರಸಭೆಯ ಸದಸ್ಯರಾದ  ಸೀತಾರಾಮ್, ರೆಹಮತ್ ಶೇಖ್, ಪ್ರಭಾ  ಕಿಶೋರ್, ಸೋಮನಾಥ್, ಕಂದಾಯ ನಿರೀಕ್ಷಕರಾದ ಶಿವಪ್ರಸಾದ್, ಗ್ರಾಮಕಾರಣಿಕ ರಿಯಾಜ್, ಸುಧಾಕರ್ ಕೋಟ್ಯನ್, ಹಾಗೂ ಕಚೇರಿ‌ ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.ಶುಭದರಾವ್ ಸ್ವಾಗತಿಸಿ, ದನ್ಯವಾದವಿತ್ತರು.


 ಜಾಹೀರಾತು 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget