"ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ತುಳುನಾಡ ಸಂಸ್ಕೃತಿಗೆ ಅಪಮಾನವಾಗಿದೆ"-ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ಆಕ್ರೋಶ-Times of karkala

ಹೆಬ್ರಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ತುಳುನಾಡ ಸಂಸ್ಕೃತಿಗೆ ಅಪಮಾನವಾಗಿದೆ. 
ದೈವಸ್ಥಾನದಲ್ಲಿ ಇರಬೇಕಾದ ಪವಿತ್ರ ಕಡ್ಸಲೆಯನ್ನು ತನ್ನ ಪಕ್ಷದ ನಾಯಕನ ಮನವೊಲಿಸಲು ಬಳಸಿರುವುದು ಅಕ್ಷಮ್ಯ ಅಪರಾಧ, ಹಿಂದೂ ಧರ್ಮ ಹಿಂದೂ ಸಂಸ್ಕೃತಿಗೆ ನಿರಂತರವಾಗಿ ಅಪಮಾನ ಮಾಡುವುದು ಕಾಂಗ್ರೆಸ್ಸಿನ ಚಾಳಿಯಾಗಿ ಬಿಟ್ಟಿದೆ. ಮಂಜುನಾಥ ಪೂಜಾರಿಯವರು ಈ ರೀತಿಯ ಮೂರ್ಖತನದ ವರ್ತನೆ ಪ್ರದರ್ಶಿಸುವುದು ಇದೇ ಮೊದಲಲ್ಲ, ಆದರೆ ಈ ಬಾರಿಯ ಅವರ ನಡೆ ಮೂರ್ಖತನದ ಪರಮಾವಧಿ. ಉಡುಗೊರೆ ನೀಡಲು ಬೇಕಾದಷ್ಟು ಆಯ್ಕೆಗಳಿದ್ದರೂ, ಕಡ್ಸಲೆಯನ್ನೆ ಆರಿಸಿ ಕೊಂಡು, ಉದ್ದೇಶ ಪೂರ್ವಕವಾಗಿ ತುಳುನಾಡ ಸಂಸ್ಕೃತಿಯನ್ನು ಅಪಮಾನಿಸಿದ್ದಾರೆ.
ಮಂಜುನಾಥ್ ಪೂಜಾರಿಯವರು ತುಳುನಾಡಿನವರಾಗಿದ್ದು, ಅವರಿಗೆ ಕಡ್ಸಲೆಯ ಮಹತ್ವ ತಿಳಿದಿಲ್ಲದಿರುವುದು ದುರಾದೃಷ್ಟ!

ದೈವಾರಾಧನೆ ತುಳುನಾಡಿನ ಹೆಮ್ಮೆಯ ಸಂಸ್ಕೃತಿ, ತಮ್ಮ ಈ ನೀಚ ನಡೆ ಇಡೀ ತುಳುನಾಡಿನ ಜನರ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿದೆ. ತಕ್ಷಣ ತಾವು ಬಹಿರಂಗವಾಗಿ ಕ್ಷಮೆಯಾಚಿಸಬೇಕು, ಇಲ್ಲವಾದಲ್ಲಿ ತಮ್ಮ ವಿರುದ್ಧ ತುಳುನಾಡಿನ ಜನತೆ ಸಿಡಿದೆಳಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿರುವ ವಿಖ್ಯಾತ ಶೆಟ್ಟಿಯವರು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿಯವರ ನಡೆಯ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

 ಜಾಹೀರಾತು 
Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget