August 2021

ರಿಕ್ಷಾ- ಕಾರು ನಡುವೆ ಮುಖಾಮುಖಿ ಡಿಕ್ಕಿ: ರಿಕ್ಷಾ ಚಾಲಕ ಸ್ಥಳದಲ್ಲೇ ಸಾವು


ಕಾರ್ಕಳ: ತಿರುವಿನಲ್ಲಿ ರಾಂಗ್ ಸೈಡ್ ನಲ್ಲಿ ಕಾರು ಚಾಲಕ ಅತೀವೇಗವಾಗಿ ಟವೇರಾ ಕಾರನ್ನು ಚಲಾಯಿಸಿಕೊಂಡು ಬಂದು ರಿಕ್ಷಾಗೆ ಡಿಕ್ಕಿಯಾದ ಪರಿಣಾಮ ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆಮೃತಪಟ್ಟಿದ್ದಾರೆ.

ಕಾರ್ಕಳ ತಾಲೂಕಿನ ಅಜೆಕಾರು ನೂಜಿಗುರಿ ಎಂಬಲ್ಲಿ ಸೋಮವಾರ ಸಂಜೆ ಸುಮಾರು5.30ರ ವೇಳೆಗೆ ಈ ದುರ್ಘಟನೆ ಸಂಭವಿಸಿದ್ದು, ಮೃತಪಟ್ಟ ರಿಕ್ಷಾ ಚಾಲಕ ಅಂಡಾರು ಗ್ರಾಮದ ಬಾಳ್ಜೆ ನಿವಾಸಿ ಶೇಖರ ಮೂಲ್ಯ(58) ಎಂದು ಗುರುತಿಸಲಾಗಿದೆ.
ಶೇಖರ ಮೂಲ್ಯ ಕಾಡುಹೊಳೆ ಎಂಬಲ್ಲಿಂದ ಪ್ರಯಾಣಿಕರೊಬ್ಬರನ್ನು ಅಜೆಕಾರಿಗೆ ಬಿಟ್ಟು ವಾಪಾಸು ಕಾಡುಹೊಳೆ ರಿಕ್ಷಾ ಸ್ಟ್ಯಾಂಡ್ ಗೆ ಬರುತ್ತಿದ್ದಾಗ ದೊಂಡೇರಂಗಡಿ ಕಡೆಯಿಂದ ಅತೀವೇಗವಾಗಿ  ಬಂದ ಟವೇರಾ ವಾಹನ ನೂಜಿಗುರಿಯ ತಿರುವಿನಲ್ಲಿ ರಸ್ತೆಯ ಬಲಬದಿಗೆ ಬಂದು ಶೇಖರ ಮೂಲ್ಯ ಚಲಾಯಿಸುತ್ತಿದ್ದ ರಿಕ್ಷಾಗೆ ರಭಸವಾಗಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಶೇಖರ ಅವರ ತಲೆ ಹಾಗೂ ಕಾಲಿಗೆ ತೀವೃ ಗಾಯಗಳಾಗಿದ್ದು, ರಿಕ್ಷಾ ನುಜ್ಜುಗುಜ್ಜಾಗಿದ್ದು  ಶೇಖರ ಮೂಲ್ಯ ಅವರ ದೇಹ ರಿಕ್ಷಾದೊಳಗೆ ಸಿಲುಕಿಕೊಂಡಿದ್ದು ಬಳಿಕ ಸ್ಥಳೀಯರು ಹೊರತೆಗೆದು ಆಸ್ಪತ್ರೆಗೆ ಸಾಗಿಸಲು ನೆರವಾದರು. ಅಪಘಾತವೆಸಗಿದ ಕಾರು ನಿಯಂತ್ರಣ ಕಳೆದುಕೊಂಡು ಬಲಬದಿಯ ಚರಂಡಿಗೆ ಮಗುಚಿಬಿದ್ದಿದೆ ಅಲ್ಲದೇ ಕಾರಿನ ಹಿಂಬದಿಯ ಚಕ್ರ ಕಿತ್ತುಹೋಗಿದ್ದು  ಅಪಘಾತದ ತೀವ್ರತೆಗೆ ಸಾಕ್ಷಿಯಾಗಿತ್ತು.

ಟವೇರಾ ಚಾಲಕ ದೊಂಡೇರಂಗಡಿಯ ಸನಿತ್ ಶೆಟ್ಟಿ ಎಂಬಾತ ಪಡುಬಿದ್ರೆಯ ಅದಾನಿ ಕಂಪನಿಯಲ್ಲಿ ಕಾರು ಚಾಲಕನಾಗಿದ್ದು ಸೋಮವಾರ  ತನ್ನ ಸಹೋದರಿಯ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆಂದು  ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ಬಂದಿದ್ದ.  ಪೆರ್ಡೂರಿನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿ ವಾಪಾಸು ಪಡುಬಿದ್ರೆಗೆ ಟವೇರಾ ಕಾರಿನಲ್ಲಿ ಯುವತಿಯೊಂದಿಗೆ ತೆರಳುತ್ತಿದ್ದಾಗ ತನ್ನ ವೇಗದ ಹಾಗೂ ನಿರ್ಲಕ್ಷ್ಯತನದ ಚಾಲನೆಯಿಂದ ಅಪಘಾತವೆಸಗಿ ಪರಾರಿಯಾಗಲು ಯತ್ನಿಸಿದ್ದ. ದೊಂಡೇರಂಗಡಿಯಿಂದ ಬರುತ್ತಿದ್ದಾಗ ಅಜೆಕಾರು ಸಮೀಪದ ಗುಡ್ಡೆಯಂಗಡಿ ಎಂಬಲ್ಲಿ ಸ್ಕೂಟರಿಗೆ ಡಿಕ್ಕಿ ಹೊಡೆದು ಅಲ್ಲಿಂದ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿ ಕಾರನ್ನು ಅತೀ ವೇಗವಾಗಿ ಓಡಿಸಿ ಅಮಾಯಕ ರಿಕ್ಷಾ ಚಾಲಕನ ಬಲಿಪಡೆದ ಕಾರು ಚಾಲಕನನ್ನ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದು,ಈತ  ಕಂಠಪೂರ್ತಿ ಕುಡಿದು ಚಾಲನೆ ಮಾಡಿದ್ದಾನೆ ಎಂದು ಆರೋಪಿಸಿರುವ ಸ್ಥಳೀಯರು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿದ್ದಾರೆ. ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಪಘಾತ ವಲಯ: 

ಅಜೆಕಾರಿನ ನೂಜಿಗುರಿ ಎಂಬಲ್ಲಿನ ಅಪಾಯಕಾರಿ ತಿರುವಿನಲ್ಲಿ ಎದುರಿನಿಂದ ಬರಹ ವಾಹನಗಳು ಗೋಚರಿಸದೇ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಈ ಭಾಗದ ರಸ್ತೆಯನ್ನು ಅಗಲೀಕರಣಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 ಜಾಹೀರಾತು  ಜೆಎಂಜೆಯಲ್ಲಿ ಎಲ್ಈಡಿ ಟಿವಿ  ಕೇವಲ 5990ಕ್ಕೆ ಆರಂಭ

ಆಫ಼ರ್ ಆಫ಼ರ್ ಬಂಪರ್ ಆಫರ್

ಜೆ.ಎಂ.ಜೆ. ಎಲೆಕ್ಟ್ರಾನಿಕ್ಸ್ ನಲ್ಲಿ ಗಣೇಶ ಚತುರ್ಥಿ ಹಾಗೂ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಆಫರ್

ಕಳೆದ 16  ವರ್ಷಗಳಿಂದ ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ಗ್ರಾಹಕರ ನಂಬುಗೆಗೆ ಪಾತ್ರವಾಗಿರುವ ಕಾರ್ಕಳದ ಪ್ರಖ್ಯಾತ ಎಲೆಕ್ಟ್ರಾನಿಕ್ಸ್ ಮಳಿಗೆ ಜೆ.ಎಂ.ಜೆ. ಎಲೆಕ್ಟ್ರಾನಿಕ್ಸ್ ನಲ್ಲಿ ಗಣೇಶ ಚತುರ್ಥಿ ಹಾಗೂ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಆಫರ್ ಪ್ರಾರಂಭಗೊಂಡಿದೆ.


ನಿಮ್ಮಮನೆ ಮನಸ್ಸಿಗೊಪ್ಪುವ ಎಲ್ಈಡಿ ಟಿವಿ ಇದೀಗ ಕೇವಲ  5990 ಕ್ಕೆ ನಿಮ್ಮ ಕೈ ಸೇರಲಿದೆ.ಈ ಕೊಡುಗೆ ಕೆಲವೇ ದಿನಗಲ್ಲಿ ಮಾತ್ರ ಇರುವುದು. 


ಬೃಹತ್ ಸಂಗ್ರಹ:ಕಾರ್ಕಳದಲ್ಲಿಯೇ ಬೃಹತ್ ಎಲೆಕ್ಟ್ರಾನಿಕ್ಸ್ ಉದ್ಯಮವಾಗಿರುವ ಜೆ ಎಂ ಜೆ ಯಲ್ಲಿ ಎಲ್ಈಡಿ  ಟಿವಿ,ಸೈಡ್ ಡೋರ್ ರೆಫ್ರಿಜಿರೇಟರ್ಸ್,ಎಸಿ,,ವಾಷಿಂಗ್,ಮಶಿನ್ಸ್,ಒವೆನ್ಸ್,ಫ್ಯಾನ್, ಇನ್ವರ್ಟರ್,ಸೋಲಾರ್,ಸ್ಟವ್,ಮಿಕ್ಸಿ,ಗ್ರಯಿಂಡರ್,ಡಿಶ್ ಇನ್ಸ್ಟಾಲೇಷನ್,ವಾಟರ್ ಪ್ಯೂರಿಫಯರ್ಸ್, ಮೊಬೈಲ್ ಫೋನ್ಸ್ ಮತ್ತಿತರ ಎಲೆಕ್ಟ್ರಾನಿಕ್ಸ್ ಐಟಮ್ಸ್ ಗಳ ಬೃಹತ್ ಸಂಗ್ರಹ ಜೆಎಂಜೆಯಲ್ಲಿದೆ.


ಪ್ರಖ್ಯಾತ ಬ್ರಾಂಡ್ ಗಳು:ಕಾರ್ಕಳದಲ್ಲಿ ಮೊತ್ತ ಮೊದಲ ಬಾರಿಗೆ ಪ್ರಖ್ಯಾತ ಬ್ರಾಂಡ್ ಗಳಾದ ಸ್ಯಾಮ್ ಸ್ಯಾಂಗ್,ಎಲ್ ಜಿ, ಸೋನಿ,ಹೈಯರ್,ವರ್ಲ್ ಫೂಲ್,ತೊಷಿಬಾ,ಪ್ಯಾನಸಾನಿಕ್,ಟಿಸಿಎಲ್,ಒನಿಡಾ, ಗಾಡ್ರೇಜ್ ವಿಗಾರ್ಡ್, ಮುಂತಾದ ಪ್ರಮುಖ ಖ್ಯಾತ ಬ್ರಾಂಡ್ ಗಳ ವಸ್ತುಗಳ ಬೃಹತ್ ಸಂಗ್ರಹವೇ ಜೆ ಎಂ ಜೆ ಯಲ್ಲಿದೆ.


ಉಚಿತ ಸಾಗಾಟ:ಗ್ರಾಹಕರು ಖರೀದಿಸಿದ ವಸ್ತುಗಳನ್ನು ತಮ್ಮ ಮನೆಬಾಗಿಲಿಗೆ ತಲುಪಿಸಲು ಫ್ರೀ ಹೋಮ್ ಡೆಲಿವರಿ ಹಾಗೂ  ಉಚಿತ ಇನ್ಸ್ಟಾಲೇಷನ್ ಸೌಲಭ್ಯವಿದೆ.


ಸುಲಭ ಇಎಂಐ:ಜೆ.ಎಂ.ಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಇಎಂಐ ಸೌಲಭ್ಯಗಳು  ಅಲ್ಲದೆ ಎಲ್ಲ ವಸ್ತುಗಳೂ "೦" ಡೌನ್ ಪೇಮೆಂಟ್ ಜತೆಗೆ "0%" ಬಡ್ಡಿದರದಲ್ಲಿ ಗ್ರಾಹಕರ ಕೈಗೆಟಕುವ ದರದಲ್ಲಿ ಲಭ್ಯವಿದೆ.


ನುರಿತ ಸೇವೆ: ಹಲವಾರು ವರ್ಷಗಳಿಂದ ಎಲೆಕ್ಟ್ರಾನಿಕ್ಸ್ ವಸ್ತುಗಳ ರಿಪೇರಿಯಲ್ಲಿ ಅನುಭವ ಹೊಂದಿರುವ ನುರಿತ ತಂತ್ರಜ್ಞರಿಂದ  ಜೆ ಎಂ ಜೆ ಯಲ್ಲಿ  ಖರೀದಿಸಿದ ವಸ್ತುಗಳ ರಿಪೇರಿಗಳನ್ನೂ ಮಾಡಿಕೊಡಲಾಗುತ್ತದೆ.


ಭಾನುವಾರವೂ ತೆರೆದಿರುತ್ತದೆ:ಗ್ರಾಹಕರ ಅನುಕೂಲತೆಗಾಗಿ  ಜೆ ಎಂ ಜೆ  ಎಲೆಕ್ಟ್ರಾನಿಕ್ಸ್  ಭಾನುವಾರವೂ ತೆರೆದಿರುತ್ತದೆ.


ಇನ್ನೇಕೆ ತಡ ಇಂದೇ ಭೇಟಿ ನೀಡಿ, 

ಜೆ.ಎಂ.ಜೆ ಎಲೆಕ್ಟ್ರಾನಿಕ್ಸ್,

ಸಕೀನಾ ಪ್ಲಾಜಾ ಕಾಂಪ್ಲೆಕ್ಸ್,

ಮಂಗಳೂರು ರಸ್ತೆ, 

ಕಾರ್ಕಳ 

ಇಂದೇ ಸಂಪರ್ಕಿಸಿ: 9845110840,9844896668


ಕಾರ್ಕಳ:ಬಾಲಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ನೀರೆ ಗ್ರಾಮ ದ ನೀರೆ ಪಾಲಟ್ಟ ದಲ್ಲಿ ನಡೆದಿದೆ.ಅನೀಶ್ (19) ಆತ್ಮಹತ್ಯೆ ಮಾಡಿಕೊಂಡ ಬಾಲಕ.

ನೀರೆ ಪಾಲಟ್ಟ ಮೈತ್ರಿ ನಿವಾಸ ತ್ಯಾಂಪ ಕುಲಾಲ್ ಎಂಬುವರ ಮಗನಾದ ಅನೀಶ್ ಹಿರಿಯಡ್ಕ ಮೈಟೆಕ್ ಐಟಿಐನಲ್ಲಿ ಅಟೋಮೊಬೈಲ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದ.ತ್ಯಾಂಪ ಕುಲಾಲ್ ಹಾಗೂ ಅವರ ಹೆಂಡತಿ ಕೆಲಸಕ್ಕೆ ಹೋದ ಬಳಿಕ  ಮಕ್ಕಳಾದ ಅನೀಶ್ (19) ಮತ್ತು ಮಗ  ಅನ್ವಿತ್  (16)  ಇಬ್ಬರೇ ಮನೆಯಲ್ಲಿ ಇದ್ದರು.

ಮಧ್ಯಾಹ್ನ ಪರೀಕ್ಷೆಗೆ ಹೋಗಲು ಸಂಬಂಧಿಯಾದ ನೆರೆಮನೆಯ ಆಶಿಶ್ ಬೆಳಿಗ್ಗೆ ಕರೆ ಮಾಡಿದಾಗ ಫೋನ್  ಮಾಡಿದರೂ ತೆಗೆಯದ ಕಾರಣ ಕೂಡಲೇ  ಮನೆಗೆ ಹೋಗಿ ಬೆಡ್‌ರೂಮಿನ ಬಾಗಿಲು ಬಡಿದರೂ ಬಾಗಿಲು ತೆರೆಯದ ಕಾರಣ ಕಿಟಿಕಿಯಿಂದ ನೋಡಿದಾಗ ಫ್ಯಾನ್‌ಹುಕ್‌ಗೆ ಶಾಲಿನಿಂದ ನೇಣು ಹಾಕಿಕೊಂಡಿರುವುದನ್ನು ನೋಡಿ ಬೆಡ್‌ರೂಮಿನ  ಬಾಗಿಲು ಒಡೆದು ಅನೀಶ್‌ನನ್ನು ಕೆಳಗೆ ಇಳಿಸಿ ಪ್ರಥಮ ಚಿಕಿತ್ಸೆ ಮಾಡಿ ರಿಕ್ಷಾದಲ್ಲಿ ಬೈಲೂರು ಸರಕಾರಿ ಆಸ್ಪತ್ರೆಗೆ 11:30 ಗಂಟೆಗೆ ಕರೆದುಕೊಂಡು ಹೋದಾಗ ಅಲ್ಲಿನ  ವೈದ್ಯರು ಪರೀಕ್ಷಿಸಿ ಆತನು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. 

ಅನೀಶ್‌ನು  ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಅಂದಾಜಿಸಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 ಜಾಹೀರಾತು ಕಾರ್ಕಳದಲ್ಲಿ ಪಕ್ಷ ತೊರೆಯುತ್ತಿರುವ ಯುವ ಕಾಂಗ್ರೆಸ್ ಕಾರ್ಯಕರ್ತರು!

 ಕಾರ್ಕಳದಲ್ಲಿ ಪಕ್ಷದೊಳಗಿನ ಭಿನ್ನಮತದಿಂದಾಗಿ ಇದೀಗ ಯುವ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆಯುತ್ತಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮೂಲಕ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಸದ್ಯ ಕಾರ್ಕಳದಲ್ಲಿ ಬಹುತೇಕ ಪಂಚಾಯತ್ ಗಳು ಬಿಜೆಪಿ ಕೈ ಸೇರಿದ್ದು  ಸೂಕ್ತ ನಾಯಕತ್ವ ಇಲ್ಲದೆ ಇರುವುದು ಮತ್ತು ಹೈಕಮಾಂಡ್ ಕಾರ್ಕಳದಲ್ಲಿ ನಾಯಕತ್ವ ಬದಲಾವಣೆಗೆ ಆಸಕ್ತಿಯೋ ತೋರಿಸದೆ ಇರುವುದು ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.

ಕಳೆದ ಪಂಚಾಯತ್ ಚುನಾವಣೆಯಲ್ಲಿಯೂ ಹಲವಾರು ಮಂದಿ ಕಾಂಗ್ರೆಸ್ ಮುಖಂಡರು ಬಿಜೆಪಿಯನ್ನು ಸೇರಿದ್ದರು.ಇದರಲ್ಲಿ ಪಂಚಾಯತ್ ಚುನಾವಣೆಯಲ್ಲಿ  ಕಾಂಗ್ರೆಸ್ ನಿಂದ ಗೆದ್ದ ಸದಸ್ಯರೇ ಹೆಚ್ಚು ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ.ಸದ್ಯ ಯುವ ಕಾಂಗ್ರೆಸ್ ಕಾರ್ಯಕರ್ತರು ಪಕ್ಷಕ್ಕೆ ಗುಡ್ ಬಾಯಿ ಹೇಳಲು ಸಿದ್ಧರಾಗಿದ್ದು ಮುಂದಿನ ಚುನಾವಣೆಗೂ ಮೊದಲೇ ಕಾರ್ಕಳದಲ್ಲಿ ಕಾಂಗ್ರೆಸ್ ಮಾಯವಾಗುವದಂತೂ ಖಚಿತ ಎಂಬಂತಾಗಿದೆ.

ಟ್ವಿಟರ್ ನಲ್ಲಿ ಕಾರ್ಕಳಕ್ಕೆ ಬನ್ನಿ ನಾಯಕರೇ ಎಂದು ಹ್ಯಾಶ್ ಟ್ಯಾಗ್ ಮೂಲಕ ಯುವ ಕಾಂಗ್ರೆಸಿಗರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.


@DKShivakumar

@siddaramaiah

ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲೂ ಸಂಘಟನೆ ಬಲಗೊಳ್ಳದಿದ್ದರೆ ಕಾರ್ಕಳದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ‌ ನೆಲಕಚ್ಚಲಿದೆ.

#ಕಾರ್ಕಳಕ್ಕೆಬನ್ನಿನಾಯಕರೇ

@DKShivakumar

@siddaramaiah

ಕಾರ್ಕಳದ ಪ್ರಭಾವಿ ಕಾಂಗ್ರೆಸ್ ನಾಯಕ ವೀರಪ್ಪ ಮೊಯಿಲಿಯವರು ಕಾರ್ಕಳಕ್ಕೆ ಭೇಟಿನೀಡಿ ಕಾರ್ಯಕರ್ತರ ನೋವನ್ನು ಕೇಳಿ

@ಕಾರ್ಕಳಕ್ಕೆಬನ್ನಿನಾಯಕರೇ

 
 ಜಾಹೀರಾತು 
 

ಗಣೇಶೋತ್ಸವ ಆಚರಣೆ ಬಗ್ಗೆ ಜನರ ಬೇಡಿಕೆ ಇದೆ. ಸಾರ್ವಜನಿಕರ, ಭಕ್ತ ಜನರ ಬೇಡಿಕೆ ಸರಿಯಾಗಿದೆ. ಆದರೆ ಜನರ ಆರೋಗ್ಯ ಕಾಪಾಡುವುದು ಸರ್ಕಾರದ ಮೊದಲ ಆದ್ಯ ಕರ್ತವ್ಯ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸೂಚನೆ ನೋಡಬೇಕು. ತಜ್ಞರು ಹೇಳಿರುವ ವಿಚಾರಗಳನ್ನು ಗಮನಿಸಬೇಕು. ತಜ್ಞರ ಅಭಿಪ್ರಾಯ ನೋಡಿ ಆಚರಣೆಗೆ ಅವಕಾಶ ನೀಡುತ್ತೇವೆ. ಇದನ್ನು ಅರ್ಥ ಮಾಡಿಕೊಂಡು ಜನರು ಸಹಕರಿಸಬೇಕು ಎಂದು ನುಡಿದಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಹೆಚ್ಚಿದ ಕಾರಣಕ್ಕೆ ತರಗತಿಗಳು ಆರಂಭವಾಗಿರಲಿಲ್ಲ. ಈಗ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಸೋಂಕು ಹತೋಟಿಗೆ ಬರುತ್ತಿದೆ. ಇದೊಂದು ಆಶಾದಾಯಕ ಬೆಳವಣಿಗೆ. ಕಳೆದ ಮೂರು ದಿನಗಳಲ್ಲಿ ಪಾಸಿಟಿವಿಟಿ ರೇಟ್ ಶೇ.1.4 ಇದೆ. ಈ ಹಿನ್ನೆಲೆಯಲ್ಲಿ ಶಾಲಾರಂಭ ಮಾಡುತ್ತೇವೆ ಎಂದಿದ್ದಾರೆ.

9ನೇ ತರಗತಿಯಿಂದ ದ್ವಿತೀಯ ಪಿಯುವರೆಗೆ ಶಾಲಾರಂಭ ಮಾಡುತ್ತೇವೆ. ಈ ಬಗ್ಗೆ ಜಿಲ್ಲಾಡಳಿತ ನಿರ್ಣಯ ಕೈಗೊಂಡಿದೆ. ಸೆಪ್ಟಂಬರ್ 1ರಿಂದ ತರಗತಿಗಳು ಆರಂಭವಾಗಲಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಎಚ್ಚರಿಕೆಯಿಂದ ಗಮನಿಸಬೇಕು. ಶಿಕ್ಷಕರಿಗೆ ಲಸಿಕೆ ಕಡ್ಡಾಯ ಮಾಡಬೇಕು. ಕೋವಿಡ್ ನಿಯಮಾವಳಿ ಅರ್ಥೈಸಿಕೊಂಡು ತರಗತಿ ಆರಂಭಿಸಿ ಎಂದು ಹೇಳಿದ್ದಾರೆ.

 ಜಾಹೀರಾತು 
ಬಜಗೋಳಿ ಡಿಡಿ೦ಬಿರಿಯ ಅಯ್ಯ್ಯಪ್ಪ ಸ್ವಾಮಿ ಮಂದಿರದಲ್ಲಿ ಶಾಸ್ತ್ರೀಯ ಸಂಗೀತ ಮತ್ತು ಕುಣಿತ ಭಜನೆ ತರಭೇತಿ ತರಗತಿಯನ್ನು ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಸ್ಟೋನ್ ಮತ್ತು ಕ್ರಷರ್  ಮಾಲಕರ ಸಂಘದ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಬಜಗೋಳಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಕರ್ನಾಟಕ ಶಾಸ್ತ್ರೀಯ ಸಂಗೀತದ ಗುರುಗಳಾದ ಶ್ಯಾಮಲಾ ಕೃಷ್ಣಕುಮಾರ್ ರವರು ಫಲ ಕಾಣಿಕೆಯನ್ನು ಸ್ವೀಕರಿಸಿದರು.ಕುಣಿತ ಭಜನೆಯ ತರಬೇತಿದಾರರಾಗಿ ನಿತಿನ್ ಮಾಳ ರವರು ಫಲಕಣಿಕೆಯನ್ನು ಸ್ವೀಕರಿಸಿದರು. 

ಕಾರ್ಯಕ್ರಮದಲ್ಲಿ ಸಂದೀಪ್ ಶೆಟ್ಟಿ,ಹರಿಹರ ಗೋಖಲೆ,ಸುರೇಶ ದೇವಾಡಿಗ ಸಂಜೀವ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ದಿನಾಂಕ ಸೆ.28  ರಿಂದ ಪ್ರತೀ ಶನಿವಾರ ಸಂಜೆ 3 .30 ರಿಂದ 5 ಗಂಟೆಯವರೆಗೆ ಮಕ್ಕಳ ಹಾಗೂ ಯುವಕ ಯುವತಿಯರ ತಂಡ ರಚಿಸಿ ತರಭೇತಿಯನ್ನು ನೀಡಲಾಗುವುದು.
 

 ಜಾಹೀರಾತು MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget