ಕಾರ್ಕಳ:"ಜನಾಶೀರ್ವಾದ ಯಾರ ಪರವಾಗಿದೆ ಎಂದು ಮುಂಬರುವ ದಿನಗಳಲ್ಲಿ ತೀರ್ಮಾನವಾಗಲಿದೆ"-ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಶಾಂತ್ ಸುಧಾಕರ್

ನಾಯಕತ್ವ ಒಂದು ಸ್ಥಾನಮಾನವಲ್ಲ ಅದೊಂದು ಕಾರ್ಯ ‌. ಜ್ಞಾನರಹಿತ  ಕಾರ್ಯ ಅಥವಾ ನಡೆ ವ್ಯರ್ಥಕ್ಕೆ ಸಮ. ತಾಲಿಬಾನಿಗಳು ಭಾರತದ ತಂಟೆಗೆ ಬಂದರೆ ಅವರ ರುಂಡವನ್ನು ಚೆಂಡಾಡುವ ಸಾಮರ್ಥ್ಯ ನಮ್ಮ ದೇಶದ ಯೋಧರಿಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಶಾಂತ್ ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



ದೇಶದ ಸೈನ್ಯದ ಮೇಲೆ ನಮಗೆ ವಿಶ್ವಾಸವಿದೆ, ಹಾಗಾಗಿ ತಾಲಿಬಾನ್ ನಂತಹ ಉಗ್ರರ ಬಗ್ಗೆ ನಮಗೆ ಯಾವುದೇ ಭಯವಿಲ್ಲ.ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರಾದ ಸುನೀಲ್ ಕುಮಾರ್ ರವರು ಅಫಘಾನಿಸ್ತಾನದಲ್ಲಿನ ಪರಿಸ್ಥಿತಿಯನ್ನು ನೋಡಿದಾಗ ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವ ತೆಗೆದುಕೊಳ್ಳದೆ ಕಾಂಗ್ರೆಸ್ ತೆಗೆದುಕೊಂಡಿದ್ದರೆ ಪರಿಸ್ಥಿತಿ  ಹೇಗಿರುತ್ತಿತ್ತು ಅಂತ ಹೇಳಿರುವುದು ಖಂಡನೀಯ. ವ್ಯಕ್ತಿಪೂಜೆ ಮಾಡಿ ದೇಶದ ಸೈನಿಕರ ಹೆಸರಿನಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವುದು ನಾಚಿಕೆಗೇಡಿನ ಸಂಗತಿ ಮತ್ತು ಖಂಡನಾರ್ಹ. ಇದು ಬಿಜೆಪಿಯವರ ನೈತಿಕ ಪ್ರಜ್ಞೆಯನ್ನು ತೋರಿಸುತ್ತದೆ ಮತ್ತು   ಕಳೆದ 74 ವರ್ಷದ ಸ್ವಾತಂತ್ರ್ಯೋತ್ತರ ಭಾರತದ  ಇತಿಹಾಸದಲ್ಲಿ ಸೈನಿಕರ ಮೇಲೆ ದೇಶದ ಗಡಿರೇಖೆಯೊಳಗೆ ಬಂದು ಉಗ್ರರಿಂದ ಭಾರೀ ಪ್ರಮಾಣದ ಬಾಂಬ್‌ ದಾಳಿಯಾಗಲಿಲ್ಲ. 

ಈ ದಾಳಿಯಾದದ್ದು ನರೇಂದ್ರ ಮೋದಿಯವರ ನೇತ್ರತ್ವದ ಆಡಳಿತ ಇರುವಾಗ ಪುಲ್ವಾಮಾದಲ್ಲಿ ಎಂಬುದು ದೇಶದ ಜನರಿಗೆ ತಿಳಿದ ವಿಷಯ. ಸುಮಾರು 12 ಲಕ್ಷಕ್ಕಿಂತಲೂ ಜಾಸ್ತಿ ಸೈನಿಕರು ಮತ್ತು 9 ಲಕ್ಷಕ್ಕಿಂತಲೂ ಹೆಚ್ಚು ಮೀಸಲುಸೈನಿಕರಿರುವ ಬಲಿಷ್ಠ ಸೇನೆಯೆಂದರೆ ನಮ್ಮ ಭಾರತದ ಸೇನೆ ಅಂತ ಸೇನೆಯ ರಕ್ಷಣೆಯಲ್ಲಿ ನಾವಿದ್ದೇವೆ. ಅಂತ ಬಲಿಷ್ಠ ಸೇನೆಯನ್ನು ಕಟ್ಟಿದ್ದು ನಮ್ಮ ಕಾಂಗ್ರೆಸ್ ಸರಕಾರ. 1958 ರಲ್ಲೇ ನೆಹರೂರವರು (D.R.D.O) ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಸೇನಾ ಸಂಶೋಧನೆಗಳಿಗೆ ಅನು ಮಾಡಿಕೊಟ್ಟು ನಮ್ಮ ದೇಶ ಬಲಿಷ್ಠ ಸೈನ್ಯವಾಗುವಂತೆ ತಳಪಾಯ ಹಾಕಿದವರು.  

ಇನ್ನಾದರೂ ಬಿಜೆಪಿ ಮತ್ತು ಸಂಘಪರಿವಾರದವರು  ಇಟಲಿಯ "ಫ್ಯಾಸಿಸ್ಟ್" ಮತ್ತು ಜರ್ಮನಿ "ನಾಜಿಸ್ಟ್"  ಮಾದರಿಯ ವ್ಯಕ್ತಿಪೂಜೆಯನ್ನು ಬಿಟ್ಟು ನೈಜ ದೇಶಸೇವೆಯಲ್ಲಿ ತೊಡಗಬೇಕು. ಜನಾಶೀರ್ವಾದ ಜನವಿರೋಧಿ ಸರಕಾರಕ್ಕೆ ಇದೆಯೋ ಅಥವಾ ಜನರ ಕಷ್ಟನಷ್ಟಗಳಿಗೆ ಸ್ಪಂದಿಸಿ ರೈತರ, ಕೂಲಿಕಾರ್ಮಿಕರ, ಶ್ರೀಸಾಮಾನ್ಯರ ಪರವಾಗಿ ಇರುವವರಿಗೆ ಇದೆಯೋ ಎಂಬುದು ಮುಂಬರುವ ದಿನಗಳಲ್ಲಿ ತೀರ್ಮಾನವಾಗಲಿದೆ.  ಬಿಜೆಪಿ ನಾಯಕರಿಗೆ ಅಂಧಕಾರದಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ಬರುವಂತಹ ಇತಿಹಾಸದ ಪುಸ್ತಕಗಳನ್ನು ನಾವು ಕೊಡುತ್ತೇವೆ  ಅದನ್ನು ಓದಿ ಅರ್ಥಮಾಡಿಕೊಂಡು ನಂತರ ಸಾರ್ವಜನಿಕ ಗ್ರಂಥಾಲಯಗಳಿಗೆ ಕೊಡುವುದು ಒಳ್ಳೆಯದು .ಬಿಜೆಪಿಯ ಕಪೋಲಕಲ್ಪಿತ ತಿರುಚಿದ ಇತಿಹಾಸದ ಮಾತುಗಳನ್ನು ಸತ್ಯವೆಂದೇ ನಂಬಿ ದೇಶದ ಭವಿಷ್ಯತ್ತಿನ ಯುವಜನರು ದಾರಿತಪ್ಪುವುದು  ತಪ್ಪುತ್ತದೆ ಎಂದು ಅವರು ಹೇಳಿದ್ದಾರೆ. 





 ಜಾಹೀರಾತು 







Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget