ಬಜಗೋಳಿ:ಭೀಕರ ರಸ್ತೆ ಅಪಘಾತ,ದ್ವಿಚಕ್ರ ಸವಾರ ಸಾವು-Times of karkala

ಬಜಗೋಳಿ ಕಂಬಳ ಕ್ರಾಸ್ ಬಳಿ ಮುಂಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ದ್ವಿಚಕ್ರ ಮೋಟಾರ್ ಸವಾರರೊಬ್ಬರು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಬಂಜನಕ್ಯಾರ್ ಶೇಖರ್ ದೇವಾಡಿಗ (72) ಎಂಬವರು  ಮೃತಪಟ್ಟವರು. ಕೂಕ್ರ ಎಂಬವರನ್ನು ಸವಸವಾರನ್ನಾಗಿ ಕುಳಿರಿಸಿ ಬಜಗೋಳಿ ಯಿಂದ ದಿಡಿಂಬಿರಿಯ ಕಡೆಗೆ ದ್ವಿಚಕ್ರ ವಾಹನವನ್ನು ಚಲಾಯಿಸಿ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.




ಕಾರ್ಕಳ ಕಡೆಯಿಂದ ಬಜಗೋಳಿ ಕಡೆಗೆ ಹೋಗುತ್ತಿದ್ದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಸವಾರರಿಬ್ಬರು ಡಾಂಬರು ರಸ್ತೆ ಮೇಲೆ ಬಿದ್ದು ಗಾಯಗೊಂಡಿದ್ದರು. ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದ ಶೇಖರ್ ಮೃತಪಟ್ಟಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಜಾಹೀರಾತು 




Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget