ಉಡುಪಿ:“ಉಡುಪಿ ಜ್ಞಾನಸುಧಾ”ದಲ್ಲಿ ಪ್ರಸ್ತುತ ವರ್ಷದಲ್ಲಿಉಚಿತ ಶಿಕ್ಷಣದ ಕೊಡುಗೆ-Times of karkala

ಉಡುಪಿ:ಜ್ಞಾನಸುಧಾ ಸಂಸ್ಥಾಪಕರ ಜನ್ಮ ಶತಾಬ್ಧಿ ಹಾಗೂ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ದಶಮಾನೋತ್ಸವದ ಕೊಡುಗೆಯಾಗಿ ಹೊಸದಾಗಿ ಆರಂಭಗೊ೦ಡ ಉಡುಪಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ,ಉಡುಪಿ ಜಿಲ್ಲೆಯ ಈ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಶೇ.97ಕ್ಕಿಂತ ಅಧಿಕ ಅಂಕ ಗಳಿಸಿದ ಆಸಕ್ತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಥಮ ಹಾಗೂ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದ ಕಾಲೇಜು ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು ಎಂದು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಹಾಗೂ ಅಜೆಕಾರು ಪದ್ಮಗೋಪಾಲ್‌ ಎಜ್ಯುಕೇಶನ್‌ಟ್ರಸ್ಟ್ನ ಪ್ರಕಟಣೆ ತಿಳಿಸಿದೆ. 


ಸಿ.ಬಿ.ಎಸ್.ಇ ಹಾಗೂ ಐ.ಸಿ.ಎಸ್.ಇ. ಪರೀಕ್ಷೆಗಳು ಪ್ರಸಕ್ತ ವರ್ಷ ನಡೆಯದೆ ಇರುವುದರಿಂದ ಉಡುಪಿ ಜ್ಞಾನಸುಧಾದದಲ್ಲಿ ಪ್ರವೇಶತಗೊಂಡು ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಸಂಸ್ಥೆ ನಿಗದಿಪಡಿಸುವ ಮಾನದಂಡದಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ 2 ವರ್ಷಗಳ ಕಾಲೇಜು ಶುಲ್ಕವನ್ನು ಹಿಂದಿರುಗಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. 

ಆಸಕ್ತರು ಕಡಿಯಾಳಿ ಸಮೀಪದ ಉಡುಪಿ ಜ್ಞಾನಸುಧಾ ಕ್ಯಾಂಪಸ್‌ಗೆ ಭೇಟಿಕೊಟ್ಟು ಪ್ರಾಚಾರ್ಯರನ್ನು ಸಂಪರ್ಕಿಸಬಹುದು. 

 ಜಾಹೀರಾತು 
Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget