ಕಾರ್ಕಳ:ಮುದ್ರಾ ಲೋನ್‌ ಹೆಸರಲ್ಲಿ ಲಕ್ಷಾಂತರ ರೂ ವಂಚನೆ!-Times of karkalaಮುಂಡ್ಕೂರು:ಮುದ್ರಾ ಲೋನ್‌ನಿಂದ ಮಾತನಾಡುವುದಾಗಿ ಕರೆ ಮಾಡಿ ಲಕ್ಷಾಂತರ ರೂ ವಂಚಿಸಿದ ಘಟನೆ ತಾಲೂಕಿನ ಮುಂಡ್ಕೂರು ವ್ಯಾಪ್ತಿಯಲ್ಲಿ ನಡೆದಿದೆ.ಮುಂಡ್ಕೂರು ನಿವಾಸಿ ಸಿರಾಜ್‌ (26)ವಂಚನೆಗೊಳಗಾದವರು.

ಸಿರಾಜ್ ರವರು ಗೂಗಲ್ ನ ಲೋನ್‌ ಆ್ಯಪ್ ನಲ್ಲಿ ಸಾಲ ಪಡೆಯಲೆಂದು ಹೆಸರು ಮತ್ತು ಪೋನ್‌ನಂಬ್ರ ವನ್ನು ದಾಖಲಿಸಿದ್ದರು.ಇದಾದ ಮೂರು ದಿನಗಳ ಬಳಿಕ +918343839550ನೇ ನಂಬ್ರ ದಿಂದ ಯಾರೋ ಅಪರಿಚಿತರು ಕರೆ ಮಾಡಿ ಮುದ್ರಾ ಲೋನ್‌ನಿಂದ ಮಾತನಾಡುವುದಾಗಿ ನಂಬಿಸಿ ಟ್ಯಾಕ್ಸ್ ಕಟ್ಟುವಂತೆ ಖಾತೆ ನಂಬ್ರ 2734000100270680 ನೇದಕ್ಕೆ ಹಂತಹಂತವಾಗಿ 1,97,400 /- ರೂಪಾಯಿಗಳನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಸ್ವಲ್ಪ ದಿನಗಳ ನಂತರ ಇನ್ನೊಬ್ಬ ಅಪರಿಚಿತ ವ್ಯಕ್ತಿ +918674981386 ನೇ ನಂಬ್ರದಿಂದ ಕರೆ ಮಾಡಿ ಲೋನ್‌ಕೊಡಿಸುವುದಾಗಿ ಹಾಗೂ ಮೊದಲು ಕಳೆದುಕೊಂಡ ಹಣ ವನ್ನು ಹಿಂದಿರುಗಿಸಿ ನೀಡುವುದಾಗಿ ನಂಬಿಸಿ, ಇದಕ್ಕಾಗಿ ಹಂತ ಹಂತವಾಗಿ ಒಟ್ಟು 39,300/- ರೂಪಾಯಿ ಹಣವನ್ನು ಖಾತೆ ನಂಬ್ರ 79900100002242 ನೇದಕ್ಕೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಸಿರಾಜ್ ಒಟ್ಟು   ಒಟ್ಟು 2,36,700/- ಹಣವನ್ನು ಕಳೆದುಕೊಂಡಿದ್ದು ಸಾಲವನ್ನು ನೀಡಿದೇ, ಕಟ್ಟಿದ ಹಣವನ್ನು ನೀಡದೇ ಮೋಸ ಮಾಡಿದ್ದಾರೆ. ಈ ಬಗ್ಗೆ ಸೆನ್‌ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 41/2021 ಕಲಂ: 66(ಡಿ) ಐ.ಟಿ. ಆಕ್ಟ್ ಮತ್ತು ಕಲಂ. 420 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.

 ಜಾಹೀರಾತು 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget