ಪಳ್ಳಿ:ಬಸ್ ನಿಂದ ಇಳಿದು ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ,ವ್ಯಕ್ತಿ ಸಾವು-Times of karkala

 

ಬಸ್ ನಿಂದ ಇಳಿದು ರಸ್ತೆ ದಾಟುತ್ತಿದ್ದ ಸಂಧರ್ಭ ವೇಗವಾಗಿ ಬಂದ ಬೈಕ್ ಡಿಕ್ಕಿಹೊಡೆದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಪಳ್ಳಿ ಗ್ರಾಮದಲ್ಲಿ ನಡೆದಿದೆ.ಪಳ್ಳಿ ಗ್ರಾಮದ ನಾರಾಯಣ (61) ಮೃತಪಟ್ಟವರು.

ಇಂದು ಬೆಳಿಗ್ಗೆ 08:40 ಘಂಟೆಗೆ ನಾರಾಯಣರವರು ಬೈಲೂರು ಕಡೆಯಿಂದ ಬಂದ ಬಸ್ಸಿನಿಂದ ದುರ್ಗಾನಗರ ಬಳಿ ಇಳಿದು ರಸ್ತೆ ದಾಟುತ್ತಿದ್ದ ಸಂದರ್ಭ ಕಾರ್ಕಳ ಕಡೆಯಿಂದ ಬೈಲೂರು ಕಡೆಗೆ ಸಾಗುತ್ತಿದ್ದ KA-20-EN-3492 ನೇ ಮೋಟಾರ್ ಸೈಕಲ್ ಸವಾರ ಕರುಣಾಕರ ಎಂಬಾತನು ಅತೀ ವೇಗದಿಂದ ಬಂದು ನಾರಾಯಣ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯವಾಗಿದ್ದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಜಾಹೀರಾತು Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget