ಕಾರ್ಕಳ:ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಂಸ್ಥಾಪಕ ದಿ.ಗೋಪಶೆಟ್ಟಿಯವರ ಜನ್ಮ ಶತಾಬ್ದಿ ನುಡಿನಮನ,ವಿವಿಧ ಸಾಮಾಜಿಕ ಕಾರ್ಯಕ್ರಮಗಳ ಆಯೋಜನೆ-Times of karkala


ಕಾರ್ಕಳ:  ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನಡೆಸುತ್ತಿರುವ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಹಲವಾರು ಮೈಲುಗಲ್ಲುಗಳನ್ನು ಸಾಧಿಸುತ್ತಾ ನಾಡಿನ ಹೆಮ್ಮೆಯ ಕಾಲೇಜಾಗಿ ಹೊರಹೊಮ್ಮಿದೆ. ಪ್ರಸಕ್ತ ವರ್ಷ ಸಂಸ್ಥೆಯ ಸಂಸ್ಥಾಪಕರಾದ ದಿ.ಗೋಪಶೆಟ್ಟಿಯವರ ಜನ್ಮ ಶತಾಬ್ದಿ ವರ್ಷ. ಜೊತೆಗೆ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ದಶಮಾನೋತ್ಸವದ ಸಂಭ್ರಮ. ಈ ಸ್ಮರಣೀಯ ಸಂದರ್ಭ ಉಡುಪಿಯ ಕಡಿಯಾಳಿ ಬಳಿಯಿರುವ ನಾಗಬನ ಕ್ಯಾಂಪಸ್‌ನಲ್ಲಿ ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಿರುವುದು ಹರ್ಷದಾಯಕ ಸಂಗತಿ.   

       ಈ ಎಲ್ಲಾ ಸಂಭ್ರಮಕೆ ಮೆರುಗು ಎನ್ನುವಂತೆ ಇದೇ ತಿಂಗಳ 21 ರ ಶನಿವಾರದಂದು, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣ ಗಣಿತನಗರದಲ್ಲಿ ಸಂಸ್ಥಾಪಕರಾದ ದಿ.ಗೋಪ ಶೆಟ್ಟಿಯವರ “ಜನ್ಮ ಶತಾಬ್ದಿ ನುಡಿನಮನ” ಕಾರ್ಯಕ್ರಮ ಆಯೋಜಿಸಲಾಗಿದೆ. ಕೋವಿಡ್ ನಿಯಮದ ಅನುಸಾರ ಎರಡು ವಿಭಾಗದಲ್ಲಿ ಕಾರ್ಯಕ್ರಮ ಜರುಗಲಿದೆ.   

        ಬೆಳಗ್ಗೆ 10.00 ಗಂಟೆಯಿoದ ಅಪರಾಹ್ನ 12.45ರವರೆಗೆ ರಕ್ತದಾನ ಶಿಬಿರ, ಗಾಲಿಕುರ್ಚಿ ವಿತರಣೆ, ಅನಾಥಾಶ್ರಮಗಳಿಗೆ ಧನ ಸಹಾಯ ಹಾಗೂ ೨೦೨೧ರ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ಹಾಗೂ ಸಂಸ್ಥೆಯ ನಿವೃತ್ತ ಉದ್ಯೋಗಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ.  ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಶ್ರೀ ಬಿ. ಸದಾಶಿವ ಪ್ರಭು, ಮಂಗಳೂರು ಪ್ರಾಂತ್ಯದ ಮಾಜಿ ಪ್ರಾಂತ್ಯಾಧಿಕಾರಿಣಿ ಸಿಸ್ಟರ್ ಕ್ರಿಸ್ಟೆಲ್ಲ, ಕಾರ್ಕಳದ ಪ್ರಖ್ಯಾತ  ವೈದ್ಯ ಡಾ.ಕೆ.ರಾಮಚಂದ್ರ ಜೋಷಿ, ಶ್ರೀ ಪ್ರಭಾಕರ ಜಿ. ಶೆಟ್ಟಿ, ಎ.ಪಿ.ಜಿ.ಇ.ಟಿ. ಆಡಳಿತ ಮಂಡಳಿ ಸದಸ್ಯ ಶ್ರೀ ಎ.ಶಾಂತಿರಾಜ್ ಹೆಗ್ಡೆ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.  

         ಸಂಜೆಯ ಕಾರ್ಯಕ್ರಮದಲ್ಲಿ 7.30ಕ್ಕೆ, ನೂತನವಾಗಿ ನಿರ್ಮಿಸಿರುವ ಅಟಲ್ ಟಿಂಕರಿ0ಗ್ ಲ್ಯಾಬ್ ಉದ್ಘಾಟನೆ, ಕಾರ್ಕಳ ಪುರಸಭೆ ಹಾಗೂ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಡುವ ಪೌರಕಾರ್ಮಿಕರಿಗೆ ಗೌರವ ಪುರಸ್ಕಾರ, ೨೦೨೧ರಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ೬೦೦ಕ್ಕೆ ೬೦೦ ಅಂಕಗಳಿಸಿದ ೪೩ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಜೆ.ಇ.ಇ ಮೈನ್ ಸಾಧಕ ವಿದ್ಯಾರ್ಥಿಗಳನ್ನು ಗುರುತಿಸುವಿಕೆ ಮತ್ತು ಸಂಸ್ಥೆಯ ಉದ್ಯೋಗಿಗಳಿಗೆ ಭೋಜನಾ ಕೂಟ ಆಯೋಜಿಸಲಾಗಿದೆ.  ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ, ಕಾರ್ಕಳ ಶಾಸಕ ಶ್ರೀ ವಿ. ಸುನೀಲ್ ಕುಮಾರ್, ಬೋಳ ಪ್ರಭಾಕರ್ ಕಾಮತ್ ಪಾಲ್ಗೊಳ್ಳಲಿದ್ದಾರೆಂದು ಸಂಸ್ಥೆಯು  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.   

 ಜಾಹೀರಾತು 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget