ನಂದಳಿಕೆ:ದುಬೈಗೆ ಕೆಲಸಕ್ಕೆ ವಾಪಸ್ಸು ಹೋಗಲಾಗದೆ ನೊಂದು ವ್ಯಕ್ತಿ ಆತ್ಮಹತ್ಯೆ-Times of karkala

ಕಳೆದ 17 ವರ್ಷಗಳಿಂದ ದುಬೈಯಲ್ಲಿ ಕೆಲಸ ಮಾಡಿಕೊಂಡಿದ್ದು ರಜೆಯಲ್ಲಿ ಊರಿಗೆ ಬಂದಿದ್ದು ಇದೀಗ ಮರಳಿ ದುಬೈಗೆ ತೆರಲಾಗದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕು, ನಂದಳಿಕೆ ಗ್ರಾಮದಲ್ಲಿ ಆ.17 ರಂದು ಸಂಭವಿಸಿದೆ.

ನಂದಳಿಕೆ ನಿವಾಸಿ  ರಾಜೇಂದ್ರ ಪ್ರಸಾದ (47) ಮೃತಪಟ್ಟವರು.ಇವರು ಕಳೆದ ಕಳೆದ 17 ವರ್ಷಗಳಿಂದ ದುಬೈಯಲ್ಲಿ ಕೆಲಸಮಾಡಿಕೊಂಡಿದ್ದರು.ರಜೆಯಲ್ಲಿ ಮನೆಗೆ ಬಂದಿದ್ದು, ಕೋವಿಡ್  19 ಹಿನ್ನೆಲೆಯಲ್ಲಿ ವಾಪಸ್ಸು ಹೋಗಲು ಆಗದೇ ಇದ್ದು, ಇದರಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.

ಇದೇ ಕಾರಣದಿಂದ ಮನನೊಂದು ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ  ಎಂದು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಜಾಹೀರಾತು 









Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget