"ಜ್ಞಾನಸುಧಾ ಕಾರ್ಕಳ ತಾಲೂಕಿಗೊಂದು ಗೌರವದ ಹೆಮ್ಮೆಯ ಸಂಸ್ಥೆಯಾಗಿದೆ"-ಸಚಿವ ಸುನೀಲ್‌ಕುಮಾರ್ ಜ್ಞಾನಸುಧಾ:ಸಂಸ್ಥಾಪಕರಜನ್ಮ ಶತಾಬ್ದಿ ಸ್ನೇಹಕೂಟ-Times of karkala

 

ಹುಟ್ಟು ಹಬ್ಬವನ್ನುಅವರವರ ಇಚ್ಚೆಗೆ ಆಚರಿಸುವುದನ್ನು ನಾವು ನೋಡಿದ್ದೇವೆ. ಆದರೆಜ್ಞಾನಸುಧಾಸಂಸ್ಥಾಪಕರ ಹುಟ್ಟುಹಬ್ಬವನ್ನು ಹತ್ತಾರು ಸಮಾಜಮುಖಿಚಟುವಟಿಕೆಯ ಮೂಲಕ ಆಚರಿಸುತ್ತಿರುವುದುಅತ್ಯಂತ ಪ್ರಶಂಸನೀಯವೆ೦ದು ಕರ್ನಾಟಕ ಸರಕಾರದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶ್ರೀ ವಿ.ಸುನೀಲ್‌ಕುಮಾರ್ ಹೇಳಿದರು.


ಅವರು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಗೋಪಶೆಟ್ಟಿಯವರ ಜನ್ಮಶತಾಬ್ದಿ ನುಡಿನಮನ - ಸ್ನೇಹಕೂಟ ಹಾಗೂ ಅಟಲ್‌ಟಿಂಕರಿ೦ಗ್ ಲ್ಯಾಬ್‌ ಉದ್ಘಾಟನಾ ಕಾರ್ಯಕ್ರಮದಲ್ಲಿಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಅಂತಃಕರಣ ಶುದ್ಧವಿದ್ದಾಗ ಮಾತ್ರಇಂತಹ ಸಮಾಜಮುಖಿಕಾರ್ಯ ಮಾಡಲು ಸಾಧ್ಯ. ಪೋಷಕರ ಆಶಯದಂತೆ ಉತ್ತಮ ಗುಣ ಮಟ್ಟದ ಶಿಕ್ಷಣವನ್ನು ನೀಡಿ ಹೆತ್ತವರ ಪ್ರಶಂಸೆಗೆ ಒಳಗಾಗಿ,ರಾಜ್ಯಾದಾದ್ಯಂತ ಪ್ರಸಿದ್ದಿಯನ್ನು ಹೊಂದಿರುವ೦ತಹ ಜ್ಞಾನಸುಧಾ, ಕಾರ್ಕಳ ತಾಲೂಕಿಗೊಂದು ಗೌರವದ ಹೆಮ್ಮೆಯ ಸಂಸ್ಥೆಯಾಗಿದೆ ಎಂದರು.


ಇನ್ನೋರ್ವ ಮುಖ್ಯ ಅತಿಥಿಯಾಗಿದ್ದಉದ್ಯಮಿ ಬೋಳ ಪ್ರಭಾಕರ್‌ ಕಾಮತ್, ಪ್ರತಿಭೆ ಬೆಳಕಿಗೆ ಬರಬೇಕಾದರೆಅದಕ್ಕೊಂದು ಸೂಕ್ತ ವೇದಿಕೆ ಬೇಕು. ಅಂತಹ ವೇದಿಕೆಯನ್ನುಜ್ಞಾನಸುಧಾ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ನೀಡಿ ಅವರ ಪ್ರತಿಭೆಯನ್ನುಅನಾವರಣಗೊಳಿಸುವ ಕಾರ್ಯದಲ್ಲಿ ತೊಡಗಿರುವುದು ಅಭಿನಂದನೀಯ ಎ೦ದರು. 

ಇದೇ ಸಂದರ್ಭದಲ್ಲಿ ಕಾರ್ಕಳ ಪುರಸಭೆ ಹಾಗೂ ಕುಕ್ಕುಂದೂರು ಮತ್ತುಅಜೆಕಾರು ವ್ಯಾಪ್ತಿಯ ೪೭ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಜೆ.ಇ.ಇ.ಮೈನ್ ಪರೀಕ್ಷೆಯಲ್ಲಿ 98ಕ್ಕಿಂತ ಹೆಚ್ಚು ಪರ್ಸೆಂಟೈಲ್ ಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 600 ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಜ್ಞಾನಸುಧಾ ಪತ್ರಿಕೆಯ ೩೦ನೇ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಜ್ಞಾನಸುಧಾದದ ಶಮಾನೋತ್ಸವದ ಸಂಭ್ರಮದಲ್ಲಿ  ಕಳೆದ ಹತ್ತುವರ್ಷಗಳಿಂದ ಸಂಸ್ಥೆಯಲ್ಲಿ ಸೇವೆಸಲ್ಲಿಸುತ್ತಿರುವ ಉದ್ಯೋಗಿಗಳನ್ನು ಸನ್ಮಾನಿಸಲಾಯಿತು. 

ಇದೇ ಸಂದರ್ಭ ಕಾರ್ಕಳ ಪುರಸಭೆ ವ್ಯಾಪ್ತಿಯ ಪೌರಕಾರ್ಮಿಕರ ಮಕ್ಕಳು ಮುಂದಿನ ದಿನಗಳಲ್ಲಿ ಇಂಜಿನಿಯರಿ೦ಗ್ ಪ್ರವೇಶಾತಿಯನ್ನು ಗಳಿಸಿದರೆ ರೂ.10ಸಾವಿರ ಹಾಗೂ ವೈದ್ಯಕೀಯ ಪದವಿಗೆ ಪ್ರವೇಶಾತಿಯನ್ನು ಗಳಿಸಿದರೆ ರೂ.20ಸಾವಿರವನ್ನು ಅಜೆಕಾರು ಪದ್ಮಗೋಪಾಲ್‌ಎಜ್ಯುಕೇಶನ್‌ಟ್ರಸ್ಟ್ನ ವತಿಯಿಂದ ನೀಡಲಾಗುವುದೆಂದು ಟ್ರಸ್ಟ್ ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಘೋಷಿಸಿದರು. 

ಎ.ಪಿ.ಜಿ.ಇ.ಟಿ ವತಿಯಿಂದಡಾ.ಸುಧಾಕರ್ ಶೆಟ್ಟಿಯವರು ನೂತನ ಸಚಿವರಿಗೆಅಭಿನಂದನೆಯನ್ನು ಸಲ್ಲಿಸಿದರು. ಉಪನ್ಯಾಸಕಿ ಶ್ರೀಮತಿ ಸಂಗೀತಾ ಕಾರ್ಯಕ್ರಮ ನಿರೂಪಿಸಿ, ಎ.ಪಿ.ಜಿ.ಇ.ಟಿ ಟ್ರಸ್ಟಿ ಕರುಣಾಕರ್ ಶೆಟ್ಟಿ ಸ್ವಾಗತಿಸಿ, ಪಿ.ಆರ್.ಓಜ್ಯೋತಿಪದ್ಮನಾಭ ಭಂಡಿ ವಂದಿಸಿದರು. 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget