ಸುನೀಲ್ ಕುಮಾರ್ ಖಾತೆ ಮೇಲೆ ಆನಂದ್ ಸಿಂಗ್ ಕಣ್ಣು!-Times of karkala

 

ಇಂಧನ ಖಾತೆ ಮೇಲೆ ಕಣ್ಣಿಟ್ಟಿರುವ ಆನಂದ್ ಸಿಂಗ್ ಖಾತೆ ಬದಲಾವಣೆ ಮಾಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದರು.

ಹೊಸಪೇಟೆಯ ಶಾಸಕ ಕಚೇರಿಯ ಬೋರ್ಡ್ ತೆಗೆಸಿ, ಬಾಗಿಲು ಬಂದ್ ಮಾಡಿಸಿದ್ದ ಆನಂದ್ ಸಿಂಗ್ ಸಚಿವ ಸ್ಥಾನದ ಜೊತೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವ ಸುಳಿವು ನೀಡಿದ್ರು. ಈ ಬೆಳವಣಿಗೆ ಬಿಜೆಪಿಯನ್ನು ಕಂಗಾಲು ಮಾಡಿತ್ತು. ರಾತ್ರೋರಾತ್ರಿ ಬಿಎಸ್‍ವೈ ಮನೆಗೆ ತೆರಳಿದ್ದ ಸಿಎಂ ಬೊಮ್ಮಾಯಿ ಚರ್ಚೆ ನಡೆಸಿದ್ದರು. ಹೈಕಮಾಂಡ್‍ಗೂ ಸುದ್ದಿ ಮುಟ್ಟಿಸಿದ್ರು. ಆನಂದ್ ಸಿಂಗ್ ಸಂಪರ್ಕಿಸಲು ಬಿಜೆಪಿಯ ಘಟಾನುಘಟಿಗಳು ಪ್ರಯತ್ನಿಸಿದ್ರೂ ಸಫಲ ಆಗಿರಲಿಲ್ಲ.

ಆದರೆ ಕೊನೆಯ ಕ್ಷಣದಲ್ಲಿ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಸಂಜೆ ಸಿಎಂ ಜೊತೆ ನಡೆಸಿದ ಸಂಧಾನ ಸಭೆ ಸಕ್ಸಸ್ ಆಗಿದೆ. ಈ ಹಿಂದೆ ಪ್ರತ್ಯೇಕ ಜಿಲ್ಲೆಗೆ ಪಟ್ಟು ಹಿಡಿದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ಆನಂದ್ ಸಿಂಗ್ ಈಗ ಪ್ರಬಲ ಖಾತೆಗೆ ಪಟ್ಟು ಹಿಡಿದು ರಾಜೀನಾಮೆಯ ದಾಳ ಉರುಳಿಸಿದ್ದರು.

ಇದೇ ಮೊದಲ ಬಾರಿಗೆ ಸಚಿವರಾಗಿ ಆಯ್ಕೆಯಾಗಿರುವ ಕಾರ್ಕಳ ಕ್ಷೇತ್ರದ ಶಾಸಕ ವಿ ಸುನೀಲ್‌ ಕುಮಾರ್‌ ಅವರಿಗೂ ಬಲಿಷ್ಠ ಖಾತೆಯನ್ನೇ ಬಿಜೆಪಿ ನೀಡಿದೆ. ಸುನೀಲ್‌ ಕುಮಾರ್‌ ಅವರಿಗೆ ಇಂಧನ ಖಾತೆ ಸಿಕ್ಕಿದೆ. ಈ ಹಿಂದೆ ಬಲಿಷ್ಠ ನಾಯಕರು ಹಾಗೂ ಹಲವು ಬಾರಿ ಸಚಿವರಾದವರು ಈ ಖಾತೆಯನ್ನು ನಿರ್ವಹಿಸುತ್ತಿದ್ದರು. ಆದರೆ ಈ ಬಾರಿ ಇಂಧನ ಖಾತೆ ಸಿಎಂ ಬಸವರಾಜ ಬೊಮ್ಮಾಯಿಯವರ ಕ್ಯಾಬಿನೆಟ್‌ನಲ್ಲಿ ಮೊದಲ ಬಾರಿಗೆ ಸಚಿವನಾಗಿ ಸ್ಥಾನ ಪಡೆದಿರುವ ಸುನಿಲ್‌ ಕುಮಾರ್‌ ಅವರ ಪಾಲಾಗಿದೆ.

 ಜಾಹೀರಾತು 







Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget