'ಸಚಿವನಾಗಿರುವುದರ ಕೀರ್ತಿ ಕಾರ್ಕಳ ಜನತೆಗೆ ಸಲ್ಲಬೇಕು,ಅಧಿಕಾರವನ್ನು ಜನರ ಸೇವೆಗೆ ಹಾಗೂ ಅಭಿವೃದ್ಧಿಗೆ ಮೀಸಲಿಡುತ್ತೇನೆ"-ಸಚಿವ ಸುನೀಲ್ ಕುಮಾರ್ ನೂತನ ಸಚಿವರಾಗಿ ಕಾರ್ಕಳಕ್ಕೆ ಆಗಮಿಸಿದ ಸುನಿಲ್ ಕುಮಾರ್ ಅವರಿಗೆ ಅಭಿಮಾನಿಗಳಿಂದ‌ ಅದ್ದೂರಿ ಸ್ವಾಗತ-Times of karkala

 


'ಸಚಿವನಾಗಿರುವುದರ ಕೀರ್ತಿ ಕಾರ್ಕಳ ಜನತೆಗೆ ಸಲ್ಲಬೇಕು,ಅಧಿಕಾರವನ್ನು ಜನರ ಸೇವೆಗೆ ಹಾಗೂ ಅಭಿವೃದ್ಧಿಗೆ ಮೀಸಲಿಡುತ್ತೇನೆ"-ಸಚಿವ ಸುನೀಲ್ ಕುಮಾರ್ 

 

ಕಾರ್ಕಳ:"ತಾಲೂಕಿನ ಮತದಾರರು ಚುನಾಯಿಸಿದರ ಫಲವಾಗಿ ನಾನು ಶಾಸಕನಾಗಿದ್ದೇನೆ. ಚಿಕ್ಕಮಗಳೂರಿನಿಂದ ಕರೆತಂದು ಶಾಸಕನಾಗಿ ಗೆಲ್ಲಿಸಿದ್ದಾರೆ.ಹಿಂದುತ್ವ,ಅಭಿವೃದ್ಧಿ, ಯುವನಾಯಕತ್ವ.ಹಿಂದುತ್ವ ನನ್ನ ಬದ್ದತೆ, ಅಭಿವೃದ್ಧಿ ನನ್ನ ಮಂತ್ರ, ಯುವನಾಯಕತ್ವ ನನ್ನ ಶಕ್ತಿ ಎಂದು ಮಾರ್ಮಿಕವಾಗಿ ನುಡಿದರು. ಹೋರಾಟದ ಫಲವಾಗಿ ಇಂದು ಪಕ್ಷ ಜವಾಬ್ದಾರಿ ಕೊಟ್ಟಿದೆ. ವಿಧಾನಸೌಧಕ್ಕೆ ಶಾಸಕನಾಗಿ ಹೋಗುತ್ತೇನೆಂಬ ಕನಸು ಕೂಡ ಕಾಣದ ನನಗೆ ಕಾರ್ಕಳ ಜನತೆ ಅವಕಾಶ ಮಾಡಿಕೊಟ್ಟಿದ್ದಾರೆ. ಅಧಿಕಾರ ಕೇವಲ ಮೆರೆಯುವುದಕ್ಕಲ್ಲ ಅದು ಜನರ ಸೇವೆಗೆ ಹಾಗೂ ಅಭಿವೃದ್ಧಿಗೆ ಮೀಸಲಿಡುತ್ತೇನೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು. 

ಕಾರ್ಕಳದ ಬಂಡಿಮಠದಲ್ಲಿ ನಡೆದ  ಅಭಿನಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಮಾತನಾಡಿದರು. 

ಹೆಜಮಾಡಿ ಮೂಲಕ ಸುನೀಲ್ ಕುಮಾರ್ ಉಡುಪಿ ಜಿಲ್ಲೆಗೆ ಆಗಮಿಸಿದರು. ಬೆಳ್ಮಣ್ ನಲ್ಲಿ ಸಚಿವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಬಿಜೆಪಿ ನಾಯಕರು, ಕಾರ್ಯಕರ್ತರು ಬರಮಾಡಿಕೊಂಡರು.        

ಒಬ್ಬ ಜನಪ್ರತಿನಿಧಿ  ಉತ್ತಮ ಕೆಲಸಗಳಿಂದ ಆ ಕ್ಷೇತ್ರದ ಜನರ ,ಮತದಾರರ ಮನಗೆಲ್ಲಲು ಸಾಧ್ಯವಾಗುತ್ತದೆ ಎನ್ನುವುದಕ್ಕೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಸಾಕ್ಷಿ ಎಂದು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಸುಧಾಕರ ಶೆಟ್ಟಿ ಹೇಳಿದರು.

ಶಾಸಕರು ಜನಪ್ರತಿನಿಧಿಯಾಗಿ ತನ್ನ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ ಜನನಾಯಕ, ಅವರಿಗೆ ಸಚಿವ ಸ್ಥಾನದ ಅದೃಷ್ಟದಿಂದ ದಕ್ಕಿದ್ದಲ್ಲ ಅದು ಸಾಧನೆಗೆ ಸಂದ ಗೌರವ ಎಂದರು. ಅವರ ಸಾಧನೆಯನ್ನು  ಗುರುತಿಸಿ ಬೆಳೆಸುವ ನಿಟ್ಟಿನಲ್ಲಿ ಪತ್ರಕರ್ತರ ಕೊಡುಗೆಯೂ ಮುಖ್ಯವಾಗಿದೆ ಎಂದರು. 

ಬಿಜೆಪಿ ಹಿರಿಯ ಮುಖಂಡರು ಹಾಗೂ ಹಿರಿಯ ವಕೀಲರಾದ ಎಂ ಕೆ ವಿಜಯಕುಮಾರ್ ಮಾತನಾಡಿ,ಕಾರ್ಕಳದಿಂದ ಈ‌ಹಿಂದೆ ಸಾಕಷ್ಟು ಬಾರಿ ಆಯ್ಕೆಯಾದ ಯಾವ ಜನಪ್ರತಿನಿಧಿಗಳೂ ಸುನಿಲ್ ಕುಮಾರ್ ಅವರಷ್ಟು ಕ್ಷೇತ್ರದ ಅಭಿವೃದ್ಧಿ ನಡೆದಿಲ್ಲ. ಸಚಿವ ಸ್ಥಾನ ಎನ್ನುವುದು ಕೇವಲ ಅಧಿಕಾರವಲ್ಲ ಅದೊಂದು ಜವಾಬ್ದಾರಿ, ಸುನಿಲ್ ಕುಮಾರ್ ಕಾರ್ಕಳ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲಿ ಎಂದು ಶುಭಕೋರಿದರು.                          

ಕಾರ್ಕಳ ಬಿಜೆಪಿ ಹಾಗೂ ಸಮಸ್ತ ಜನತೆಯ ಪರವಾಗಿ ಸಚಿವ ಸುನಿಲ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.ಈ‌ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಬೋಳ ಪ್ರಭಾಕರ ಕಾಮತ್, ಎಂ ಕೆ ವಿಜಯಕುಮಾರ್,  ಶಾಸಕರಾದ ಸುಕುಮಾರ್ ಶೆಟ್ಟಿ,ಲಾಲಾಜಿ ಮೆಂಡನ್, ಹರೀಶ್ ಪೂಂಜಾ, ಭರತ್ ಶೆಟ್ಟಿ ,ಕಾರ್ಕಳ ಬಿಜೆಪಿ ಅಧ್ಯಕ್ಷ ಮಹಾವೀರ ಹೆಗ್ಡೆ, ಭಾಸ್ಕರ ಕೋಟ್ಯಾನ್, ಮಹೇಶ್ ಶೆಟ್ಟಿ ತೆಳ್ಳಾರು, ಮಟ್ಟಾರು ರತ್ನಾಕರ್ ಹೆಗ್ಡೆ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮುಂತಾದವರು ಉಪಸ್ಥಿತರಿದ್ದರು.  ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ  ಸ್ವಾಗತಿಸಿದರು.

 ಜಾಹೀರಾತು 


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget