ಅತ್ಯಾಚಾರದಂಥ ಗಂಭೀರ ಪ್ರಕರಣಗಳು ನಡೆಯುತ್ತಿರುವಾಗ ಬಿಜೆಪಿ ನಾಯಕರು ಬಾಲಿಷ ಹೇಳಿಕೆ ನೀಡುವುದರಲ್ಲಿ ನಿರತರಾಗಿದ್ದಾರೆ:ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜಾ-Times of karkala

 ಅತ್ಯಾಚಾರದಂತಹ ಹೀನಾಯ ಪ್ರಕರಣಗಳು ನಡೆದಾಗ ರಾಜ್ಯದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಗ್ರಹ ಸಚಿವ ಅರಗಜ್ಞಾನೇಂದ್ರರವರು, "ಕಾಂಗ್ರೆಸ್ನವರು ನನಗೆ ರೇಪ್ ಮಾಡಲು ಯತ್ನಿಸುತ್ತಿದ್ದಾರೆ" ಹಾಗೂ "ಸಂತ್ರಸ್ತೆ ನಿರ್ಜನ ಪ್ರದೇಶಕ್ಕೆ ಯಾಕೆ ಹೋದರು" ಇಂತಹ ಸಂವೇದನರಹಿತವಾಗಿ ಹೇಳಿಕೆಗಳನ್ನು ಕೊಡುವುದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರು ಗ್ರಹಸಚಿವರು ನೆಗೆಟಿವ್ ಆಗಿ ಹೇಳಿಕೆ ನೀಡಿಲ್ಲ ಅಂತ ಅವರ ಹೇಳಿಕೆಯನ್ನು ಸಮರ್ಥಿಸುವುದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೋರಾಟಗಾರರಂತೆ ಮಾತನಾಡಲು ಆಗುವುದಿಲ್ಲ ಅಂತ ಹೇಳುವುದು, ಮುಖ್ಯಮಂತ್ರಿಗಳು ಆರಗ ಜ್ಞಾನೇಂದ್ರರವರ ಹೇಳಿಕೆಗೆ ನನ್ನ ಸಹಮತವಿಲ್ಲ ಅಂತ ಹೇಳುವುದು ನಂತರ ಗ್ರಹ ಸಚಿವರೇ ನೀಡಿದ ಹೇಳಿಕೆಗೆ ವಿಷಾದ ವ್ಯಕ್ತ ಪಡಿಸುವುದು ಅತ್ಯಾಚಾರದಂತ ಗಂಭೀರ ಪ್ರಕರಣಗಳು ದೇಶಾದ್ಯಂತ ಸುದ್ದಿಯಾದಾಗ ಜನರ ಗಮನವನ್ನು ಬೇರೆಡೆ ಸೆಳೆಯುವ ಕುತಂತ್ರದ ರಾಜಕೀಯ ಮಾಡುವುದರಲ್ಲಿ ಬಿಜೆಪಿಯವರು ನಿರತರಾಗಿದ್ದಾರೆ.


ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂತಹ ಬಾಲಿಶ ಹೇಳಿಕೆ ನೀಡುವುದರಿಂದ ಕಾನೂನು ಬಾಹಿರ ಚಟುವಟಿಕೆ ಮಾಡುವವರಿಗೆ ಲಂಗು-ಲಗಾಮು ಇಲ್ಲದಂತಾಗಿದೆ.ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಾ ಹೋಗುತ್ತಿದ್ದು ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಬಂಟ್ವಾಳ ತಾಲೂಕಿನ ಕಾರಿಂಜ ದೇವಸ್ಥಾನಕ್ಕೆ ಪ್ರವಾಸಕ್ಕೆ ಬಂದಿದ್ದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಸಂಘಪರಿವಾರದ ಕಾರ್ಯಕರ್ತರನ್ನಲಾದ ತಂಡವು ಗೂಂಡಾಗಿರಿ ಮಾಡಿದ್ದು ದೂರು ದಾಖಲಾಗಿದೆ.


ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆ ಬರುತ್ತಿದ್ದು ಬಿಜೆಪಿ ಸರಕಾರದ ಆಡಳಿತ ವೈಫಲ್ಯ,  ಕೊರೊನಾ ನಿರ್ವಹಣೆಯಲ್ಲಿನ ವೈಫಲ್ಯತೆ ಜನರಿಗೆ ಮನದಟ್ಟಾಗುತ್ತಿದ್ದು ಇದನ್ನು ಅರಿತ ಬಿಜೆಪಿ ಪಕ್ಷದವರು ಜನರ ನಡುವೆ ಮತೀಯ ವೈಷಮ್ಯವನ್ನು ಹುಟ್ಟುಹಾಕಿ ತನ್ನ ರಾಜಕೀಯ ಲಾಭವನ್ನು ಬೇಯಿಸಿಕೊಳ್ಳಲು ಈಗಾಗಲೇ ಆರಂಭಿಸಿದ್ದಾರೆ. ರಾಜ್ಯ ಗೃಹ ಇಲಾಖೆಯು ಸೂಕ್ತ ಮುನ್ನೆಚ್ಚರಿಕೆ ವಹಿಸಿ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಮೈಸೂರಿನ ಲಲಿತಾದ್ರಿಪುರ ಗುಡ್ಡದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ನೊಂದ ಯುವತಿಗೆ ನ್ಯಾಯ ಒದಗಿಸಬೇಕು ಹಾಗೆಯೇ ಕಾನೂನನ್ನು ಕೈಗೆತ್ತಿಕೊಳ್ಳುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

 ಜಾಹೀರಾತು Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget