ದುರ್ಗಾ:ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ,ದೂರು ದಾಖಲು-Times of karkala

ವ್ಯಕ್ತಿಯೋರ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ಕಾರ್ಕಳ ತಾಲೂಕಿನ ದುರ್ಗ ಗ್ರಾಮದ ಕಡಂಬಳ ಸರ್ವೋದಯ ಮೈದಾನದಲ್ಲಿ ನಡೆದಿದೆ.ದುರ್ಗ ನಿವಾಸಿ ನವೀನ (27), ಹಲ್ಲೆಗೊಳಗಾದವರು.

ಆ.8 ರಂದು ಸಂಜೆಹೊತ್ತಿಗೆ  ನವೀನ್ ಸ್ನೇಹಿತರೊಂದಿಗೆ ಮೈದಾನದಲ್ಲಿ ಮಾತನಾಡುತ್ತ ನಿಂತಿದ್ದಾಗ ಆರೋಪಿಗಳಾದ ನಿತೇಶ,ಹರೀಶ,ಅಕ್ಷಯ ಎಂಬುವವರು ಬೈಕ್ ನಲ್ಲಿ ಬಂದು ಅವಾಚ್ಯ ಶಬ್ದಗಳಿಂದ ಬೈಯ್ಯಲು ಶುರು ಮಾಡಿದ್ದು ಆಗ ನವೀನ್ ರವರು  ಅವರಲ್ಲಿ ಇಲ್ಲಿ ಕುಟುಂಬಸ್ಥರ ಮನೆಯಿದ್ದು ನೀವು ಇಲ್ಲಿ ಈ ರೀತಿಯಾಗಿ ನಡೆದುಕೊಳ್ಳುವುದು ಸಂಸ್ಕೃತಿಯಲ್ಲವೆಂದು ತಿಳಿಹೇಳಿದ್ದಾರೆ. 

ಇದರಿಂದ ಕೋಪಗೊಂಡ ಆರೋಪಿಗಳು ನವೀನ್ ರವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ.ಕೂಡಲೇ ನವೀನ್ ಬೊಬ್ಬೆ ಹಾಕಿದಾಗ ಅಕ್ಕ ಪಕ್ಕದವರು ಬರುತ್ತಿದ್ದುದ್ದನ್ನು ಆರೋಪಿಗಳು  ಬೆದರಿಕೆ ಹಾಕಿ ಓಡಿ ಹೋಗಿದ್ದಾರೆ.ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಜಾಹೀರಾತು 








Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget