ಕೋವಿಡ್ ಸಂಕಷ್ಟದ ‌ಸಂದರ್ಬದಲ್ಲಿ ಜನ ಸಂಪರ್ಕ ಮಾಡದವರಿಗೆ ಜನಾಶೀರ್ವಾದ ಸಿಗುವುದೆ?-ಕಾಂಗ್ರೇಸ್ ವಕ್ತಾರ ಶುಭದರಾವ್ ಪ್ರಶ್ನೆ-Times of karkala

ಕೋವಿಡ್ ಸಂಕಷ್ಟದ ‌ಸಂದರ್ಬದಲ್ಲಿ ಜನ ಸಂಪರ್ಕ ಮಾಡದವರಿಗೆ ಜನಾಶೀರ್ವಾದ ಸಿಗುವುದೆ?-ಕಾಂಗ್ರೇಸ್ ವಕ್ತಾರ ಶುಭದರಾವ್ ಪ್ರಶ್ನೆ


ಕೋವಿಡ್ ಸಂಕಷ್ಟದ ‌ಸಂದರ್ಬದಲ್ಲಿ ಜನ ಸಂಪರ್ಕ ಮಾಡದವರಿಗೆ ಜನಾಶೀರ್ವಾದ ಸಿಗುವುದೆ ಎಂದು ಜನಾಶೀರ್ವಾದ ನಡೆಸುವ ಬಿಜೆಪಿ ನಾಯಕರನ್ನು ಕಾಂಗ್ರೇಸ್ ವಕ್ತಾರ ಶುಭದರಾವ್ ಪ್ರಶ್ನಿಸಿದ್ದಾರೆ. ಕೋವಿಡ್ ಸಂದರ್ಬದಲ್ಲಿ ಜನರು ಅನುಭವಿಸಿದ ನೋವು ಊಹಿಸಲೂ ಅಸಾದ್ಯ,.ಸೂಕ್ತ ಸಮಯದಲ್ಲಿ ಚಿಕಿತ್ಸೆ ‌ಸಿಗದೆ‌ ಲಕ್ಷಾಂತರ ಜನ ಪ್ರಾಣವನ್ನೇ ಕಳೆದುಕೊಂಡಿದ್ದಾರೆ, ಕೆಲಸ ಕಳೆದಕೊಂಡವರು ತುತ್ತು ಅನ್ನ‌ವೂ ಸಿಗದೆ ಜೀವನ ಸಾಗಿಸಿದ್ದಾರೆ, ಅನೇಕ ವ್ಯಾಪಾರಿಗಳು ನಷ್ಟ ‌ಸಹಿಸಲಾಗದೆ  ಆತ್ಮಹತ್ಯೆಗೆ ಶರಣಾಗಿದ್ದಾರೆ, ಅಷ್ಟು ಸಾಲದ್ದಕ್ಕೆ ಉದ್ಯೋಗಿಗಳು ಸಂಬಳವಿಲ್ಲದೆ ಕಷ್ಟ ಪಡುತ್ತಿದ್ದಾಗ ಗಾಯದ ಮೇಲೆ ಬರೆ ಎಳೆದಂತೆ  ಬೆಲೆ ಏರಿಕೆ ಮಾಡಿ ಬದುಕನ್ನು ಮತ್ತಷ್ಟು ದುರ್ಬರ ಮಾಡಿದ್ದೀರಿ, ಹೀಗಿರುವಾಗ ಯಾತ್ರೆ ಮಾಡಿ‌ ಸಾಧಿಸುವುದಾದರೂ ಏನುನ್ನು?  ಅಂದು ಸಂಕಷ್ಟಕ್ಕೆ ಸ್ಪಂದಿಸದವರಿಗೆ‌ ಇನ್ನೆಂದೂ ಜನಾಶೀರ್ವಾದ ಸಿಗಲು‌ ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. 

ರಾಜ್ಯದಲ್ಲಿ ಅಧಿಕಾರವಿದ್ದರೂ ಸ್ಥಿರ ಸರಕಾರ‌ ನಡೆಸುವ ಅರ್ಹತೆ ನಿಮಗಿಲ್ಲ, ಮಂತ್ರಿಗಳು, ಶಾಸಕರು ಪರಸ್ಪರ ಕೆಸರೆರಚಾಟ‌ ನಡೆಸುತ್ತಿದ್ದಾರೆ‌, ಕೋವಿಡ್ ನಿಯಮಗಳನ್ನು ಉಲಂಘಿಸಿ‌ ಸಚಿವರಿಗೆ ಸನ್ಮಾನ ನಡೆಯುತ್ತಿದೆ,‌ ಪುಸ್ತಕ ಕೊಡಿ ಎಂದವರ ಪರವಾನಿಗೆ ಇಲ್ಲದ ಪ್ಲೆಕ್ಸ್ ಬ್ಯಾನರುಗಳು ಊರಿಡಿ ರಾರಾಜಿಸುತ್ತಿವೆ ಸಚಿವರಿಗೊಂದು ನ್ಯಾಯ‌ ಜನಸಾಮಾನ್ಯರಿಗೊಂದು ನ್ಯಾಯ ಇದು ಸರಿಯೇ?  ಪ್ರತೀ‌ ದಿನ‌ ನಡೆಯುವ ನಿಮ್ಮ ಡೊಂಬರಾಟದಿಂದ ಜನರು ಬೇಸತ್ತಿದ್ದಾರೆ. ಸ್ಪಂದಿಸಬೇಕು‌ ಎಂಬ ಮನಸ್ಸಿದ್ದರೆ ಹಿಂದಿನ ಕಾಂಗ್ರೇಸ್ ಸರಕಾರದ ಮಾದರಿಯಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿ ಜನರ‌ ಸಂಕಷ್ಟಕ್ಕೆ ಸಂದಿಸಿ‌ ಎಂದು ಆಗ್ರಹಿಸುತ್ತೇನೆ. ನೀವು ಎಲ್ಲವನ್ನೂ ಮರೆತಿರಬಹುದು ಆದರೆ ಜನರು‌ ಯಾವುದನ್ನೂ ಮರೆಯದೆ ನೆನಪಿಟ್ಟುಕೊಂಡಿದ್ದಾರೆ‌ ಎಂದು‌ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
 ಜಾಹೀರಾತು 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget