ಕಾರ್ಕಳ:ಸುನೀಲ್ ಕುಮಾರ್ ಸಚಿವರಾಗುತ್ತಿದ್ದಂತೆ ಕಾರ್ಕಳದಲ್ಲಿ ಮುಗಿಲು ಮುಟ್ಟಿದ ಸಂಭ್ರಮಾಚರಣೆ,ಗಣ್ಯರ ಶುಭಹಾರೈಕೆ-Times of karkala

ಕಾರ್ಕಳ, ಆ.4:ಕಾರ್ಕಳ ಶಾಸಕ ಸುನೀಲ್ ಕುಮಾರ್ ಸಚಿವರಾಗುತ್ತಿದ್ದಂತೆ ಕಾರ್ಕಳದಲ್ಲಿ ಬಿಜೆಪಿ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.ಈ ಸಂಧರ್ಭ ಗಣ್ಯರು ಕಾರ್ಕಳ ಸುನೀಲ್ ಕುಮಾರ್ ರವರಿಗೆ ಶುಭಹಾರೈಸಿದ್ದಾರೆ.

"ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಸಚಿವ ಸಂಪುಟದಲ್ಲಿ  ಸ್ಥಾನ  ದೊರಕಿರುವುದು ಸಮಸ್ತ ಕಾರ್ಕಳ ಜನತೆಗೆ ಹರ್ಷ ತಂದಿದೆ. ಅವರ ಅವಧಿಯಲ್ಲಿ  ನಾಡು ಹಾಗೂ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳು  ಆಗಲಿ" ಎಂದು ಬಿಜೆಪಿ ಹಿರಿಯ ಮುಖಂಡ ಬೋಳ‌ ಪ್ರಭಾಕರ್ ಕಾಮತ್ ಹೇಳಿದರು.

ಬಿಜೆಪಿ ಹಿರಿಯ ಮುಖಂಡ ಹಾಗೂ ವಕೀಲ ಎಂ ಕೆ ವಿಜಯಕುಮಾರ್ ಮಾತನಾಡಿ "ಸ್ವರ್ಣ ಕಾರ್ಕಳ, ಸ್ವಚ್ಚ ಕಾರ್ಕಳದ ಕನಸು ಕಂಡಿರುವ ಸುನಿಲ್ ಕುಮಾರ್ ಇಂದು‌ ಸಚಿವರಾಗಿ ಪ್ರಮಾಣ ವಚನ‌ ಸ್ವೀಕರಿಸಿರುವುದು ಹಮ್ಮೆಯ‌ ವಿಚಾರ. ಸಚಿವರಾಗಿ ಅವರು ಇನ್ನಷ್ಟು ಜನಪರ ಕೆಲಸ ಮಾಡುವಂತಾಗಲಿ" ಎಂದು ಶುಭಹಾರೈಸಿದರು.

ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಮಾಜಿ ಉಪಾಧ್ಯಕ್ಷ ಜೋಡುರಸ್ತೆ ಪೂರ್ಣಿಮಾ ಸಿಲ್ಕ್ಸ್ ಮಾಲಕ ರವಿಪ್ರಕಾಶ್ ಪ್ರಭು ಮಾತನಾಡಿ "ಅಭಿವೃದ್ಧಿ ಹರಿಕಾರರಾದ ಶಾಸಕ ಸುನೀಲ್ ಕುಮಾರ್ ಅಭಿವೃದ್ಧಿಯಲ್ಲಿ ಕಾರ್ಕಳವನ್ನು ನಂಬರ್ ವನ್ ಮಾಡಿದ್ದು, ರಾಜ್ಯವೇ ಗುರುತಿಸುವಂತೆ ಮಾಡಿದ್ದಾರೆ.ಇದೀಗ ಮಂತ್ರಿಯಾಗಿ ರಾಜ್ಯಮಟ್ಟದಲ್ಲಿಯೂ ಅತ್ಯುತ್ತಮ ಸೇವೆಗೈದು ಜನಮನ್ನಣೆ ಗಳಿಸಿ, ರಾಜ್ಯಮಟ್ಟದಲ್ಲಿ ಉತ್ತಮ ನಾಯಕನಾಗಿ ಹೊರಹೊಮ್ಮಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಸಕ  ಸುನೀಲ್  ಸಚಿವರಾಗಿ ಪ್ರಮಾನವಚನ ಸ್ವೀಕರಿಸುವ ಮೊದಲು ಕಾರ್ಕಳ ಬಿಜೆಪಿ ಕಚೇರಿಯಲ್ಲಿ,ಜೋಡುರಸ್ತೆ ಪೂರ್ಣಿಮಾ ಸಿಲ್ಕ್ಸ್ ಬಳಿ ಸೇರಿದಂತೆ ವಿವಿಧೆಡೆ ಕಾರ್ಕಳ ಬಿಜೆಪಿ ವತಿಯಿಂದ ಪಟಾಕಿ ಹೊಡೆದು ಹರ್ಷ ವ್ಯಕ್ತ ಪಡಿಸಲಾಯಿತು.  

ಈ ಸಂದರ್ಭ ನಗರ ಬಿಜೆಪಿ ಅಧ್ಯಕ್ಷ ರವೀಂದ್ರ ಮೊಯ್ಲಿ,ಟಿ.ಮಾಜಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಚಂದ್ರ ನಾಯಕ್, ಕಾರ್ಕಳ ಪುರಸಭಾ ಉಪಾಧ್ಯಕ್ಷ ರಾದ ಪಲ್ಲವಿ ಪ್ರವೀಣ್  ಕಾರ್ಕಳ ತಾಲೂಕು ಯುವಮೋರ್ಚಾ ಅಧ್ಯಕ್ಷ ಮುಟ್ಲಪಾಡಿ  ಸುಹಾಸ್ ಶೆಟ್ಟಿ  ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು. ಜಾಹೀರಾತು 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget