ಅಜೆಕಾರಿನಲ್ಲಿ ಬೃಹತ್ ರಕ್ತದಾನ ಶಿಬಿರ.-Times of karkala

ಅಜೆಕಾರಿನಲ್ಲಿ ಬೃಹತ್ ರಕ್ತದಾನ ಶಿಬಿರ.                                                 

ಅಜೆಕಾರು: ಹಿಂದೂ ಜಾಗರಣ ವೇದಿಕೆ  ಅಜೆಕಾರು ವಲಯ,ಅಭಯಹಸ್ತ ಹೆಲ್ಪ್ ಲೈನ್ ಉಡುಪಿ, ರಕ್ತ ನಿಧಿ ವಿಭಾಗ ಕೆಎಂಸಿ ಮಣಿಪಾಲ, ದತ್ತಾತ್ರೇಯ ಮಹಿಳಾ ಭಜನಾ‌ ಮಂಡಳಿ, ಮರಾಠಿ ಸಮಾಜ ಸೇವಾ ಸಂಘ ಕಾಡುಹೊಳೆ ಅಜೆಕಾರು ವಲಯ,ಮಹಾದೇವಿ ಭಜನಾ ಮಂಡಳಿಮರ್ಣೆ ಅಜೆಕಾರು,ಆಂಜನೇಯ ಭಜನಾ‌ ಮಂಡಳಿ ಶಿರ್ಲಾಲು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅಜೆಕಾರು ವಲಯ ಇವುಗಳ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರವು ಅಜೆಕಾರು ರಾಮ ಮಂದಿರದಲ್ಲಿ ಭಾನುವಾರ ನಡೆಯಿತು.            
ಕಾಡುಹೊಳೆ ಜಂಗಮೇಶ್ವರ ಮಠದ ಪ್ರಧಾನ ಅರ್ಚಕರಾದ ಗುಡ್ಡೆಯಂಗಡಿ ರಾಘವೇಂದ್ರ ಭಟ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ರಕ್ತದಾನ ಮಹಾದಾನ, ಒಬ್ಬರ ಜೀವವನ್ನು ಉಳಿಸುವುದು ಪುಣ್ಯದ ಕೆಲಸ,ನಮ್ಮ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ರಕ್ತದಾನ ಮಾಡುವುದು ಒಳ್ಳೆಯದು ಎಂದರು. ಮುಖ್ಯ ಅತಿಥಿಗಳಾಗಿ ಎಪಿಎಂಸಿ ಅಧ್ಯಕ್ಷ ರತ್ನಾಕರ್ ಅಮೀನ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ  ರಕ್ತದ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಉಡುಪಿ ಜಿಲ್ಲೆಯ ಸುಮಾರು 200 ಕಡೆಗಳಲ್ಲಿ ರಕ್ತದಾನ ಶಿಬಿರ ನಡೆಸಲಾಗಿದೆ, ರಕ್ತದಾನದಿಂದ ಒಬ್ಬರ ಜೀವವನ್ನು ಉಳಿಸುತ್ತದೆ, ನಮ್ಮ ಸಂಘಟನೆ ಇಂತಹ ಸಾಮಾಜಿಕ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ, ಮಾತ್ರವಲ್ಲದೇ ಜಾಗರಣ ವೇದಿಕೆಯ ಮೂಲಕ ಧಾರ್ಮಿಕ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದ್ದು, ಧರ್ಮ ರಕ್ಷಣೆಗೆ ನಾವೆಲ್ಲರೂ  ಒಗ್ಗಟ್ಟಾಗಬೇಕೆ‌ಂದು ಕರೆ‌ ನೀಡಿದರು. ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತರನ್ನು ಗೌರವಿಸಲಾಯಿತು.      
            
ಮುಖ್ಯ ಅತಿಥಿಗಳಾಗಿ ಬಿಜೆಪಿ ಹಿರಿಯ ಮುಖಂಡ ನಂದಕುಮಾರ್ ಹೆಗ್ಡೆ,  ಅಭಯ ಹಸ್ತ ಹೆಲ್ಫ್ ಲೈನ್ ಅಧ್ಯಕ್ಷ    ರಾಜೇಶ್ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ರತ್ನಾಕರ್ ಅಮೀನ್,  ಕೆಎಂಸಿ ಆಸ್ಪತ್ರೆಯ ವೈದ್ಯಾಧಿಕಾರಿ ಅಶ್ವಿತ್ ಶೆಟ್ಟಿ, ಮರ್ಣೆ ಗ್ರಾಮ‌ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಪೂಜಾರಿ, ಅಭಯಹಸ್ತ ಹೆಲ್ಪ್ ಲೈನ್ ನ ರಾಮಚಂದ್ರ ನಾಯಕ್ ಮುನಿಯಾಲು ,ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಸತೀಶ್ ಹೆಗ್ಡೆ‌ ಪುಲ್ಲಡ್ಕ,  ಅಜೆಕಾರು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ  ವಿದ್ಯಾ ಪೈ, ದತ್ತಾತ್ರೇಯ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಸುಮಲತಾ ಸತೀಶ್ ಮುಂತಾದವರು ಉಪಸ್ಥಿತರಿದ್ದರು.             
ರಾಘವೇಂದ್ರ ಆಚಾರ್ಯ ಸ್ವಾಗತಿಸಿದರು, ಹರೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
 ಜಾಹೀರಾತು Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget