ಗುಣಮಟ್ಟದ ಶಿಕ್ಷಣದಲ್ಲಿ ಕ್ರಿಯೇಟಿವ್ ಕಾಲೇಜು ಸಾಧನೆ ಹೆಜ್ಜೆ! -ಕರಾವಳಿಯ ಅತ್ಯಂತ ಪರಿಣಿತ ಅನುಭವಿ ಉಪನ್ಯಾಸಕರ ತಂಡ -ಒಂದೇ ವರ್ಷಕ್ಕೆ ರಾಜ್ಯದ ಗಮನ ಸೆಳೆದ ಶಿಕ್ಷಣ ಸಂಸ್ಥೆ -ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದೇ ಸೂರಿನಡಿ ತರಭೇತಿ-Times of karkala

ಕಾರ್ಕಳ:ಕರಾವಳಿ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿ. ಹತ್ತಾರು ಕಾಲೇಜುಗಳು ಲಕ್ಷ ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿ ಹೊಸ ಬದುಕನ್ನು ನೀಡಿವೆ. ಇದೀಗ ಕರಾವಳಿಯ ಬಹುತೇಕ ಟಾಪ್ ಕಾಲೇಜುಗಳಲ್ಲಿ ಹತ್ತಾರು ವರ್ಷ ಬೋಧನೆ ಮಾಡಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಉತ್ಸಾಹಿ, ನಾವಿನ್ಯತೆಯ ಅತ್ಯುತ್ತಮ ಬೋಧಕರು ಸೇರಿ ಸ್ಥಾಪಿಸಿದ ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜು ರಾಜ್ಯದ ಶಿಕ್ಷಣ ಕ್ಷೇತ್ರದ ಗಮನ ಸೆಳೆದಿದೆ.ಶುರುವಾದ ಮೊದಲ ವರ್ಷವೇ ಉತ್ತಮ ದಾಖಲಾತಿ ಪಡೆದ ಕಾಲೇಜು ಹೊಸ ಕಟ್ಟಡ, ಹೊಸ ಹಾಸ್ಟೆಲ್, ಹೈಟೆಕ್ ಶಿಕ್ಷಣ ಸೌಲಭ್ಯ, ಪಠ್ಯ ಮತ್ತು ಶಿಕ್ಷಣ ಚಟುವಟಿಕೆ, ವಿದ್ಯಾರ್ಥಿಗಳ ಆಸಕ್ತಿಗನುಗುಣವಾಗಿ ವಿವಿಧ ಚಟುವಟಿಕೆ, ನೀಟ್, ಸಿಇಟಿ ಸೇರಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, ಕಂಪ್ಯೂಟರ್ ಜ್ಞಾನ, ಆನ್ಲೈನ್ ಶಿಕ್ಷಣ, ಹೊಸ ಬಗೆಯ ಕ್ರ್ಯಾಶ್ ಕೋರ್ಸ್ ಸೇರಿ ಹತ್ತು ಹಲವು ವಿಶೇಷ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ.

ಕಾರ್ಕಳದ ಹಿರ್ಗಾನದಲ್ಲಿ ಸುಮಾರು 8 ಎಕರೆ ಪ್ರದೇಶದಲ್ಲಿ ಕಾಲೇಜು ಸ್ಥಾಪಿತವಾಗಿದ್ದು, ಇಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಯೋಗ, ಹೊಸತನದ ಪ್ರಯೋಗಕ್ಕೂ ವಿದ್ಯಾರ್ಥಿಗಳಿಗೆ ಅವಕಾಶ ಇದೆ. ಮಲೆನಾಡು, ಕರಾವಳಿ, ಬಯಲು ಸೀಮೆ, ಮೈಸೂರು, ಬೆಂಗಳೂರು ಭಾಗದಿಂದಲೂ ವಿದ್ಯಾರ್ಥಿಗಳು ಇಲ್ಲಿಗೆ ದಾಖಲಾಗುತ್ತಿದ್ದಾರೆ. ಮೊದಲ ವರ್ಷವೇ ಉತ್ತಮ ಸ್ಪಂದನೆ ಸಿಕ್ಕಿದೆ.

ಕ್ರಿಯೇಟಿವ್ ಕಾಲೇಜಿನಲ್ಲಿಇದೆ ಮೊದಲ ಬಾರಿಗೆ ಪಿಯು ಶಿಕ್ಷಣದಲ್ಲಿ ಹೊಸ ಕಲ್ಪನೆಯ ಸರ್ಟಿಫಿಕೇಟ್ ಕೋರ್ಸ್ ಕೂಡ ಜಾರಿಗೆ ತರಲಾಗಿದೆ. ಪೈಥಾನ್ ಅಪ್ಲಿಕೇಶನ್ ಹಾಗೂ ಡ್ರೋನ್ ಟೆಕ್ನಾಲಜಿ ವಿಷಯವನ್ನು ಈ ಯೋಜನೆಯಡಿ ಕಲಿಸಲಾಗುತ್ತಿದೆ.

ಹಾಸನದಲ್ಲೂ ಕರಾವಳಿಯ ಗುಣಮಟ್ಟದ ಶಿಕ್ಷಣ!: ಹಾಸನದಲ್ಲೂ ಕೂಡ ಕರಾವಳಿ ಗುಣಮಟ್ಟದ  ಶಿಕ್ಷಣವನ್ನು ಕ್ರಿಯೇಟಿವ್ ಎಜುಕೇಷನ್ ಫೌಂಡೇಶನ್ ಸಂಸ್ಥೆ ಹಾಸನದ  HKS ಕಾಲೇಜು ಜತೆ ಸೇರಿ ಆ ಭಾಗದ ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಹಾಸನ, ಮೈಸೂರು, ತುಮಕೂರು ಮಂಡ್ಯ ಭಾಗದ ವಿದ್ಯಾರ್ಥಿಗಳಿಗೆ ಇಲ್ಲಿ ದಾಖಲಾತಿ ನಡೆಯುತ್ತಿದೆ.

ಸಂಸ್ಥಾಪಕ ಉಪನ್ಯಾಸಕರ ತಂಡ: ಕ್ರಿಯೇಟಿವ್ ಎಜುಕೇಷನ್ ಫೌಂಡೇಶನ್ ಮೂಡಬಿದಿರೆಯ ಸಂಸ್ಥಾಪಕರಲ್ಲಿ ಗಣಪತಿ ಭಟ್(MA vidvan), ಡಾ.ಗಣನಾಥ ಶೆಟ್ಟಿ(M.sc, Phd), ಅಮೃತ ರೈ (MBA Finance), ಆದರ್ಶ ಎಂ.ಕೆ( Msc), ಅಶ್ವಥ್ ಎಸ್. ಎಲ್( M.sc B. Ed), ವಿಮಲ್ ರಾಜ್ (M.A, B.Ed),ಗಣಪತಿ ಕೆ. ಎಸ್(M.sc, B. Ed) ಇದ್ದಾರೆ. ಇವರೆಲ್ಲರೂ ಕರಾವಳಿಯ ಬೇರೆ ಬೇರೆ ಪ್ರಮುಖ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಹಲವು ವರ್ಷ ಸೇವೆ ಸಲ್ಲಿಸಿ ಇದೀಗ ಈ ಕಾಲೇಜು ಸ್ಥಾಪಿಸಿದ್ದಾರೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget