ಸಾಣೂರು:"ಕೇವಲ ಮುಸಲ್ಮಾನರಿಗೋಸ್ಕವೇ ನಮ್ಮ ದೇಶ ವಿಭಜನೆಯಾಯಿತು"-ಶರಣ್ ಪಂಪ್​​ವೆಲ್ -Times of karkala

 

ಸಾಣೂರು:ಸ್ವಾತಂತ್ರ್ಯ ನಂತರ ಅಖಂಡವಾಗಿದ್ದ ಭಾರತ ಕೇವಲ  ಮುಸಲ್ಮಾನರಿಗಾಗಿಯೇ ವಿಭಜನೆಯಾಯಿತು ಎಂದು ವಿ.ಹಿಂ.ಪ. ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದರು.

ಅವರು ಸಾಣೂರು ದೆಂದಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಾಣೂರು ವಲಯದ ವತಿಯಿಂದ ನಡೆದ ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ದೇಶ ವಿಭಜನೆಗೆ ಕಾರಣ ಏನು ಎಂಬುದನ್ನು ಜನರಿಗೆ ತಿಳಿಸಬೇಕು, ನಮ್ಮ ದೇಶ ವಿಭಜನೆ ಆದ ಮೇಲೆ ನಮ್ಮ ದೇಶಕ್ಕೆ ಆದ ಪರಿಣಾಮಗಳೇನು? ವಿಭಜನೆಯಾದ ದೇಶವನ್ನು ಇನ್ನೊಮ್ಮೆ ಅಖಂಡವಾಗಿ ನಿರ್ಮಾಣ ಮಾಡುವ ಸಂಕಲ್ಪ ಮಾಡಬೇಕು ಎನ್ನುವುವ ಮೂರು ಕಾರಣವನ್ನು ಇಟ್ಟುಕೊಂಡು  ಅಖಂಡ ಭಾರತ  ಸಂಕಲ್ಪ ದಿನಾಚರಣೆಯ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ವೇದಮೂರ್ತಿ ಶ್ರೀ ರಾಮಭಟ್ ವಹಿಸಿದ್ದರು.ಮುಖ್ಯ ಅತಿಥಿ ಭಜರಂಗದಳ ರಾಜ್ಯ ಸಂಚಾಲಕ ಸುನಿಲ್ ಕೆ ಆರ್, ಅರುಣ್ ಕುಮಾರ್ ನಿಟ್ಟೆ ಉಪಸ್ಥಿತರಿದ್ದರು. ಕಾರ್ಕಳ ಪ್ರಖಂಡ ಬಜರಂಗದಳ ಸಹ ಸಂಚಾಲಕರು ಸುನೀಲ್ ನಿಟ್ಟೆ  ಪ್ರಸ್ತಾವಿಕ ಮಾತನಾಡಿದರು.ವಿಶ್ವ ಹಿಂದೂ ಪರಿಷದ್ ಕಾರ್ಕಳ ಉಪಾಧ್ಯಕ್ಷ  ಜಗದೀಶ್ ಪೂಜಾರಿ ಸಾಣೂರು,ಸುರಕ್ಷಾ ಪ್ರಮುಖ್ ಮನೋಜ್ ಕರಿಯಕಲ್ಲು,ವಿಶ್ವ ಹಿಂದೂ ಪರಿಷದ್ ಸಾಣೂರು ವಲಯ ಅಧ್ಯಕ್ಷ ದೇವಾನಂದ ಶೆಟ್ಟಿ ವಿಶ್ವ ಹಿಂದೂ ಪರಿಷದ್ ಕಾರ್ಯದರ್ಶಿ ರಜತ್ ಜತ್ತನ್ ಬಜರಂಗದಳ ಸಾಣೂರು ವಲಯ ಸಂಚಾಲಕ ಶರತ್ ಸಾಣೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

 ಜಾಹೀರಾತು 









Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget