ನಿಟ್ಟೆ:ಸಚಿವ ಸುನೀಲ್ ಕುಮಾರ್ ರನ್ನು ಸ್ವಾಗತಿಸುವ ಕಾರ್ಯಕ್ರಮದಲ್ಲಿ ಇಬ್ಬರ ಜೇಬಿಗೆ ಕನ್ನ,ಎರಡು ಕಡೆ ಪ್ರಕರಣ ದಾಖಲು-Times of karkala

 

ನಿನ್ನೆ ನಡೆದ  ಸಚಿವ ಸುನೀಲ್ ಕುಮಾರ್ ಸ್ವಾಗತ ಕಾರ್ಯಕ್ರಮದಲ್ಲಿ ಇಬ್ಬರ ಜೇಬಿಗೆ ಕಳ್ಳರು ಕನ್ನ ಹಾಕಿದ್ದು ಎಲ್ಲರೂ ಸಂಭ್ರಮಾಚರಣೆಯಲ್ಲಿ ಮಗ್ನರಾಗಿದ್ದರೆ ಕಳ್ಳರು ಮಾತ್ರ ಜೇಬಿಗೆ ಕೈ ಹಾಕಿ ಹಣ ಎಗರಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಕುರಿತು ಎರಡು ಕಡೆ ಪ್ರಕರಣ ದಾಖಲಾಗಿದೆ.

ಉಡುಪಿಯ ಬಿಜೆಪಿ ಮುಖಂಡ ಶ್ರೀಕಾಂತ್ ನಾಯಕ್ ಎಂಬುವವರು  ಹೆಜಮಾಡಿ ಟೋಲ್‌ಗಡಿ ಭಾಗದಲ್ಲಿ ಸಚಿವರನ್ನು ಸ್ವಾಗತಿಸುವ ಕಾರ್ಯಕ್ರಮಕ್ಕೆಂದು ಬಂದಿದ್ದಾಗ   ಸ್ಥಳದಲ್ಲಿ ವಿಪರೀತ ನೂಕು ನುಗ್ಗಲು ಉಂಟಾಗಿದ್ದು ಈ ಸಮಯ ಕಳ್ಳ ಕೈಚಳಕ ತೋರಿಸಿ  ಪ್ಯಾಂಟಿನ ಎಡ ಕಿಸೆಯಲ್ಲಿ ಇರಿಸಿದ್ದ ರೂಪಾಯಿ 48,000/-  ರೂಪಾಯಿ ಎಗರಿಸಿದ್ದಾನೆ.

ಹಾಗೆಯೆ ಬೆಳ್ಮಣ್ ಬಸ್ ನಿಲ್ದಾಣದ ಬಳಿ ಸಚಿವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಿಟ್ಟೆಯ ಬೋರ್ಗಲ್ ಗುಡ್ಡೆ ನಿವಾಸಿ ದಯಾನಂದ ಶೆಟ್ಟಿ ಎಂಬುವವರ ಜೇಬಿಗೆ ಕೈ ಹಾಕಿ ಪಾರ್ಸ್ ನಲ್ಲಿದ್ದ ನಗದು  4,000 ರೂ ಹಣ ಹಾಗೂ ಎಟಿಎಂ ಕಾರ್ಡ್ ಎಗರಿಸಿದ್ದಾನೆ.

ಈ ಕುರಿತು ಪಡುಬಿದ್ರಿ  ಹಾಗೂ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಜಾಹೀರಾತು ಪೊಲೀಸ್ ವರದಿ 

ಪಡುಬಿದ್ರಿ: ಪಿರ್ಯಾದಿದಾರರಾಧ ಶ್ರೀಕಾಂತ್ ನಾಯಕ್, (41) ತಂದೆ: ಪಾಂಡುರಂಗ ನಾಯಕ್, ವಾಸ: ಕರ್ವಾಲು, ಅಲೆವೂರು ಗ್ರಾಮ, ಉಡುಪಿ ಇವರು ಕ್ಯಾಟರಿಂಗ್ ಹಾಗೂ ಕಟ್ಟಡ ಕಾಮಗಾರಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 06/08/2021 ರಂದು ಕಾಪು ತಾಲೂಕು ಹೆಜಮಾಡಿ ಗ್ರಾಮದ ಹೆಜಮಾಡಿ ಟೋಲ್‌ಗಡಿ ಭಾಗದಲ್ಲಿ ಸಚಿವರನ್ನು ಸ್ವಾಗತಿಸುವ ಕಾರ್ಯಕ್ರಮಕ್ಕೆಂದು ಬಂದಿರುವ ಸಮಯ 11:00 ಗಂಟೆಗೆ ಸಚಿವರು ಬಂದಾಗ, ಸದ್ರಿ ಸ್ಥಳದಲ್ಲಿ ವಿಪರೀತ ನೂಕು ನುಗ್ಗಲು ಉಂಟಾಗಿದ್ದು, ಆ ಸಮಯ ಯಾರೋ ಕಳ್ಳರು ಇವರ ಪ್ಯಾಂಟಿನ ಎಡ ಕಿಸೆಯಲ್ಲಿ ಇರಿಸಿದ್ದ ರೂಪಾಯಿ 48,000/- ಹಣವನ್ನು ಕಳವು ಮಾಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 73/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಾರ್ಕಳ: ದಿನಾಂಕ  06/08/2021 ರಂದು ಕಾರ್ಕಳ ತಾಲೂಕಿನ ಬೆಳ್ಮಣ್‌ಗ್ರಾಮದ ಬೆಳ್ಮಣ್ ಬಸ್ ನಿಲ್ದಾಣದ ಬಳಿ ಸಚಿವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪಿರ್ಯಾದಿದಾರರಾದ ದಯಾನಂದ ಶೆಟ್ಟಿ ತಂದೆ: ರಾಮ ಶೆಟ್ಟಿ  ವಾಸ: ವನಿತಾ ನಿವಾಸ, ಬೊರ್ಗಲ್ ಗುಡ್ಡೆ  ನಿಟ್ಟೆ ಗ್ರಾಮ, ಕಾರ್ಕಳ ಇವರು ಬೆಳಿಗ್ಗೆ 11:00 ಗಂಟೆಗೆ ಸದ್ರಿ ಕಾರ್ಯಕ್ರಮಕ್ಕೆ ಹೋಗಿದ್ದು, ಕಾರ್ಯಕ್ರಮದಲ್ಲಿ ಹಲವಾರು ಸಾರ್ವಜಕನಿಕರು ಭಾಗವಹಿಸಿದ್ದು ಮದ್ಯಾಹ್ನ 1:00 ಗಂಟೆಗೆ ಮುಕ್ತಾಯಗೊಂಡಿರುತ್ತದೆ ದಯಾನಂದ ಶೆಟ್ಟಿ ರವರು ಕಾರ್ಯಕ್ರಮ ಮುಗಿಸಿ ಮನೆಗೆ ಹೊರಡುವ ಸಮಯ ತಮ್ಮ ಪ್ಯಾಂಟ್ ನ ಕೀಸೆಯನ್ನು ನೋಡಿದಾಗ ಅವರ ಕೀಸೆಯಲ್ಲಿದ್ದ ಕಂದು ಬಣ್ಣದ ಪರ್ಸ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಸದ್ರಿ ಪರ್ಸ್ ನಲ್ಲಿ 500 ರೂ ಮುಖ ಬೆಲೆಯ  7 ನೋಟುಗಳು, 100 ರೂ ಮುಖ ಬೆಲೆಯ 5 ನೋಟುಗಳು ಸೇರಿ ಒಟ್ಟು 4,000 ರೂ ಹಾಗೂ ದಯಾನಂದ ಶೆಟ್ಟಿ ಇವರ ಪತ್ನಿ ಶ್ಯಾಮಲರವರ  ಕೆನರಾ ಬ್ಯಾಂಕ್ ನ ಎ ಟಿ ಎಂ ಕಾರ್ಡ್  ಇದ್ದು, ಯಾರೋ ಕಳ್ಳರು  ಅಭಿನಂದನಾ ಕಾರ್ಯಕ್ರಮದಲ್ಲಿ ದಯಾನಂದ ಶೆಟ್ಟಿ ರವರು ಭಾಗವಹಿಸಿದ ಸಮಯ ಇವರ  ಪ್ಯಾಂಟ್ ನ ಕೀಸೆಗೆ ಕೈ ಹಾಕಿ ಪರ್ಸ್ ನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 95/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget