ಬಜಗೋಳಿ:ಉಚಿತ ಅರೋಗ್ಯ ತಪಾಸಣಾ ಶಿಬಿರ-Times of karkala

 ರೋಟರಿ ಸಂಸ್ಥೆ ಕಾರ್ಕಳ ಇವರ ಆಶ್ರಯದಲ್ಲಿ. ಡಾಕ್ಟರ್ ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಇವರ ಸಹಕಾರದೊಂದಿಗೆ .ಗ್ರಾಮ ಪಂಚಾಯತು ಮುಡಾರು, ಗಣಪತಿ ಸೇವಾಸಮಿತಿ, ಅಭ್ಯಂಜಲ ಫ್ರೆಂಡ್ಸ್ ಕ್ಲಬ್, ಸರಕಾರಿ ಪದವಿಪೂರ್ವ ಕಾಲೇಜ್ ಬಜಗೋಳಿ, ಮತ್ತು ರೋಟರಿ ಗ್ರಾಮೀಣ ಮಹಿಳಾ ಸಮುದಾಯ ದಳ ಇವರ ಸಹಯೋಗದೊಂದಿಗೆ "ಉಚಿತ ಹೃದಯ ರೋಗ ತಪಾಸಣೆ ಕಿವಿ, ಮೂಗು, ಗಂಟಲು ,ಹಾಗೂ ಕಣ್ಣಿನ ತಪಾಸಣಾ ಶಿಬಿರವು "ದಿನಾಂಕ 1-8-2021ರಂದು ಸರಕಾರಿ ಪದವಿ ಪೂರ್ವ ಕಾಲೇಜ ಬಜಗೋಳಿ ಇಲ್ಲಿ ನಡೆಯಿತು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆ ಕಾರ್ಕಳದ ಅಧ್ಯಕ್ಷರಾದ ಸುರೇಶ್ ನಾಯಕ್  ವಹಿಸಿದ್ದರು.ಕಾರ್ಯಕ್ರಮದ ಉದ್ಘಾಟನೆಯನ್ನು ಮುಡಾರು ಗ್ರಾಮ ಪಂಚಾಯತ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಅವರು ನೆರವೇರಿಸಿ "ರೋಟರಿ ಸಂಸ್ಥೆ ನಡೆಸುತ್ತಿರುವ ಕಾರ್ಯ ನಿಜವಾಗಿಯೂ ಶ್ಲಾಘನೀಯ ಬಹಳ ಹಿಂದಿನಿಂದಲೂ ಕೂಡ ಸ್ಥಳೀಯ ಪ್ರದೇಶದಲ್ಲಿ  ಹಲವಾರು ಕೊಡುಗೆಯನ್ನು ನೀಡಿದ್ದಾರೆ" ಎಂದು ಈ ಸಂದರ್ಭದಲ್ಲಿ ಹೇಳಿದರು.

ಸರಕಾರಿ ಪದವಿಪೂರ್ವ ಕಾಲೇಜು ಬಜಗೋಳಿ ಪ್ರಾಂಶುಪಾಲರಾಗಿರುವ ಕೆ.ಪಿ. ಲಕ್ಷ್ಮೀನಾರಾಯಣ  ,ಡಾಕ್ಟರ್ ಟಿಎಂಎ ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಶ್ರಣ್ಣಾಲ್ ,ರೋಟರಿ ಸಮುದಾಯ  ನಿರ್ದೇಶಕರಾದ  ಶೈಲೇಂದ್ರ ರಾವ್,ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು .ರೋಟರಿ ಅಧ್ಯಕ್ಷರಾದ  ಸುರೇಶ್ ನಾಯಕ್  ಸ್ವಾಗತಿಸಿದರು  , ಇಕ್ಬಾಲ್ ಅಹ್ಮದ್  ಕಾರ್ಯಕ್ರಮವನ್ನು ನಿರೂಪಿಸಿದರು.ಶ್ರೀಮತಿ ಗೀತಾ ಸುಧೀರ್ ಕಾಮತ್  ಧನ್ಯವಾದವನ್ನು ನೀಡಿದರು  .ಕಾರ್ಯಕ್ರಮದಲ್ಲಿ ನೂರೈವತ್ತಕ್ಕೂ ಹೆಚ್ಚಿನ ಫಲಾನುಭವಿಗಳು ಶಿಬಿರದ  ಲಾಭವನ್ನು ಪಡೆದರು.




 ಜಾಹೀರಾತು 






Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget