ಕಾರ್ಕಳ:ಎಂಪಿಎಂ ಸರಕಾರಿ ಕಾಲೇಜಿನಲ್ಲಿ ರಾಷ್ಟ್ರೀಯ ಸಮ್ಮೇಳನ-Times of karkala

 ಎಂಪಿಎಂ ಸರಕಾರಿ ಕಾಲೇಜಿನಲ್ಲಿ ರಾಷ್ಟ್ರೀಯ  ಸಮ್ಮೇಳನ

ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್ಕಳದಲ್ಲಿ ನಾಳೆ (ದಿನಾಂಕ 19.8.2021 ರಂದು) ರಾಷ್ಟ್ರೀಯ ಸಮ್ಮೇಳನ ವರ್ಚುವಲ್ ಮೋಡ್ನಲ್ಲಿ   ನಡೆಯಲಿದ್ದು , ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಸುಬ್ರಮಣ್ಯ ಎಡಪಡಿತ್ತಾಯ ಸಮ್ಮೇಳನವನ್ನು ಉಧ್ಗಾಟಿಸಲಿದ್ದಾರೆ. ಕರ್ನಾಟಕ ಸರಕಾರದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶೀ ಸುನಿಲ್ ಕುಮಾರ್ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಲಯದ ಜಂಟಿ ನಿರ್ದೇಶಕರಾದ ಡಾ. ಜೆನಿಫರ್ ಲೊಳಿಟಾ ಸಿ ಪ್ರಧಾನ ಅತಿಥಿಗಳಾಗಿರುತ್ತಾರೆ.  


ಇಡೀ ದಿನ ನಡೆಯುವ ಸಮ್ಮೇಳನದಲ್ಲಿ ಕೋವಿಡ್-19  ನಂತರದ ದಿನಗಳಲ್ಲಿ ವ್ಪಾರ ಮತ್ತು ಉದ್ಯಮ ಕ್ಷೇತ್ರಗಳು ಎದುರಿಸಲಿರುವ ಸಮಸ್ಯೆಗಳು ಮತು ಲಭ್ಯವಾಗಬಹುದಾದ ಅವಕಾಶಗಳ ಬಗ್ಗೆ ವಿಚಾರ ವಿನಿಮಯ ಮತು ಪ್ರಬಂಧಗಳ ಮಂಡನೆ ನಡೆಯಲಿದೆ ಎಂಬುದಾಗಿ ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.

 ಜಾಹೀರಾತು 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget