ಕಾರ್ಕಳ:ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಕಡಿಮೆ ಅಂಕ ಲಭಿಸಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ-Times of karkala

 

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಕಡಿಮೆ ಅಂಕ ಲಭಿಸಿದೆ ಎಂಬ ಕಾರೆಣಕ್ಕಾಗಿ ಮನಮೊಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕಾಬೆಟ್ಟು ಹವಲ್ದಾರ್ ಬೆಟ್ಟುನಲ್ಲಿ ನಡೆದಿದೆ.

ಹವಾಲ್ದಾರ್ ಬೆಟ್ಟು ಹಾಡಿಮನೆಯ ಅಗ್ನೀಶ್ ಕುಮಾರ್(16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಆಗಸ್ಟ್ 10ರ ಬೆಳಿಗ್ಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ದೇವರ ಕೋಣೆಯ ಕಬ್ಬಿಣದ ಹುಕ್‌ಗೆ ಬಟ್ಟೆಯಿಂದ ನೇಣುಬಿಗಿದು ಆತ್ಮಹತ್ಯೆಗೈದಿದ್ದಾನೆ.

ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.

 ಜಾಹೀರಾತು ಪೊಲೀಸ್ ವರದಿ:

ಕಾರ್ಕಳ :ಪಿರ್ಯಾದಿದಾರರಾದ ಸನತ್ ಕುಮಾರ್ (57), ತಂದೆ: ರಮಾನಾಥ ಕೆ, ವಾಸ: ಸೌಭಾಗ್ಯ ನಿಲಯ, ಹಾಡಿಮನೆ, ಹವಾಲ್ದಾರ್ ಬೆಟ್ಟು, ಕಸಬಾ ಗ್ರಾಮ, ಕಾರ್ಕಳ ತಾಲೂಕು ಇವರ ಮಗ ಅಗ್ನೀಶ್ ಕುಮಾರ್ (16) ರವರು ಶ್ರೀ ಭುವನೇಂದ್ರ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ ಸಿ ವ್ಯಾಸಾಂಗ ಮಾಡುತಿದ್ದು, ದಿನಾಂಕ 09/08/2021 ರಂದು ಪರೀಕ್ಷೆಯ ಫಲಿತಾಂಶ ಬಂದಿರುತ್ತದೆ. ಪರೀಕ್ಷೆಯಲ್ಲಿ ಮಾರ್ಕ್ಸ್ ಕಡಿಮೆ ಬಂದಿರುತ್ತದೆ ಎಂಬ ಕಾರಣಕ್ಕಾಗಿ ಆತನು ಬೇಸರದಿಂದ ಇದ್ದು ಪಿರ್ಯಾದಿದಾರರು ದಿನಾಂಕ 10/08/2021 ರಂದು ಬೆಳಗ್ಗೆ 09:30 ಗಂಟೆಗೆ ಮನೆಯಿಂದ ಬೈಕ್ ರಿಪೇರಿ ಬಗ್ಗೆ ಕಾಬೆಟ್ಟಿಗೆ ಹೋಗಿ ವಾಪಾಸು 11:30 ಗಂಟೆಗೆ ಮನೆಗೆ ಬಂದಾಗ ಮನೆಯ ಗೇಟ್ ಹಾಗೂ ಬಾಗಿಲು ತೆರೆದುಕೊಂಡಿದ್ದು ಮನೆಯ ಓಳಗೆ ಹೋದಾಗ ಅಗ್ನೀಶ್ ಕುಮಾರ್ ದೇವರ ಕೋಣೆಯಲ್ಲಿ ಕಬ್ಬಿಣದ ಹುಕ್ ಗೆ ಬಟ್ಟೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 23/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget