ಬೆಳ್ಮಣ್:ನಿರ್ಮಾಣ ಹಂತದಲ್ಲಿದ್ದ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು-Times of karkala

ಬೆಳ್ಮಣ್:ನಿರ್ಮಾಣ ಹಂತದಲ್ಲಿದ್ದ ಕಟ್ಟಡದಿಂದ ಬಿದ್ದು ಕೆಲಸಗಾರ ಸಾವನ್ನಪ್ಪಿದ ಘಟನೆ  ಕಾರ್ಕಳ ತಾಲೂಕು, ಬೆಳ್ಮಣ್ ಗ್ರಾಮದಲ್ಲಿ ಸಂಭವಿಸಿದೆ.


ಮೂಲತಃ ಪಶ್ಚಿಮ ಬಂಗಾಳ ರಾಜ್ಯದ ಪ್ರಹ್ಲಾದ್ ಸರಕಾರ್ (23) ಮೃತಪಟ್ಟವರು.ಪ್ರಹ್ಲಾದ್  ಎಡ್ವರ್ಡ್ ಮಿಸ್ಕಿತ್ ಎಂಬವರ ಮಾಲಕತ್ವದ ಹಾಗೂ ಚೌಡಪ್ಪ ಗಚ್ಚಣ್ಣನವರ್ ಎಂಬವರು ಕಂಟ್ರಾಕ್ಟರ್ ಆಗಿರುವ ಕಟ್ಟಡದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದು, ನಿರ್ಮಾಣ ಹಂತದಲ್ಲಿ ಇದ್ದ ಕಟ್ಟಡದಲ್ಲಿಯೇ ಕೆಲಸ ಮಾಡುವ  ಕೆಲಸಗಾರರಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು.

ಪ್ರಹ್ಲಾದ್ ಸರಕಾರ್ ಇದೆ ಕಟ್ಟಡದಲ್ಲಿಯೇ ಉಳಕೊಂಡಿದ್ದು, ಇದಕ್ಕೆ ಯಾವುದೇ ರಕ್ಷಣಾ ವ್ಯವಸ್ಥೆ ಮಾಡದ ಕಾರಣ ನಿನ್ನೆ (11/08/2021) ಆತನು ವಾಸ ಮಾಡಿಕೊಂಡಿದ್ದ ನಿರ್ಮಾಣ ಹಂತದ ಕಟ್ಟಡದ ಮೊದಲನೆಯ ಮಹಡಿಯಿಂದ  ಮಧ್ಯಾಹ್ನ 2:30 ಗಂಟೆಗೆ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾನೆ.

ಘಟನೆಗೆ ಕಟ್ಟಡ ಮಾಲೀಕರಾದ ಎಡ್ವರ್ಡ್ ಮಿಸ್ಕಿತ್ ಹಾಗೂ ಕಂಟ್ರಾಕ್ಟರ್ ಚೌಡಪ್ಪ ಗಚ್ಚಣ್ಣನವರ್ ಇವರ ನಿರ್ಲಕ್ಷತನವೇ ಕಾರಣ ಎಂದು ದೂರಲಾಗಿದ್ದು ಕಾರ್ಕಳ ಗ್ರಾಮಾಂತರ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಜಾಹೀರಾತು 








Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget