ಬಜಗೋಳಿ:ಗಾಡಿಯನ್ನು ತಪಾಸಣೆಗೆಂದು ನಿಲ್ಲಿಸಿದ್ದಕ್ಕೆ ಅರಣ್ಯ ವೀಕ್ಷಕನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ,ಹಲ್ಲೆ ನಡೆಸಿ ಕೊಲೆಬೆದರಿಕೆ-Times of karkala

 

ಗಾಡಿಯನ್ನು ತಪಾಸಣೆಗೆಂದು ನಿಲ್ಲಿಸಿದ್ದಕ್ಕೆ  ಅರಣ್ಯ ವೀಕ್ಷಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದ ಘಟನೆ ಕಾರ್ಕಳ ತಾಲೂಕಿನ ಬಜಗೋಳಿಯಲ್ಲಿ ನಡೆದಿದೆ. ಮಲ್ಲಾರ್ ನಿವಾಸಿ ನಿತಿನ್ ಕುಮಾರ್  ಹಲ್ಲೆಗೊಳಗಾದವರು.

ನಿತಿನ್ ಕುಮಾರ್ ಕಳೆದ  5 ವರ್ಷದಿಂದ ಅರಣ್ಯ ಇಲಾಖೆಯ ಮೂಡಬಿದ್ರೆ ವಲಯದ ಮಾಳ, ನಲ್ಲೂರು, ರೆಂಜಾಳ ದಲ್ಲಿ ಅರಣ್ಯ ವೀಕ್ಷಕನಾಗಿ ತಾತ್ಕಲಿಕ ನೆಲೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ದಿನಾಂಕ 06/8/21 ರಂದು ಮಧ್ಯಾಹ್ನ  3:30 ಗಂಟೆಗೆ ನಲ್ಲೂರು ಗ್ರಾಮದ ಕರ್ಮರ್ ಕಟ್ಟೆ ಎಂಬಲ್ಲಿ ಕರ್ತವ್ಯದಲ್ಲಿದ್ದಾಗ  ಮಾಳದಿಂದ ಬಜಗೊಳಿ ಕಡೆಗೆ 407 ಈಚರ್ ವಾಹನವೊಂದು ಬರುತ್ತಿದ್ದು ನಿತಿನ್ ಕುಮಾರ್ ರವರು ಮರದ ಗಾಡಿಯೆಂದು ನಿಲ್ಲಿಸಿ ಪರಿಶೀಲಿಸಿದಾಗ ಖಾಲಿ ವಾಹನ ಆಗಿದ್ದು, ನಂತರ ಅವರು  ಅಲ್ಲಿಂದ ಹೋಗಿದ್ದರು.

ಇದೇ ದ್ವೇಷದಿಂದ ಸುರೇಂದ್ರ ಹೆಗ್ಡೆ ಎಂಬಾತನು  ಸಂಜೆ 6:15 ಗಂಟೆಗೆ ನಿತಿನ್ ಕುಮಾರ್  ರವರ ಮೊಬೈಲ್ ಗೆ ಕರೆ ಮಾಡಿ  ಮುಡಾರು ಗ್ರಾಮದ ಸತ್ಯ ಸಾರಮಣಿ ದೈವಸ್ಥಾನದ ಬಳಿ ಬರುವಂತೆ ತಿಳಿಸಿದ್ದು ನಿತಿನ್ ಕುಮಾರ್ ರವರು ಅಲ್ಲಿಗೆ ಹೋದಾಗ ಓಮಿನಿ ಕಾರಿನಲ್ಲಿ ಸುರೇಂದ್ರ ಹೆಗ್ಡೆ ,ರಾಜೇಶ ಜೈನ್ ಹಾಗೂ ಪ್ರಾನ್ಸಿಸ್ ಇದ್ದು, ಈ ಪೈಕಿ ರಾಜೇಶನು ಏಕಾಏಕಿ ಕಾರಿನಿಂದ ಇಳಿದು ಬೆವರ್ಸಿ ರಂಡೆ ಮಗನೇ ನಮ್ಮ 407 ವಾಹನವನ್ನು ಅಡ್ಡ ಗಟ್ಟುತ್ತಿಯಾ ನೋಡಿಕೊಳ್ಳುತ್ತೇನೆ ಎಂದು ಹೇಳಿ ಕೈಯಿಂದ ಕೆನ್ನೆಗೆ ಹೊಡೆದು ಕೆಳಗೆ ಹಾಕಿ ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ.

ಸುರೇಂದ್ರ ಹೆಗ್ಡೆ ಎಂಬಾತನು ನಿತಿನ್ ಕುಮಾರ್ ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದು, ಪ್ರಾನ್ಸಿಸನು ಕೂಡ ಬೈದಿದ್ದು, ಅದೇ ಸಮಯಕ್ಕೆ ಜಯ ಪೂಜಾರಿ ಮತ್ತು ರೋಹಿತ್ ಎಂಬವರು ಅಲ್ಲಿಗೆ ಬಂದಿದ್ದು,  ಜಯ ಪೂಜಾರಿ ತನ್ನ ಕೈಯಲ್ಲಿದ್ದ ಹೆಲ್ಮೆಟ್ ನಿಂದ ತಲೆಗೆ ಹೊಡೆದು ಅಲ್ಲಿಂದ ಪರಾರಿಯಾಗಿದ್ದರು.

ಬಳಿಕ ನಿತಿನ್ ಕುಮಾರ್  ರವರು ತನ್ನ ಸ್ನೇಹಿತ ಸತೀಶನಿಗೆ ಕರೆ ಮಾಡಿದ್ದು, ಅವರು ಬಂದು ಇವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಸೇರಿಸಿದ್ದಾರೆ.ಈ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಜಾಹೀರಾತು 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget