ಕೆರ್ವಾಶೆ:ಕೆರೆಗೆ ಬಿದ್ದು ಸಾವನ್ನಪ್ಪಿದ ತಾಯಿ ಮಗು-Times of karkala

ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ತಾಯಿ ಹಾಗೂ ಮಗು ಮೃತಪಟ್ಟ ಘಟನೆ ಕೆರ್ವಾಶೆಯ  ಮಡಿವಾಳಕಟ್ಟೆಯಲ್ಲಿ ರವಿವಾರ ಸಂಭವಿಸಿದೆ. ಕೆರ್ವಾಶೆ ಗ್ರಾಮದ ಕಡ್ಪಾಲ್ ನಿವಾಸಿಗಳಾದ ಸೌಮ್ಯ(37) ಹಾಗೂ ಅವರ ಮಗ ಆರೂಷ್(3) ಮೃತಪಟ್ಟವರು.

ಕೆರ್ವಾಶೆಗೆ ಟೈಲರಿಂಗ್ ಕಲಿಯಲು  ತನ್ನ ಮಗನೊಂದಿಗೆ ಹೋಗಿದ್ದ ಸೌಮ್ಯಳು ಸಂಜೆಯಾದರೂ ಮನೆಗೆ ಬಾರದಿದ್ದಾಗ  ಗಾಬರಿಗೊಂಡ ಸೌಮ್ಯಳ ತಂಗಿ ಸರಿತಾ ಅವರಿಬ್ಬರನ್ನು ಹುಡುಕುತ್ತಾ ಹೋದಾಗ ಮಡಿವಾಳಕಟ್ಟೆಯ ಕೆರೆಯ ನೀರಿನಲ್ಲಿ ಆರೂಷ್ ಧರಿಸಿದ ಚಪ್ಪಲಿ ನೀರಿನಲ್ಲಿ ತೇಲಾಡುತ್ತಿತ್ತು.

ಈಜುಪಟುಗಾರರಾದ ಚಂದ್ರ ಸಾಲಿಯಾನ್, ಮಯ್ಯದ್ಧಿ, ಭರತ್ ಎಂಬವರು ಆ ಕೆರೆಯ ನೀರಿನಲ್ಲಿ ಮುಳುಗಿ ಹುಡುಕಾಡಿದಾಗ ಸೌಮ್ಯ ಹಾಗೂ ಆರೂಷ್ ಅವರಿಬ್ಬರ ಮೃತದೇಹ ಪತ್ತೆಯಾಗಿ ಮೇಲಕ್ಕೆತ್ತಿದ್ದಾರೆ. ಕೆರೆಯ ಬದಿಯಲ್ಲಿರುವ ದಾರಿ ಮೂಲಕ ಅವರ ಮನೆಯ ಕಡೆಗೆ ಬರುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಹೀರಾತು 




ಗಿದೆ.

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget