ರೆಂಜಾಳ:ಬೈಕ್ ನಲ್ಲಿ ಚಲಿಸುತ್ತಿದ್ದಾಗ ಜೋರು ಗಾಳಿಗೆ ಛತ್ರಿ ಬಿಡಿಸಿದ ಹಿಂಬದಿ ಕುಳಿತ ಮಹಿಳೆ,ತಲೆ ಡಾಮರು ರಸ್ತೆಗೆ ಬಡಿದು ಮಹಿಳೆ ಸಾವು-Times of karkala

 

ಬೈಕ್ ನಲ್ಲಿ ಹೋಗುತ್ತಿದ್ದ ಸಂಧರ್ಭ ಜೋರು ಗಾಳಿ ಬಂದಾಗ ಛತ್ರಿಯನ್ನು ಬಿಡಿಸಿದ ಪರಿಣಾಮ ಗಾಳಿಯ ಸೆಳೆತಕ್ಕೆ ಬೈಕ್ ಪಲ್ಟಿಯಾಗಿ ಮಹಿಳೆಯ ತಲೆ ರಸ್ತೆಗೆ ಬಡಿದು ಮಹಿಳೆ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದ ನೆಲ್ಲಿಕಾರು ರಸ್ತೆಯ ಮುಗೇರ್ಕಳ ಎಂಬಲ್ಲಿ ಸಂಭವಿಸಿದೆ.

ದಿನಾಂಕ 03/08/2021 ರಂದು ಸಂಜೆ 5:30 ಗಂಟೆಗೆ ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದ ಮುಗೇರ್ಕಳ ಎಂಬಲ್ಲಿ ಹಾದು ಹೋಗುವ ರೆಂಜಾಳ-ನೆಲ್ಲಿಕಾರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪ್ರವೀಣ ಎಂಬುವವರು ತನ್ನ ಬೈಕ್ ನಲ್ಲಿ ಶ್ರೀಮತಿ ಗಂಗಮ್ಮ ಎಂಬುವವರನ್ನುಕುಳ್ಳಿರಿಸಿಕೊಂಡು ಪಾಜಾಲು ಕಡೆಗೆ ಹೋಗುತ್ತಿದ್ದರು. 

ಈ ಸಂಧರ್ಭ ಜೋರಾಗಿ ಗಾಳಿ ಮಳೆ ಬಂದಿದ್ದು ಕೈಯ್ಯಲ್ಲಿದ್ದ ಕೊಡೆಯನ್ನು ಬಿಡಿಸುತ್ತಿರುವಾಗ ಗಾಳಿಯ ರಭಸಕ್ಕೆ ಕೊಡೆಯು ಒಮ್ಮೆಲೇ ಮೇಲಕ್ಕೆ ಹಾರಿದ್ದರಿಂದ ಹಿಂಬದಿ ಕುಳಿತ್ತಿದ್ದ ಗಂಗಮ್ಮ ರಸ್ತೆಗೆ ಬಿದ್ದು ತಲೆ  ಡಾಮಾರು ರಸ್ತೆಗೆ  ತಲೆ ರಸ್ತೆಗೆ ಬಡಿದಿದೆ. 


ಗಂಗಮ್ಮಗೆ ತಲೆಯ ಹಿಂಭಾಗಕ್ಕೆ ಏಟಾಗಿದ್ದು ಕೂಡಲೇ ಅವರನ್ನು ಕಾರ್ಕಳ ಆಸ್ಪತ್ರೆಗೆ ಸೇರಿಸಲಾಯಿತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ  ಮೃತಪಟ್ಟಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಜಾಹೀರಾತು 







Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget