ಹಿಂದೂ ಸಂಘಟನೆಯ ಕ್ಷಿಪ್ರ ಕಾರ್ಯಾಚರಣೆ:ಎರಡು ಗೋವುಗಳ ರಕ್ಷಣೆ

ಶಿರ್ಲಾಲಿನಲ್ಲಿ ಗೋ ಕಳ್ಳತನದ ವಿರುದ್ಧ ಬೃಹತ್ ಪ್ರತಿಭಟನಾ ಸಭೆಯ ಗಂಟೆಯ ಅoತರದಲ್ಲಿಯೇ ಹಿಂದೂ ಸಂಘಟನೆಯ ಕಾರ್ಯಕರ್ತರು ಮಾರುತಿ ಕಾರ್ ಅಲ್ಲಿ ಕದ್ದೋಯ್ಯುವ ಎರಡು ಗೋವನ್ನು ರಕ್ಷಿಸಿದ್ದಾರೆ.

ಬಜರಂಗದಳ ಹಾಗೂ ಹಿಂದೂ ಜಾಗರಣವೇದಿಕೆಯಾ ಕಾರ್ಯಕರ್ತರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಗೋವನ್ನು ರಕ್ಷಿಸಿದ್ದಾರೆ. ಕಾರಿನಲ್ಲಿದ್ದವರು ಪರಾರಿಯಾಗಿದ್ದಾರೆ.

ಶಿರ್ಲಾಲಿನಿಂದ ಸುಮಾರು 7.00  ಗಂಟೆಗೆ ಮಾರುತಿ 800 ಕಾರನ್ನು ಸಂಘಟನೆಯ ಕಾರ್ಯಕರ್ತರು  ಬೆನ್ನಟ್ಟಿದ್ದು, ಕಾರು ಕೆರ್ವಾಶೆಯ ಕಡೆಗೆ ಕಡೆಗೆ ಹೋಗುತ್ತಿದ್ದು ಎನ್ನಲಾಗಿದೆ.ಅಲ್ಲದೆ  ಮಸೀದಿ ಬಳಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದು ಕಾರಿನಲ್ಲಿದ್ದವರು ಪರಾರಿಯಾಗಿದ್ದರೆಂದು ತಿಳಿದು ಬಂದಿದೆ.ಸ್ಥಳಕ್ಕೆ ಸಂಘಟನೆಯ ಕಾರ್ಯಕರ್ತರು ದೌಡಾಯಿಸಿದ್ದು ಬಿಗುವಿನ ವಾತಾವರಣ ಉಂಟಾಗಿದೆ.ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಜಾಹೀರಾತು