ಕಾರ್ಕಳ:ಎಪಿಎಂಸಿ ಮಾರುಕಟ್ಟೆಯಲ್ಲಿ 1 ಕೋ ರೂ ವೆಚ್ಚದಲ್ಲಿ ರೈತ ಸಭಾಭವನ:ರತ್ನಾಕರ್ ಅಮೀನ್ -Times of karkala


 ಕಾರ್ಕಳ: ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಹೆಬ್ರಿ ಹಾಗೂ ಕಾರ್ಕಳ ತಾಲೂಕಿನ ರೈತರಿಗಾಗಿ 1 ಕೋಟಿ ರೂ ವೆಚ್ಚದಲ್ಲಿ ರೈತ ಸಭಾಭವನ ನಿರ್ಮಿಸಲಾಗುವುದು ಎಂದು ಕಾರ್ಕಳ ಎಪಿಎಂಸಿ ಅಧ್ಯಕ್ಷ ರತ್ನಾಕರ್ ಅಮೀನ್ ಹೇಳಿದರು. ಅವರು ಮಂಗಳವಾರ ಎಪಿಎಂಸಿ ಪ್ರಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ರೈತ ಕುಟುಂಬಗಳ ಶುಭ ಸಮಾರಂಭಗಳನ್ನು ನಡೆಸುವ ಉದ್ದೇಶದಿಂದ ಈ ಸಭಾಭವನವನ್ನು ನಿರ್ಮಿಸುವ ಉದ್ಧೇಶವಾಗಿದೆ ಎಂದರು. 

ಇದಲ್ಲದೇ  ರೈತರ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮೀಣ ರಸ್ತೆಗಳನ್ನು ಸುಮಾರು 33 ಲಕ್ಷ  ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು, ನಬಾರ್ಡ್ ಯೋಜನೆಯಡಿ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಮಾರುಕಟ್ಟೆ ಪ್ರಾಂಗಣದಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ, ಹರಾಜು ಕಟ್ಟೆ, ಶೌಚಾಲಯಗಳ ನಿರ್ಮಾಣ,ಬೀದಿ ದೀಪಗಳ ದುರಸ್ತಿ ಸಹಿತ ಕಾಮಗಾರಿಗಳನ್ನು ನಡೆಸಲಾಗುವುದು ಹಾಗೂ ರೈತರು ಬೆಳೆದ ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯದ ಸಂದರ್ಭದಲ್ಲಿ ಅವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪರವಾನಗಿ ಹೊಂದಿರುವ ಸಹಕಾರ ಸಂಘ ಅಥವಾ ವರ್ತಕರಿಗೆ  ಮಾರುಕಟ್ಟೆ ಪ್ರಾಂಗಣದಲ್ಲಿ ಶೀಥಲೀಕರಣಗೃಹ ನಿರ್ಮಾಣಕ್ಕೆ ಶೇ 50ರ ದರದಲ್ಲಿ ನಿವೇಶನವನ್ನು ಲೀಸ್ ಆಧಾರದಲ್ಲಿ ನೀಡಲಾಗುವುದು ಎಂದರು.  ಅಲ್ಲದೇ ಪ್ರಾಂಗಣದಲ್ಲಿ ರೈತರು ಬೆಳೆದ ಹಣ್ಣು ತರಕಾರಿಗಳನ್ನು ಮಾರಾಟ ಮಾರಾಟ ಮಾಡಲು ಅನುಕೂಲವಾಗುವಂತೆ ವಾರದ ಸಂತೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜಯವರ್ಮ ಜೈನ್ ಮಾಪಾಲು, ಮಾಜಿ ಉಪಾಧ್ಯಕ್ಷ ಮುಟ್ಲುಪಾಡಿ ಸತೀಶ್ ಶೆಟ್ಟಿ, ನಾರಾಯಣ ಸುವರ್ಣ, ನಾಮ ನಿರ್ದೇಶನ ಸದಸ್ಯ ದಿನೇಶ್ ಪೈ ಮುಂತಾದವರಿದ್ದರು.

ಜಾಹೀರಾತು 


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget