ನೇಪಾಳದಲ್ಲಿ ಭೀಕರ ಮಳೆಗೆ 50ಕ್ಕೂ ಹೆಚ್ಚು ಜನ ನಾಪತ್ತೆ-Times of karkala


ಕಠ್ಮಂಡು: ನೇಪಾಳದಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಭೀಕರ ಮಳೆಗೆ 50ಕ್ಕೂ ಹೆಚ್ಚು ಜನ ಕೊಚ್ಚಿ ಹೋಗಿ, ಹಲವು ಮನೆಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ನೇಪಾಳದ 100ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಸುರಿದ 105 ಮಿಲಿ ಮೀಟರ್‍ಗೂ ಹೆಚ್ಚಿನ ಮಳೆಯಿಂದಾಗಿ ಜನ ಭಯಭೀತರಾಗಿದ್ದಾರೆ. ಈಗಾಗಲೇ ನೇಪಾಳದ ರಾಜಾಧಾನಿ ಕಠ್ಮಂಡುವಿನಲ್ಲಿ 350ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಜಲಾವೃತಗೊಂಡಿದ್ದು, 50ಕ್ಕೂ ಹೆಚ್ಚು ಮಂದಿ ನೀರಿನಲ್ಲಿ ಕೊಚ್ಚಿ ಹೋಗಿರುವ ಬಗ್ಗೆ ವರದಿಯಾಗಿದೆ. 

ಧಾರಾಕಾರ ಮಳೆಗೆ ನೇಪಾಳದ ನದಿಗಳೆಲ್ಲ ತುಂಬಿ ಹರಿಯುತ್ತಿದ್ದು, ವಸತಿ ಪ್ರದೇಶಗಳತ್ತ ನೀರು ನುಗ್ಗಿ ಹಲವು ಅವಾಂತರಗಳು ನಡೆದು ಹೋಗಿವೆ. ಸಾಕಷ್ಟು ಜನ ಕಣ್ಮರೆಯಾಗಿದ್ದು, ನೇಪಾಳದ ಪೊಲೀಸರು, ರಕ್ಷಣಾ ಪಡೆ ಸೇರಿದಂತೆ ಸೇನೆ ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಕಳೆದ ರಾತ್ರಿ ಸಂಕಷ್ಟಕ್ಕೆ ಸಿಲುಕಿದ್ದ 130ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ. ಹಲವು ಕಡೆ ಜನ ಸಂಪರ್ಕಕ್ಕೆ ಸಿಗದೆ ಕಷ್ಟದಲ್ಲಿದ್ದಾರೆ. ಅವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. 

ಮಳೆಯೊಂದಿಗೆ ಸಿಡಿಲಿನ ಅಬ್ಬರ ಕೂಡ ಜೋರಾಗಿದ್ದು, ಈಗಾಗಲೇ ಸಿಡಿಲು ಬಡಿದು 7 ಮಂದಿ ಮೃತರಾಗಿರುವ ಬಗ್ಗೆ ಸ್ಥಳೀಯ ವಾಹಿನಿ ವರದಿ ಮಾಡಿದೆ. ಸಿಡಿಲು ಬಡಿದು ಹಲವು ಮನೆಗಳಿಗೆ ಹಾನಿಯಾಗಿದೆ.

ಜಾಹೀರಾತು 































Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget