ಕಾರ್ಕಳ:ಸಂಕಷ್ಟಕ್ಕೆ ಸಿಲುಕಿದ ಚಿನ್ನದ ವ್ಯಾಪಾರಿಗಳು ಮತ್ತು ಕೆಲಸಗಾರರು ಆಭರಣ ಅಂಗಡಿ ಚಿನ್ನದ ಕೆಲಸಗರಿಂದ ಮನವಿ

ಕಾರ್ಕಳ:ಆಭರಣಗಳ ಮೇಲೆ ವಿಧಿಸಿರುವ ಹೆಚ್ ಯುಐಡಿ ಅನ್ನು ಹಿಂಪಡೆಯುವಂತೆ ಆಗ್ರಹಿಸಿ ಕಾರ್ಕಳ ತಾಲೂಕಿನ ಜ್ಯುವೆಲ್ಲರ್ಸ್ ಮಾಲಕರು ಚಿನ್ನದ ಕೆಲಸಗಾರರ ವತಿಯಿಂದ ತಹಸೀಲ್ದಾರ್ ಪ್ರಕಾಶ್ ಮರಬಳ್ಳಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕೇಂದ್ರ ಸರಕಾರವು ಜೂ.1 ರಿಂದ ಅನ್ವಯವಾಗವಂತೆ ಹೆಚ್ ಯುಐಡಿ ಅನ್ನು ಪರಿಚಯಿಸಿದ್ದು ಅದರ ಪ್ರಕಾರ ಪ್ರತೀ ಆಭರಣಕ್ಕೂ  ಸಹ ವಿಶಿಷ್ಟ ಗುರುತನ್ನು ನೀಡಬೇಕಾಗುತ್ತದೆ.ಆದರೆ ಪ್ರಸ್ತಾಪಿತ ಹೆಚ್ ಯುಐಡಿ ಕುರಿತು ಆಭರಣ ಉದ್ಯಮದಲ್ಲಿ ಜಿಜ್ಞಾಸೆಗಳಿದ್ದು ಬ್ಯುರೋ ಆಫ್ ಇಂಡಿಯಾ ಸ್ಟ್ಯಾಂಡರ್ಡ್ ಸಂಸ್ಥೆ  ಇದನ್ನು ನಿವಾರಿಸಲು ಸಾಧ್ಯವಾಗಲಿಲ್ಲ.

ಹೆಚ್ ಯುಐಡಿ ಗ್ರಾಹಕರ ಹಿತಾಸಕ್ತಿಗೆ ವಿರುದ್ಧವಾಗಿದೆ.ಇದರಿಂದಾಗಿ ಸಣ್ಣ,ಮಾಧ್ಯಮ ಆಭರಣೋದ್ಯಮಿಗಳು ಸಂಕಷ್ಟ ಅನುಭವಿಸುವಂತಾಗಿದೆ.ಆದುದರಿಂದ ಹೊಸ ನಿಯಮಾನ್ನು ವಾಪಾಸ್ ತೆಗೆದುಕೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭ ಉಷಾ ಜ್ಯುವೆಲ್ಲರ್ಸ್ ಮಾಲಕ ಅಮಿತ್ ಆಚಾರ್ಯ,ರೋಹಿತ್ ಆಚಾರ್ಯ,ಆಯೇಷಾ ಜ್ಯುವೆಲ್ಲರ್ಸ್ ನ ಮಲ ಅಸ್ಲಾಂ,ಪವನ್ ಜ್ಯುವೆಲ್ಲರ್ಸ್ ನ ಸತೀಶ್ ಆಚಾರ್ಯ,ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷ ಕಿಶೋರ್ ಆಚಾರ್ಯ,ಜ್ಯುವೆಲ್ಲರ್ಸ್ ಮಾಲಕರು ಕೆಲಸಗಾರರು ಉಪಸ್ಥಿತರಿದ್ದರು.

ಸಂಕಷ್ಟಕ್ಕೆ ಸಿಲುಕಿದ ಚಿನ್ನದ ವ್ಯಾಪಾರಿಗಳು ಮತ್ತು ಕೆಲಸಗಾರರು 

ಚಿನ್ನದ ವ್ಯಾಪಾರಿ ಮತ್ತು ‌ಚಿನ್ನದ ಕೆಲಸ ಮಾಡುವ ವೃತ್ತಿಯಲ್ಲಿ ಇರುವವರಿಗೆ ಈ BIS ಹಾಲ್ಮಾರ್ಕ್ ನ ಹೊಸ ನಿಯಮ ಬರಸಿಡಿಲಿನಂತೆ ಬಡಿದದ್ದು ವಿಷಾದದ ಸಂಗತಿಯಾಗಿದೆ.

ಈಗಾಗಲೆ ಚಿನ್ನದ ಕೆಲಸಗಾರರು ತಾವು ಗ್ರಾಹಕರಿಂದ ಒಂದೆರಡು ಆಭರಣಗಳನ್ನು ತಯಾರಿಸುವ ಆರ್ಡರ್ ಪಡೆದು BIS ಶುದ್ದತೆಯ ಮಾನದಂಡಗಳನ್ನೇ ಬಳಸಿ ಚಿನ್ನಾಭರಣಗಳನ್ನು ತಯಾರಿಸಿದ್ದರೂ ಅದನ್ನು BIS ಹಾಲಮಾರ್ಕ್ ಸೆಂಟರ್ ಗೆ BIS ಮುದ್ರೆಯೊತ್ತಲು ಒಯ್ದಾಗ ಅಲ್ಲಿ ಇವರು ಕೊಟ್ಟ ಈ ಸುಂದರವಾದ ಆಭರಣಗಳನ್ನು ತುಂಡು ಮಾಡಿ ಅದನ್ನು ಆಸಿಡ್ ಪರೀಕ್ಷೆಗೆ (ಮ್ಯಾನ್ಯುಯಲ್) ಒಳಪಡಿಸುತ್ತಾರೆ. ಈ ಪ್ರಕ್ರಿಯೆಯಿಂದ ಸಣ್ಣ ವ್ಯಾಪಾರಿಗಳು ಹಾಗೂ ಚಿನ್ನದ ಕೆಲಸಗಾರರು ತಾವು ತಯಾರಿಸಿದ ಒಂದೆರಡು ಆಭರಣಗಳನ್ನು ಹಾಲಮಾರ್ಕ್ ಸೆಂಟರ್ ನವರು ಕತ್ತರಿಸಿ ವಾಪಸ್ ಕೊಡುವುದರಿಂದ ಈ ಹಾನಿಗೊಳಗಾದ ಆಭರಣಗಳನ್ನು ಮಾರಲಾಗದೇ ನಷ್ಟವನ್ನು ಅನುಭವಿಸುವ ಸಂಕಷ್ಟವನ್ನು ಎದುರಿಸುತ್ತಿದ್ದಾನೆ.

ಸಾವಿರಾರು ವರುಷಗಳ ಇತಿಹಾಸ ಇರುವ ಈ ಉದ್ಯಮ ಈಗಾಗಲೆ ಹಲವು ತಾಪತ್ರಯವನ್ನು ಎದುರಿಸುತ್ತಿದ್ದ ಈ ಕ್ಷೇತ್ರದವರು ಸಂಪೂರ್ಣವಾಗಿ ಈ ಚಿನ್ನಾಭರಣ ಕ್ಷೇತ್ರವನ್ನೇ ತೊರೆಯುವ ಪರಿಸ್ಥಿತಿಗೆ ಬಂದು ತಲುಪಿರುವುದು ಅತ್ಯಂತ ದುಃಖದಾಯಕ ಸಂಗತಿ.

 ದೊಡ್ಡ-ದೊಡ್ಡ ಕಾರ್ಪೋರೇಟ್ ಉದ್ಯಮದವರಿಗಾದರೆ ಕಲ್ಪನೆಗೂ ಅತೀತವಾದ ಬಂಡವಾಳ ಇರುತ್ತದೆ. ಒಮ್ಮೆ ಹಾಲ್ಮಾರ್ಕ್ ಸೆಂಟರಿಗೆ ತಮ್ಮ ಆಭರಣಗಳನ್ನು ಕಳುಹಿಸುವಾಗ ಕಿಲೋಗಟ್ಟಲೆ ನೂರಾರು ಆಭರಣಗಳನ್ನು ಕಳುಹಿಸುತ್ತಾರೆ. ಆ ದೊಡ್ಡ ಲಾಟ್ ನಲ್ಲಿ ಒಂದೆರಡು ಆಭರಣಗಳನ್ನು ಅಷ್ಟೇ ಸ್ವೇಚ್ಚೇಯಾಗಿ ಆಯ್ಕೆ ಮಾಡಿ ಈ ರೀತಿ ಪರೀಕ್ಷೆಗೆ ಒಳಪಡಿಸಿ ಉಳಿದ ಎಲ್ಲಾ ಆಭರಣಗಳಿಗೆ BIS ಹಾಲ್ಮಾರ್ಕ್ ಮುದ್ರೆ ಹಾಕುತ್ತಾರೆ. ಆದರೆ ದೇಶದಾದ್ಯಂತ ಅಗಾಧ ಸಂಖ್ಯೆಯಲ್ಲಿ ಇರುವ ಸಣ್ಣ ಪ್ರಮಾಣದ ವ್ಯಾಪಾರಿಗಳಿಗೆ ಹಾಗೂ ಚಿನ್ನದ ಕೆಲಸದವರು ತಯಾರು ಮಾಡೋದೆ ಒಂದೆರಡು ಆಭರಣಗಳು ಅದು ಮಾರಾಟವಾದ ಮೇಲೆ ವಾಪಸು ಬಂದ ಮೂಲ ಬಂಡವಾಳದಿಂದ ಮುಂದಿನ ಆಭರಣಗಳನ್ನು ತಯಾರಿಸುವವರಿಗೆ ಇದು ಸಹಿಸಲಾಗದ ಹಿಂಸೆ ಆಗಿದೆ.

ಈ ಕ್ಷೇತ್ರದಲ್ಲಿ ಅನಕ್ಷರಸ್ಥರೇ ಹೆಚ್ಚು ಜನರಾಗಿದ್ದಾರೆ ಅವರಿಗೆ ಇವೆಲ್ಲಾ ಕಂಪ್ಯೂಟರ್ ಮುಖೇನ ಅಪಲೋಡ್ ಡೌನ್ಲೋಡ್ ಮಾಡುವುದು/ ಇ-ಮೇಲ್ ಮಾಡುವ ಕ್ರಮಗಳು ಈ ಕ್ಷಣದಲ್ಲಿ ಅಸಾಧ್ಯವಾದ ಮಾತಾಗಿದೆ. ಅಷ್ಟೇ ಅಲ್ಲದೆ ಇನ್ನೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಹಾಗೂ ಈ ವೃತ್ತಿಯನ್ನೇ ನಂಬಿರುವ ಈ ಕ್ಷೇತ್ರದ ಬಡ ಜನರಿಗಂತು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರದಂತೆ ಅನಿಸತೊಡಗಿದೆ. ಮುಂದೇನು ಮಾಡುವುದು ತಮ್ಮ ಈ ತೊಳಲನ್ನು ಯಾರಲ್ಲಿ ಹೇಳುವುದು ಎಂದು ದಾರಿಕಾಣದಾಗಿದೆ. ಈಗ ಈ ಪರಿಸ್ಥಿತಿಯನ್ನು ಸರಕಾರ ಗಮನವಹಿಸಿ ಪರಿಸ್ಥಿತಿಯನ್ನು ಬದಲಾಯಿಸದಿದ್ದರೆ ಈಗಾಗಲೇ ಕೊರೋನಾಘಾತದಿಂದ ಬಸವಳಿದ ಬಡ ಜನರಿಗೆ ಈ ಕ್ಷೇತ್ರವನ್ನು ತ್ಯಾಗಮಾಡಿ ಬೇರೆ ಕಡೆ ಗುಳೆ ಹೋಗಬೇಕು ಇಲ್ಲಾ ಆತ್ಮಹತ್ಯೆಗೆ ಶರಣಾಗಬೇಕು.‌ ಈ ಪರಿಸ್ಥಿತಿ ಬರುವವರೆಗೆ ನಮ್ಮ ಜನರನ್ನು ತಳ್ಳಬೇಡಿ ಎಂದು ಶಾಸಕರು, ಸಂಸದರು ಹಾಗೂ ಸರಕಾರದ ಮಂತ್ರಿಗಳ ಮುಖೇನ ಸರಕಾರಕ್ಕೆ ನಮ್ಮ ಈ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡವ ಮನವಿಯನ್ನು ಮಾಡುತ್ತಿದ್ದಾರೆ.
 ಜಾಹೀರಾತು Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget