ನಿಟ್ಟೆ:ಕಾರು-ರಿಕ್ಷಾ ಡಿಕ್ಕಿ,ವಾಹನಗಳು ಜಖಂ-Times of karkala

 

ಕಾರು ಮತ್ತು ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ ರಿಕ್ಷಾ ಚಾಲಕ ಗಾಯಗೊಂಡ ಘಟನೆ ನಿಟ್ಟೆ ಗ್ರಾಮದ ಭ್ರಾಮರಿ ಜಂಕ್ಷನ್ ಬಳಿ ಸಂಭವಿಸಿದೆ.ಪರಿಣಾಮವಾಗಿ ರಿಕ್ಷಾ ಹಾಗೂ ಕಾರ್ ಜಖಂ ಗೊಂಡಿದ್ದು ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿದ್ದಾರೆ.

ಭಾರತಿ ಎಂಬುವವರು  ಕಾರನ್ನು ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ  ಬೆಳ್ಮಣ್ ಕಡೆಗೆ ಹೋಗುತ್ತಿದ್ದ ಅಟೋರಿಕ್ಷಾವನ್ನು ಓವರ್ ಟೇಕ್ ಮಾಡುವ ಸಲುವಾಗಿ ಅತೀ ವೇಗವಾಗಿ ಚಲಾಯಿಸಿದ್ದರು.ಅದೇ ಸಂದರ್ಭ ಬೆಲ್ಮನ್ ಕಡೆಯಿಂದ ವಾಹನವೊಂದು ಬಂದಿದ್ದು ಅದನ್ನು ತಪ್ಪಿಸುವ ಸಲುವಾಗಿ ಎಡಕ್ಕೆ ತಿರುಗಿಸಿದ್ದಾರೆ.

ಎಡಬದಿಯಲ್ಲಿ ಚಲಿಸುತ್ತಿದ್ದ ರಿಕ್ಷಾದ ಮುಂಭಾಗಕ್ಕೆ ಕಾರು ಡಿಕ್ಕಿಹೊಡೆದಿದ್ದು ರಿಕ್ಷಾ ಚಾಲಕನ ಸಮೇತವಾಗಿ ರಸ್ತೆಗೆ ಬಿದ್ದಿದೆ.  ಪರಿಣಾಮ ಅಟೋರಿಕ್ಷಾ ಚಾಲಕ ಲಕ್ಷ್ಮಣ ಗಂಭೀರ ಗಾಯಗೊಂಡಿದ್ದಾರೆ.ಅಪಘಾತದಿಂದ ಎರಡೂ ವಾಹನಗಳು ಜಖಂಗೊಂಡಿರುತ್ತವೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.































































ಜಾಹೀರಾತು 










Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget