"ಸತತ ಬೆಲೆಯೇರಿಕೆಯಿಂದ ಬಡವರ, ಮಧ್ಯಮವರ್ಗದವರ ಬದುಕು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ":ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜಾ-Times of karkala


 ದಿನೇದಿನೇ ಅಗತ್ಯವಸ್ತುಗಳ ಬೆಲೆ ಗಗನಕ್ಕೆ ಏರುತ್ತಿರುವ ಈ ಸಂದರ್ಭದಲ್ಲಿ, ಇತ್ತ ಕೆಲಸವೂ ಇಲ್ಲದೆ ದಿನದೂಡುವುದೇ ಕಷ್ಟ ಎಂಬ ಪರಿಸ್ಥಿತಿಯಲ್ಲಿ ಜನರು ಕಂಗಾಲಾಗಿರುವಾಗ  ಗ್ಯಾಸ್ ದರವನ್ನು ಕೇವಲ 10 ದಿನಗಳ ಅಂತರದಲ್ಲಿ ಎರಡು ಬಾರಿ ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಉಪ್ಪು ಸವರಿದಂತೆ ಬಿಜೆಪಿ ಸರಕಾರವು ಮಾಡುತ್ತಿದೆ ಎಂದು ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಡವರ, ಮಧ್ಯಮವರ್ಗದವರ ಬದುಕು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಸರಕಾರದ ಕೊರೋನಾ ನಿರ್ವಹಣೆಯ ವೈಫಲ್ಯವನ್ನು  ಜನರು ಅನುಭವಿಸುವಂತಾಗಿದೆ. ಬಿಜೆಪಿ ನಾಯಕರು ಜನಾಶೀರ್ವಾದ ಯಾತ್ರೆ ಮಾಡುತ್ತಾ, ಜನ ಸೇರಿಸುತ್ತಾ, ಜನರ ದಿಕ್ಕು ತಪ್ಪಿಸುತ್ತಾ,  ಸಂಘಪರಿವಾರದ ಕಟ್ಟುಕತೆಗಳನ್ನು ಭಾಷಣಗಳಲ್ಲಿ ಹೇಳಿ ಅದನ್ನು ಸತ್ಯ ಮಾಡುವ  ಕೆಲಸದಲ್ಲಿ ನಿರತರಾಗಿದ್ದಾರೆ. 

ಈಗಾಗಲೇ ಲಾಕ್ ಡೌನ್,  ವೀಕೆಂಡ್ ಕರ್ಫ್ಯೂಗಳಿಂದಾಗಿ ಆದಾಯ ಕಳೆದುಕೊಂಡವರು ದಿಕ್ಕೇ ತೋಚದಂತಾಗಿದ್ದಾರೆ.  ಆದರೆ ಕೇಂದ್ರ, ರಾಜ್ಯದ ಬಿಜೆಪಿ ಸರಕಾರಗಳು ಇದ್ಯಾವುದರ ಗೊಡವೆಯೇ ಇಲ್ಲದೆ ದಿನೇದಿನೇ ಅಗತ್ಯವಸ್ತುಗಳ ಮತ್ತು ಜನರ ನಿತ್ಯ ಬಳಕೆಯ ಸಾಮಾಗ್ರಿಗಳ ಬೆಲೆಯನ್ನು ಏರಿಸುವುದರಲ್ಲಿ ನಿರತರಾಗಿದ್ದಾರೆ. ಇದೊಂದು ಕರುಣೆಯೇ ಇಲ್ಲದ ಸರಕಾರವಾಗಿದೆ.  ಜನರ ಭಾವನೆಗಳನ್ನು ಕೆರಳಿಸಿ ಅಧಿಕಾರ ಪಡೆದವರು ಜನರ ನಿಜ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರಲ್ಲ ಎಂಬುದನ್ನು ಜನರು ಈಗಲಾದರೂ ಮನಗಾಣಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಾಹೀರಾತು 


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget