ಕಾರ್ಕಳ:ಟಿಪ್ಪರ್,ಹಿಟಾಚಿ ಬಾಡಿಗೆ ಏರಿಸಲು ಅರ್ಥ್ ಮೂವರ್ಸ್ ಒಕ್ಕೂಟ ನಿರ್ಧಾರ ಡೀಸೆಲ್‌ ಬೆಲೆಯೇರಿಕೆ, ದುಬಾರಿ ನಿರ್ವಹಣಾ ವೆಚ್ಚಗಳಿಂದ ನಷ್ಟ ಅನುಭವಿಸುತ್ತಿರುವ ಮಾಲೀಕರು 👇ಇಲ್ಲಿದೆ ನೂತನ ದರ-Times of karkala

ಕಾರ್ಕಳ: ಡೀಸೆಲ್‌ ಬೆಲೆಯೇರಿಕೆ, ದುಬಾರಿ ನಿರ್ವಹಣಾ ವೆಚ್ಚಗಳಿಂದ ಟಿಪ್ಪರ್, ಜೆಸಿಬಿ,ಹಿಟಾಚಿ ಮಾಲೀಕರು ನಷ್ಟ ಅನುಭವಿಸುತ್ತಿದ್ದು ,ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕರಾವಳಿಯ ಉಭಯ ತಾಲೂಕುಗಳನೊಳಗೊಂಡ ಅರ್ಥ್ ಮೂವರ್ಸ್ ಯೂನಿಯನ್ ತಕ್ಷಣದಿಂದಲೇ ಟಿಪ್ಪರ್, ಜೆಸಿಬಿ ಹಾಗೂ ಹಿಟಾಚಿ ವಾಹನಳ ದರವನ್ನು ಏರಿಸಲು ನಿರ್ಧರಿಸಲಾಗಿದೆ ಎಂದು ಅರ್ಥ್ ಮೂವರ್ಸ್ ಅಸೋಸಿಯೇಷನ್ ಅಧ್ಯಕ್ಷ ವಿನಯ ಹೆಗ್ಡೆ ತಿಳಿಸಿದ್ದಾರೆ.ಅವರು ಕಾರ್ಕಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಲಕ್ಷ ರೂಪಾಯಿ ಸಾಲ ಮಾಡಿ ಜೆಸಿಬಿ ವಾಹನಗಳನ್ನು ಖರೀದಿಸಿ ಸರಿಯಾದ ಕೆಲಸವಿಲ್ಲದೇ  ವಾಹನಗಳ ಸಾಲ ಮರುಪಾವತಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ,ಇದಲ್ಲದೇ ಹೊರ ಜಿಲ್ಲೆಗಳಿಂದ ಬರುವ ವಾಹನದ ಮಾಲೀಕರು ಕಡಿಮೆ ದರದಲ್ಲಿ  ಕೆಲಸ ಮಾಡಿಕೊಡುವ ಹಿನ್ನೆಲೆಯಲ್ಲಿ ನಮ್ಮ ಜಿಲ್ಲೆಯ ಅರ್ಥ ಮೂವರ್ಸ್ ಮಾಲೀಕರಿಗೆ ಭಾರೀ ಹೊಡೆತ ಬಿದ್ದಿದೆ, ಆದ್ದರಿಂದ ಕರಾವಳಿಯ ಟಿಪ್ಪರ್, ಹಿಟಾಚಿ ಮಾಲೀಕರ ಹಿತ ಕಾಯುವ ನಿಟ್ಟಿನಲ್ಲಿ  ಅರ್ಥ್ ಮೂವರ್ಸ್ ಯೂನಿಯನ್ ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಯೂನಿಯನ್ ಪರಿಷ್ಕರಿಸಿದ ನೂತನ ದರ ಇಂತಿದೆ.

ಹಿಟಾಚಿ ಪ್ರತೀ ಗಂಟೆಗೆ 1300, ಜೆಸಿಬಿ ಪ್ರತೀ ಗಂಟೆಗೆ 1200, ಸಣ್ಣ ಹಿಟಾಚಿ ಗಂಟೆಗೆ 1100,ಟಿಪ್ಪರ್ ದಿನಕ್ಕೆ 7000 ಏರಿಸಲು ನಿರ್ಧರಿಸಲಾಗಿದ್ದು ಗ್ರಾಹಕರು ಸಹಕರಿಸುವಂತೆ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಕಾರ್ಕಳ ವಲಯ ಉಪಾಧ್ಯಕ್ಷ ಉದಯ ಕುಮಾರ್, ಗೌರವ ಸಲಹೆಗಾರರಾದ ಅಲ್ವಿನ್ ಮಿನೆಜಸ್, ಆದಿರಾಜ ಜೈನ್, ಕಾರ್ಯದರ್ಶಿ ಅಶೋಕ್ ಎಚ್ ,ಎಮ್, ಕರುಣಾಕರ ಭಂಡಾರಿ, ಅರುಣ್ ಹೆಗ್ಡೆ, ಪ್ರಕಾಶ್, ಭರತ್ ಮುಂತಾದವರಿದ್ದರು.

ಜಾಹೀರಾತು 


 
   

  


 
        
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget