ಜೇಸಿಐ ಕಾರ್ಕಳ ರೂರಲ್ ವತಿಯಿಂದ ಆನ್ಲೈನ್ ಭಾಷಣ ಸ್ಪರ್ಧೆ ಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ-Times of karkala


ಜೇಸಿ ಐ ಕಾರ್ಕಳ ರೂರಲ್ ವತಿಯಿಂದ ಶಾಲಾ ಮಕ್ಕಳಿಗೆ ನಡೆಸಿದ ಸ್ವಾತಂತ್ರ್ಯ ದಿನಾಚರಣೆ ಯ ಅಮ್ರತ ಮಹೋತ್ಸವ ದ ಪ್ರಯುಕ್ತ ಆನ್ಲೈನ್ ಭಾಷಣ ಸ್ಪರ್ಧೆ ಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಕಾರ್ಕಳ ಪ್ರಕಾಶ್ ಹೋಟೆಲ್ ನ ಸಭಾಂಗಣದಲ್ಲಿ  ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೇಸಿಐ ಕಾರ್ಕಳ ರೂರಲ್ ನ ಅಧ್ಯಕ್ಷ ರಾದ ಶ್ರೀ ಆನಂದ್ ಮಾಳ ರವರು ಬಹುಮಾನ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಮುಖ್ಯ ಅತಿಥಿಗಳಾಗಿ ಹೆಬ್ರಿ ಜೇಸಿ ಐ ನ ಅಧ್ಯಕ್ಷ ರಾದ ಶ್ರೀ ಮಂಜುನಾಥ ಕುಲಾಲ್, ಹಾಗೂ ಮೂಡುಬಿದಿರೆ ಜೇಸಿ ಐ ನ ಅಧ್ಯಕ್ಷ ರಾದ ಶ್ರೀ ಮಾರ್ಕ್ ಮೆಂಡೋನ್ಸಾ ರವರು ಬಹುಮಾನ ವಿತರಿಸಿ ಶುಭ ಹಾರೈಸಿದರು.

ಜೇಸಿ ಐ ಕಾರ್ಕಳ ರೂರಲ್ ನ ಮಾರ್ಗದರ್ಶಕ ರಾದ  ಪ್ರಕಾಶ್  , ಶ್ರೀಮತಿ ರಮಿತಾ ಶೈಲೇಂದ್ರ ರಾವ್, ಪೂರ್ವಾಧ್ಯಕ್ಷರುಗಳಾದ ಶ್ರೀ ಪ್ರಕಾಶ್ ಪೂಜಾರಿ ಕೆರ್ವಾಶೆ, ಶ್ರೀ ಸಂತೋಷ್ ಪೂಜಾರಿ , ಹಾಗೂ ಕಾರ್ಯದರ್ಶಿ ಸುರೇಶ್ ಪೂಜಾರಿ ಯವರು ವೇದಿಕೆ ಯಲ್ಲಿ ಉಪಸ್ಥಿತರಿದ್ದು ಬಹುಮಾನ ವಿಜೇತ ವಿದ್ಯಾರ್ಥಿಗಳನ್ನು ಮುಕ್ತ ಕಂಠ ದಿಂದ ಪ್ರಶಂಸಿಸಿ  ಸ್ಫೂರ್ತಿಯುತ  ನುಡಿಗಳನ್ನಾಡಿದರು. 

ಜೇಸಿ ಆನಂದ್ ಮಾಳ ರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಜೇಸಿ ಸುರೇಶ್ ಪೂಜಾರಿ ಯವರು ಧನ್ಯವಾದವಿತ್ತರು. 

ಜಾಹೀರಾತು 












Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget