ಕಾರ್ಕಳ:ಇಲಿ ಪಾಷಾಣವನ್ನು ಪೇಸ್ಟ್ ಎಂದು ತಿಳಿದು ಹಲ್ಲು ಉಜ್ಜಿದ್ದ ಮಹಿಳೆ ಸಾವು-Times of karkala

ಕಾರ್ಕಳ:ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ಕಾರ್ಕಳ  ಕಾಬೆಟ್ಟುವಿನಲ್ಲಿ ಸಂಭವಿಸಿದೆ.ಕಲಾವತಿ (61) ಮೃತಪಟ್ಟವರು.

ಆಗಸ್ಟ್ 20ರಂದು ಬೆಳಿಗ್ಗೆ10:00 ಗಂಟೆಗೆ  ತನ್ನ ಮನೆಯಲ್ಲಿ  ಆಕಸ್ಮಿಕವಾಗಿ ತಿಳಿಯದೇ ಇಲಿ ಪಾಷಾಣವನ್ನು ಪೇಸ್ಟ್ ಎಂದು ತಿಳಿದು ಹಲ್ಲು ಉಜ್ಜಿದ್ದರು.ಆ.22 ರಂದು ತನ್ನ ಮನೆಯಲ್ಲಿ ಅಸ್ವಸ್ಥರಾಗಿದ್ದು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಕೂಡಲೇ  ಅವರನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು 










Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget