ಇನ್ನ ಗ್ರಾಮಪಂಚಾಯತ್ ಗ್ರಾಮಸಭೆ-Times of karkala

ಸೆಪ್ಟೆಂಬರ್ 20 ಸೋಮವಾರ 2020-21 ರ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಇನ್ನಾಗ್ರಾಮ ಪಂಚಾಯತ್‌ ದಿ ಗೋಪಾಲಭಂಡಾರಿ ಸಭಾಭವನದಲ್ಲಿ ಇನ್ನಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಶ ಆರ್ ಮೂಲ್ಯರವರ ಅಧ್ಯಕ್ಷತೆಯಲ್ಲಿ ಜರುಗಿತು. 

ಕೇಂದ್ರದ ಮಾಜಿ ಸಚಿವರು, ಮಾಜಿ ಲೋಕಸಭಾ ಸದಸ್ಯರು , ರಾಜ್ಯ ಸಭಾ ಸದಸ್ಯರಾದ ದಿ| ಆಸ್ಕರ್ ಫೆರ್ನಾಂಡೀಸ್ ಮತ್ತು ಇನ್ನಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ದಿ|ಆನಂದ ಶೆಟ್ಟಿಯವರಿಗೆ  ಸಂತಾಪ ಸೂಚಿಸಲಾಯಿತು . ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಶ್ರೀ ಸತೀಶ ಪರವಸ್ವಾಗತಿಸಿ  ವರದಿ ವಾಚಿಸಿದರು. 

ಕೋವಿಡ್ ಸಮಸ್ಯೆ ಹಾಗೂ ಬ್ಯಾಂಕ್ ವಿಲೀನತೆಯಿಂದ ಫಲಾನುಭವಿಗೆ ನೇರ ಹಣ ಪಾವತಿಗೆ ತೊಡಕಾಗಿರುತ್ತದೆ.ಕೃಷಿ ಚಟುವಟಿಕೆ  ಪ್ರೋತ್ಸಾಹ ಹಾಗೂ ಈ ಸಂಚಾರಿ ಭಾಗದಲ್ಲಿ ಪಶು ವೈಧ್ಯಕೀಯ ಆಸ್ಪತ್ರೆ,ಸರಕಾರದ ವಿನೂತನ ಯೋಜನೆಯಿಂದ ವಿದ್ಯುತ್ ಸಂಪರ್ಕ ಇಲ್ಲದ ಮನೆಗೆ ವಿದ್ಯುತ್‌ ಸಂಪರ್ಕ, ಹಕ್ಕು ಪತ್ರ ನೀಡದ ಜಾಗದಲ್ಲಿ ಒಳ ಬಾಡಿಗೆ ಮಾರಾಟಕ್ಕೆ ಕಡಿವಾಣ ಹಾಕುವುದು ಮುಂತಾದ ವಿಚಾರಗಳ ಕುರಿತು ಪಂಚಾಯತ್ ನಲ್ಲಿ ಚರ್ಚಿಸಲಾಯಿತು.

ಡೀಮ್ ಫಾರೆಸ್ಟ್  ಮನೆ ನಿರ್ಮಾಣದವರ ನ್ಯಾಯಲಯದ ಆದೇಶ ಇತ್ಯರ್ಥಗೊಂಡಲ್ಲಿ ಮುಂದಿನ ಪಂಚಾಯತ್ ಸಾಮಾನ್ಯ ಸಭೆ ನಿರ್ಣಯದಂತೆ ಸೂಕ್ತ ಸ್ಪಂದಿಸಲಾಗುವುದು,ಕುಡಿಯುವ ನೀರಿನ ನಿರ್ವಹಣೆ  ಹಾಗೂ ಎಸ್‌ಆರ್‌ಎಲ್‌ಎಮ್‌ಘಟಕದ ನಿರ್ವಹಣೆ, ಗ್ರಾಮ ಪಂಚಾಯತಿಗೆ ಸವಾಲಾಗಿ ಪರಿಣಮಿಸಿದೆ ಎಂದು ಇನ್ನ ಗ್ರಾಮಪಂಚಾಯತ್ ಅಧ್ಯಕ್ಷ ಕುಶ ಆರ್.ಮೂಲ್ಯ ತಿಳಿಸಿದರು

ಪಂಚಾಯತ್‌ ಉಪಾಧ್ಯಕ್ಷರು ಶ್ರೀಮತಿ ಸರಿತಾ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ದೀಪಕ್‌ ಕೋಟ್ಯಾನ್, ಶ್ರೀಮತಿ ಕಸ್ತೂರಿ, ಶ್ರೀಮತಿ ಶರ್ಮಿಳಾ, ಚಂದ್ರಹಾಸ ಶೆಟ್ಟಿ , ಶ್ರೀಮತಿ ವಿಮಲ,ಪ್ರೇಮಕುಲಾಲ್,ಕು| ಸಮೀಕ್ಷಾ ಉಪಸ್ಥಿತರಿದ್ದರು.
 ಮಾಜಿತಾಲೂಕು ಪಂಚಾಯತ್ ಸದಸ್ಯರು,ಮಾಜಿಅಧ್ಯಕ್ಷರಾದ  ಜಾನ್ ಮೆಂಡೋನ್ಸಾ,ಮಾಜಿ ಸದಸ್ಯರಾದ ಸುಬ್ರಮಣ್ಯ ತಂತ್ರಿ,ಅಲೆನ್ ಡಿ ಸೋಜ,ರೂಪ ಆರ್‌ ಕೋಟ್ಯಾನ್,ಅಮರನಾಥ ಶೆಟ್ಟಿ , ಹರೀಶ ಶೆಟ್ಟಿ,ಇನ್ನಾ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ವಿಮಲ, ವಿವಿಧಇಲಾಖೆಯ ಅಧಿಕಾರಿಗಳು,ಅಂಗನವಾಡಿ ಕಾರ್ಯಕರ್ತೆಯರು, ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್‌ಅಭಿವೃದ್ಧಿಅಧಿಕಾರಿಸತೀಶ್ ಪರವ ವಂದಿಸಿದರು. 
   

  


 
        
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget