ಕಾರ್ಕಳ:"ಕೊಟ್ಯಾಂತರ ರೂಪಾಯಿ ವೆಚ್ಚ ಮಾಡಿದ ಬಂಡೀಮಠ ಬಸ್ ನಿಲ್ದಾಣ ಪಾಳು ಬೀಳುವ ಸ್ಥಿತಿಗೆ ತಲುಪಿದೆ"-Times of karkala

 


ಹೈಕೋಟ್ ಅದೇಶ ಅನುಷ್ಠಾನಕ್ಕೆ ಒತ್ತಾಯ

ವಿಸ್ತೃತ ಬಸ್ ನಿಲ್ದಾಣ- ಬಂಡೀಮಠ ಬಸ್ ನಿಲ್ದಾಣಗಳೆರಡನ್ನು

ಸಮಾನ ಬಳಕೆ

ಕಾರ್ಕಳ: ವಿಸ್ತೃತ ಬಸ್ ನಿಲ್ದಾಣ ಹಾಗೂ ಬಂಡೀಮಠ ಬಸ್ ನಿಲ್ದಾಣಗಳೆರಡನ್ನು ಸಮಾನವಾಗಿ ಸದ್ಬಳಕೆ ಮಾಡುವಂತೆ ರಾಜ್ಯ ಹೈಕೋರ್ಟ್ ಅದೇಶ ನೀಡಿ ವರ್ಷಗಳೆ ಕಳೆದು ಹೋಗಿದೆ. ಹೈಕೋರ್ಟ್ ಅದೇಶಕ್ಕೆ ಜಿಲ್ಲಾಡಳಿತ, ಕಾರ್ಕಳ ಪುರಸಭೆ ಗೌರವಿಸಿಲ್ಲ. ಈ ಕುರಿತು ಅರ್ಜಿದಾರರು ಮತ್ತೇ ನ್ಯಾಯಾಲಯಕ್ಕೆ ಮೋರೆ ಹೋದರೆ ಪುರಸಭಾ ಸದಸ್ಯರು ಸಹಿತ ಅಧಿಕಾರಿಗಳು ಕಾನೂನಿನ ಕುಣಿಕೆಯಲ್ಲಿ ಸಿಲುಕಬೇಕಾದಿತ್ತೆಂದು ಕಾರ್ಕಳ ಪುರಸಭಾ ಪ್ರತಿಪಕ್ಷ ನಾಯಕ ಅಶ್ಪಕ್ ಅಹಮ್ಮದ್ ಹೇಳಿದರು.

ಕಾರ್ಕಳ ಪುರಸಭಾ ಅಧ್ಯಕ್ಷೆ ಸುಮ ಅವರು ಅಧ್ಯಕ್ಷತೆಯಲ್ಲಿ ಜರುಗಿದ್ದ ಸಾಮಾನ್ಯ ಸಭೆಯ ಕಲಾಪವನ್ನು ಉದ್ದೇಶಿಸಿ ಅವರು ಮಾತನಾಡಿದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಭರತ್‌ಲಾಲ್ ಮೀನಾ ಅವರು ಕಾರ್ಕಳ ಬಸ್ ನಿಲ್ದಾಣಕ್ಕೆಂದು ಬ೦ಡಿಮಠ ದಲ್ಲಿ ಜಾಗವನ್ನು ಕಾದಿರಿಸಿದ್ದರು. ಕಾರ್ಕಳ ಪುರಸಭೆಯು ಕಾಂಗ್ರೆಸ್‌ನ ಅವಧಿಯಲ್ಲಿ ಇದ್ದಾಗ ಅಂದಿನ ಉಸ್ತುವಾರಿ ಸಚಿವ ಡಾ.ವಿ.ಎಸ್.ಆಚಾರ್ಯ ಅವರ ಮುತುವರ್ಜಿಯಿಂದ ರೂ.2.75 ಕೋಟಿ ಅನುದಾನದೊಂದಿಗೆ ಬಂಡೀಮಠ ಬಸ್ ನಿಲ್ದಾಣವನ್ನು ಕಾಂಕ್ರೀಟ್‌ಕರಣಗೊಳಿಸಿ ಅಭಿವೃದ್ಧಿ ಪಡಿಸಿ ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಲೋಕಾರ್ಪಣೆಗೈದಿದ್ದರು. ನಂತರದ ದಿನಗಳಲ್ಲಿ ಬಸ್ ನಿಲ್ದಾಣಕ್ಕೆ ಡಾ.ವಿ.ಎಸ್.ಆಚಾರ್ಯ ನಾಮಕರಣಗೈಯುವ ಮೂಲಕ ಅಂದಿನ ಪುರಸಭಾ ಆಡಳಿತವು ಅಭಿವೃದ್ಧಿಗೆ ಒತ್ತು ನೀಡಿತ್ತು. ಸ್ಥಾಪಿತ ಹಿತಾಸಕ್ತಿಯಿಂದಾಗಿ ಕೊಟ್ಯಾಂತರ ರೂಪಾಯಿ ವೆಚ್ಚ ಮಾಡಿದ ಬಂಡೀಮಠ ಬಸ್ ನಿಲ್ದಾಣ ಪಾಳು ಬೀಳುವ ಸ್ಥಿತಿಗೆ ತಲುಪಿತು. ಈ ಕುರಿತು ನಾಗರಿಕರು ಹೈಕೊರ್ಟ್ಗೆ ಮೋರೆ ಹೋಗಿದ್ದರು ಎಂದು ಅಶ್ಪಕ್ ಅಹಮ್ಮದ್ ಸಭೆಯಲ್ಲಿ ಪ್ರಸ್ತಾಪಿದರು.

ಈ ಕುರಿತು ಉಡುಪಿ ಜಿಲ್ಲಾಧಿಕಾರಿಯವರ ವಿಚಾರ ಗಮನಕ್ಕೆತಂದು ಹೈಕೋರ್ಟ್ ಅದೇಶವನ್ನು ಅನುಷ್ಠಾನಗೊಳಿಸುವ ಎಂದು ಮುಖ್ಯಾಧಿಖಾರಿ ರೂಪಾ ಶೆಟ್ಟಿ ಸಭೆಯಲ್ಲಿ ತೀಳಿಸಿದರು.

ರುದ್ರಭೂಮಿಯಲ್ಲಿ ಉರುಳಿದ ಮರದ ಕಥೆ ಏನಾಯಿತು?

ಬಂಡೀಮಠದ ಪ್ರಮುಖ ರಸ್ತೆ ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ 3 ಮರಗಳಿವೆ. ಅದರ ತಳಭಾಗದಲ್ಲಿಯೇ ರಿಕ್ಷಾ ನಿಲ್ದಾಣವಿದೆ. ಮರದ ಬುಡದಲ್ಲಿ ಭಾರೀ ಗಾತ್ರದಲ್ಲಿ ತೊಳ್ಳು ಆಗಿದೆ ಎಂದು ಅಶ್ಪಕ್ ಅಹಮ್ಮದ್ ಸಭೆಯಲ್ಲಿ ಪ್ರಸ್ತಾಪಿಸಿದರು.

ಅದಕ್ಕೆ ಉತ್ತರಿಸಿದ ಕಾರ್ಕಳ ನಗರ ಅರಣ್ಯಧಿಕಾರಿ ಚಂದ್ರಕಾ೦ತ ವಿ.ಪೋಳ ಮಾತನಾಡಿ, ಅರಣ್ಯ ಇಲಾಖೆಯ ಅನುಮಮತಿಯೊಂದಿಗೆ ಮರಗಳ ಕೊಂಬೆಗಳನ್ನು ಕಡಿಯುವ ಅಧಿಕಾರವನ್ನು ಪುರಸಭೆ ಹೊಂದಿದೆ.ಮರದ ದಿಮ್ಮಿಗಳನ್ನು ಅರಣ್ಯ ಇಲಾಖೆಯ ವಶಕ್ಕೆ ನೀಡಬೇಕೆಂದರು.ಅದಕ್ಕೆ ಪ್ರತಿಕ್ರಿಯೆ ನೀಡಿದ ವಿನ್ನಿ ಬೋಲ್ಡ್ ಮೆಂಡೋನ್ಸಾ ಮಾತನಾಡಿ, ಕೈಗಾರಿಕಾ ಸಂಕೀರ್ಣ ಪ್ರದೇಶದಲ್ಲಿ ರಸ್ತೆಯಂಚಿನದಲ್ಲಿಯೇ ಅಪಾಯಕಾರಿ ಮರಗಳು ಬೆಳೆದು ರಸ್ತೆಯನ್ನೇ ಕ್ರಮಿಸುತ್ತಿದೆ. ಈ ಕುರಿತು ಅರಣ್ಯ ಇಲಾಖೆಗೆ ದೂರು ನೀಡಿದರೂ ಪ್ರಯೋಜನ ಶೂನ್ಯವಾಗಿದೆ. ಲಕ್ಷಾಂತರ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ರಸ್ತೆಯನ್ನೇ ಕಬಳಿಸಿದೆ. ಮರದ ಬೇರುಗಳು ರಸ್ತೆಯ ಡಾಂಬರನ್ನು ಕಿತ್ತು ಹಾಕಿದೆ ಎಂದರು.

ಶುಭದರಾವ್ ಮಾತನಾಡಿ, ಕರಿಯಕಲ್ಲು ರುದ್ರಭೂಮಿಯಲ್ಲಿ ಅಪಾಯಕಾರಿ ಅಲ್ಲದ  ಮರಗಳನ್ನು ಕೆಲವರು ಕಡಿದು ಹಾಕಿದ್ದಾರೆ. ಈ ಕುರಿತು ಪುರಸಭೆಗೆ ಹಾಗೂ ಅರಣ್ಯ ಇಲಾಖೆಗೆ ದೂರು ನೀಡಿ 3 ತಿಂಗಳು ಕಳೆದಿದೆ. ಯಾವುದೇ ಕ್ರಮವಿಲ್ಲ. ಬೆಲೆಬಾಳುವ ಮರದ ದಿಮ್ಮಿಗಳು ಅರಣ್ಯ ಇಲಾಖೆಯ ಡಿಪೋ ಸೇರಿದಿಯೇ ಎಂದು ಖಾರವಾಗಿ ಪ್ರಶ್ನಿಸಿದರು.

ನೀತಾ ಆಚಾರ್ಯ, ನಳಿನಿ ಆಚಾರ್ಯ, ಪ್ರಭಾ ಕಿಶೋರ್,ಪ್ರಸನ್ನ.ಕೆ ಮೊದಲಾದವರು ಈ ಚರ್ಚೆಯಲ್ಲಿಪಾಲ್ಗೊಂಡರು.

ಪ್ಲಾಬಿಂಗ್ ವಿಭಾಗಕ್ಕೆ ಸಂಬ೦ಧಿಸಿದ೦ತೆ ಲಕ್ಷಾಂತರ ವೆಚ್ಚದಲ್ಲಿ ಟೆಂಡರ್ ಕಾಮಗಾರಿಗಳು ನಡೆಯುತ್ತಾ ಬಂದಿದೆ. ದುರಸ್ಥಿಗೆ ಒಳಪಟ್ಟ ಸರಕಾರಿ ಪರಿಕರಸೊತ್ತುಗಳು ಏನಾಗಿದೆ. ಅದನ್ನು ಗುಜುರಿಯಾಗಿ ಮಾರಾಟ ಮಾಡಿದರೆ ಪುರಸಭಾ ಬೊಕ್ಕಾಸಕ್ಕೆ ಲಕ್ಷಾಂತರ ರೂಪಾಯಿ ಅದಾಯ ಬರುತ್ತಿತ್ತು.ಕಳೆದ ಕೆಲವರ್ಷಗಳಿಂದ ಅದರ ಪ್ರಕ್ರಿಯೆಗಳು ನಡೆಯದೇ ಸೊತ್ತು ಯಾರೋ ಪಾಲಾಗುತ್ತಿದೆ ಎಂದು ಅಶ್ಪಕ್ ಅಹಮ್ಮದ್ ಸಭೆಯ ಮುಂದಿಟ್ಟರು.ಅದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ, ಪ್ಲಾಬಿಂಗ್‌ನ ಎಲ್ಲಾ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರೋರ್ವರ ಗೋದಾಮಿನಲ್ಲಿ ಇರಿಸಲಾಗಿದೆ ಎಂದರು. ಉತ್ತರಕ್ಕೆತೃಪ್ತಿಗೊಳ್ಳದ ಪ್ರತಿಪಕ್ಷ ಸದಸ್ಯರು ಕಡ್ಲೆಪುರಿಕಥೆ ಹೇಳುತ್ತಿದ್ದೀರಿ. ಇದು ಬಸ್‌ನಿಲ್ದಾಣ ಪರಿಸರದಲ್ಲಿನಡೆಯುತ್ತಿರುವ ಬಹಿರಂಗ ಸಭೆ ಅಲ್ಲ. ಸದನದ ಗೌರವ ಕಾಪಾಡಿ ಎಂದು ಪ್ರತ್ಯುತ್ತರ ನೀಡಿದರು.

ಇಂದಿರಾ ಕ್ಯಾಂಟೀನ್ ಶ್ರೀ ರಕ್ಷೆ!

ಸಾಮಾನ್ಯ ಸಭೆಯಲ್ಲಿ ಸದಸ್ಯರಿಗೆ ನೀಡಿದ ಫಲಹಾರದ ಗುಣಮಟ್ಟ ತೃಪ್ತಿದಾಯಕವಾಗಿರಲಿಲ್ಲ ಎಂಬ ದೂರನ್ನು ಅಶ್ಪಕ್ ಅಹಮ್ಮದ್ ಸಭೆಯ ಮುಂದಿರಿಸಿ ಶುಚಿ ಹಾಗೂ ರುಚಿಕರವಾಗಿ ಸಿದ್ಧ ಪಡಿಸಿದ ಆಹಾರಗಳನ್ನು ಸದಸ್ಯರಿಗೆ ಪೊರೈಕೆ ಮಾಡುವಂತೆ ಮನವಿ ಮಾಡಿಕೊಂಡರು. ಅದಕ್ಕೆ ಪ್ರತಿಕ್ರಿಯೆ ನೀಡಿದ ನಾಮನಿರ್ದೇಶಿರ ಸದಸ್ಯ ಪ್ರಸನ್ನ ಕಾರ್ಲ ಮಾತನಾಡಿ, ಇಂದಿರಾ ಕ್ಯಾಂಟೀನ್ ಆಹಾರವೇ ಲೇಸು ಎಂದು ಸಲಹೆ ನೀಡಿದರು. ಅಷ್ಟರಲ್ಲಿಯೇ ಒಗ್ಗಟ್ಟು ಪ್ರದರ್ಶಿಸಿದ ಪ್ರತಿಪಕ್ಷಸದಸ್ಯರಾದ ಹರೀಶ್ ದೇವಾಡಿಗ, ಶುಭದರಾವ್, ಪ್ರತಿಮಾ ರಾಣೆ, ರಹಮತ್ ಉತ್ತರಿಸಿ ಸಿದ್ಧರಾಮಯ್ಯ ಸರಕಾರ  ಬಡವರ ಮೇಲಿನ ಕಾಳಜಿಗೆ ಇಂದಿರಾ ಕ್ಯಾಂಟೀನ್ಆರ0ಭಿಸಿದ್ದರು. ಅಲ್ಲಿ ಸಿದ್ಧ ಪಡಿಸುವ ಆಹಾರ ಗುಣಮಟ್ಟದಾಗಿದೆ. ನಮಗೆ ತಿನ್ನುವಲ್ಲಿ ಯಾವುದೇ ಸಂಕೋಚವಿಲ್ಲ. ಮುಂದಿನ ಸಾಮಾನ್ಯ ಸಭೆಯಲ್ಲಿ ಸದಸ್ಯರು, ಅಧಿಕಾರಿಗಳು,ಸಿಬ್ಬಂದಿಗಳಿಗೆ ಅಲ್ಲಿಂದಲೇ ಆಹಾರ ಪೊರೈಕೆಯಾಗಲಿ. ಅದು ಮಾತ್ರವಲ್ಲದೇ ಪುರಸಭಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಚಿವರು, ಮುಖ್ಯಮಂತ್ರಿಗೂ ಅಲ್ಲಿಯ ಆಹಾರ ನೀಡಿಬೇಕು. ಅದಷ್ಟು ಬೇಗ ಆ ಕೆಲಸ ಸಾಗಬೇಕು. ರಾಜ್ಯ ಸರಕಾರವು ಇಂದಿರಾ ಕ್ಯಾಂಟೀನ್‌ನ ಬದಲಾಗಿ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಮರನಾಮಕರಕ್ಕೆ ಸಿದ್ಧವಾಗಿದೆ ಎಂದರು.


ಉಪಾಧ್ಯಕ್ಷೆ ಪಲ್ಲವಿ ರಾವ್, ಸ್ಥಾಯೀ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ  ಮಲ್ಯ, ಮುಖ್ಯಾಧಿಕಾರಿ ರೂಪಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪುರಸಭಾ ಅಧ್ಯಕ್ಷೆ ಸುಮ,ಉಪಾಧ್ಯಕ್ಷೆ ಪಲ್ಲವಿ ರಾವ್,ಸ್ಥಾಯೀ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಮಲ್ಯ,ಮುಖ್ಯಾಧಿಕಾರಿ ರೂಪಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಾಹೀರಾತು  
   

  


 
        
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget