ಲಾರಿ ರಿವರ್ಸ್ ತೆಗೆಯುವಾಗ ಅಡಿಗೆ ಬಿದ್ದು ಕಾರ್ಮಿಕನ ಕಾಲು ತುಂಡು ಹೆಬ್ರಿಯ ಕ್ರಷರ್ ನಲ್ಲಿ ನಡೆದ ಘಟನೆ-Times of karkala

ಲಾರಿ ರಿವರ್ಸ್ ತೆಗೆಯುವಾಗ ಅಡಿಗೆ ಬಿದ್ದು ಕಾರ್ಮಿಕನ ಕಾಲು ತುಂಡು  

ಹೆಬ್ರಿಯ ಕ್ರಷರ್ ನಲ್ಲಿ ನಡೆದ ಘಟನೆ-Times of karkala

ಲಾರಿ ರಿವರ್ಸ್ ತೆಗೆಯುವಾಗ ಕ್ಲೀನರ್ ಅಡಿಗೆ ಬಿದ್ದು ಕ್ಲೀನರ್ ಕಾಲು ಜಖಂ ಗೊಂಡ  ಘಟನೆ ಹೆಬ್ರಿಯ ಕ್ರಷರ್ ನಲ್ಲಿ ಸಂಭವಿಸಿದೆ. ಅಸ್ಸಾಂ ನ ನಿವಾಸಿ ಪಧುಂ ಗೋರಾ ಗಾಯಾಳು.ಹೆಬ್ರಿಯ ನಾಲ್ಕೂರು ಗ್ರಾಮದ ಮಿಯ್ಯಾರು ಎಂಬಲ್ಲಿರುವ ಪ್ರವೀಣ್ ಹೆಗ್ಡೆ ಇವರ ಮಾಲಕತ್ವದ ಯೂನಿಟಿ ರಾಕ್ ಕ್ರಷರ್ ನಲ್ಲಿ ಈ ಘಟನೆ ಸಂಭವಿಸಿದೆ. 

ಆಗಸ್ಟ್ 31 ರಂದು ಟಿಪ್ಪರ್ ಲಾರಿಯನ್ನು ಅದರ ಚಾಲಕ ಪರಮೇಶ್ ಎಂಬಾತ ಯೂನಿಟಿ ರಾಕ್ ಕ್ರಷರ್ ನ ಬಳಿವಿರುವ ಸರ್ಕಾರಿ ಜಾಗದಲ್ಲಿ ಶೇಖರಿಸಿಟ್ಟ ಜಲ್ಲಿಯನ್ನು ತುಂಬಲು ತಂದಿಟ್ಟಿದ್ದು ಪದುಂ ಗೋರಾ ಇವರು ಲಾರಿಯಿಂದ ಕೆಳಗಿಳಿದು ಲಾರಿಯ ಹಿಂದುಗಡೆ ಹೋಗಿ ನಿಂತು ಕೊಂಡಿರುವಾಗ ಚಾಲಕ ಪರಮೇಶ್ ಯಾವುದೇ ಸೂಚನೆ ಇಲ್ಲದೆ ಲಾರಿಯನ್ನು ರಿವರ್ಸ್ ತೆಗೆದಿದ್ದರು.

ಹಿಂದುಗಡೆ ನಿಂತಿದ್ದ ಕ್ಲೀನರ್  ಪಧುಂ ಗೋರಾಗೆ  ಟಿಪ್ಪರ್ ಡಿಕ್ಕಿ ಹೊಡೆದಿದ್ದು  ಲಾರಿಯ ಎಡಬದಿಯ ಹಿಂದಿನ ಚಕ್ರವು ಪದುಂ ಗೋರಾ ಇವರ ಕಾಲಿನ ಮೇಲೆ ಹರಿದ ಪರಿಣಾಮ ಅವರ ಎಡಕಾಲಿನ ಗಂಟಿನ ಕೆಳಗೆ ಮೂಳೆ ಮುರಿತದ ತೀವ್ರ ಸ್ವರೂಪದ ಗಾಯವಾಗಿದೆ.ಗಾಯಾಳು ಮಣಿಪಾಲ ಕೆ.ಎಂ.ಸಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು 










Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget