"ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಶಾಶ್ವತ ಕೊಡುಗೆ ನೀಡಿದ ಆಸ್ಕರ್‌ ಫೇರ್ನಾಂಡಿಸ್"-ನೀರೆ ಕೃಷ್ಣ ಶೆಟ್ಟಿ-Times of karkala


ತನ್ನ ಎಳವೆಯ ವಯಸ್ಸಿನಲ್ಲೇ ಅಂದು ಅತ್ಯಂತ ಗ್ರಾಮೀಣ ಪ್ರದೇಶವಾದ ಉಡುಪಿಯಿಂದ ಕಾಂಗ್ರೆಸ್‌ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಸೇರಿ ರಾಷ್ಟ್ರೀಯ ನಾಯಕರಾಗಿ ಇಂದಿರಾ ಗಾಂಧಿ ಕುಟುಂಬದ ಅತ್ಯಾಪ್ತರಾಗಿದ್ದು ನಾಡಿಗೆ ಅಪಾರ ಕೊಡುಗೆ ನೀಡಿದ ಆಸ್ಕರ್‌ ಫೇರ್ನಾಂಡಿಸ್ ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಆಗಲು ವೀರಪ್ಪ ಮೊಯಿಲಿಯವರ ಜೊತೆಗೆ ನಿಂತು ಪ್ರಮುಖ ಪಾತ್ರವಹಿಸಿದ್ದರು. ರಾಷ್ಟ್ರೀಯ ಹೆದ್ದಾರಿ ನಮ್ಮೂರಿಗೆ ಆಸ್ಕರ್‌ ನೀಡಿದ ಶಾಶ್ವತ  ಕೊಡುಗೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷರಾದ ಹೆಬ್ರಿಯ ನೀರೆ ಕೃಷ್ಣ ಶೆಟ್ಟ ತನ್ನ ಸಂತಾಪದಲ್ಲಿ ತಿಳಿಸಿದ್ದಾರೆ.

ಕಾರ್ಕಳದ ಮಾಜಿ ಶಾಸಕ ದಿ. ಹೆಬ್ರಿ ಗೋಪಾಲ ಭಂಡಾರಿ ತೀರ್ಥಹಳ್ಳಿಯ ಶಾಸಕರಾಗಿದ್ದ ಕಿಮ್ಮನೆ ರತ್ನಾಕರ್‌ ಅವರ ವಿಶೇಷ ಮನವಿಯ ಮೇರೆಗೆ ಅಂದಿನ ಕೇಂದ್ರದ ಹೆದ್ದಾರಿ ಮತ್ತು ಭೂಸಾರಿಗೆ ಸಚಿವರಾಗಿದ್ದ ಆಸ್ಕರ್‌  ಫೇರ್ನಾಂಡಿಸ್ ಮತ್ತು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವರಾಗಿದ್ದ ಎಂ.ವೀರಪ್ಪ ಮೊಯಿಲಿಯವರ ವಿಶೇಷ ಮುತುವರ್ಜಿಯಿಂದಾಗಿ ಇಂದು ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ೧೬೯ ಎ ಆಗಿದೆ ಎಂದು ನೀರೆ ಕೃಷ್ಣ ಶೆಟ್ಟಿ ಸ್ಮರಿಸಿದರು.

ಹೆದ್ದಾರಿಯಿಂದಾಗಿ ಹೆಬ್ರಿ ಉಡುಪಿಯ ರಸ್ತೆಯಂಚಿನ ಜಮೀನಿಗೆ ಈಗ ಚಿನ್ನದ ಬೆಲೆಯಾಗಿದೆ ಎಂದು ನೀರೆ ಕೃಷ್ಣ ಶೆಟ್ಟಿ ಹೇಳುತ್ತಾರೆ. ಅಂದು ಮಾಜಿ ಇಂದಿರಾ ಗಾಂಧಿಯವರು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಉಸ್ತುವಾರಿಯಾಗಿದ್ದ ವೀರಪ್ಪ ಮೊಯಿಲಿಯವರು ಆಸ್ಕರ್‌ ಫೇರ್ನಾಂಡಿಸ್ ಅವರನ್ನು ಚುನಾವಣೆಯಲ್ಲಿ ತೊಗಿಸಿಕೊಂಡ ಪರಿಯನ್ನು ಕಂಡು ಅಂದು ಯುವ ಕಾಂಗ್ರೆಸ್‌ ಗೆ ಪ್ರಾಥಮಿಕ ಸದಸ್ಯನಾಗಿ ಸೇರಿಸಿದ್ದರು. ಮತ್ತೇಂದೂ ಹಿಂದೇ ನೋಡದ ಆಸ್ಕರ್‌ ಎಲ್ಲರ ಅಚ್ಚುಮೆಚ್ಚಿನ ಪ್ರಭಾವಿ ಜನನಾಯಕರಾಗಿ ಬೆಳೆದರು ನೀರೆ ಕೃಷ್ಣ ಶೆಟ್ಟಿ ಹೇಳುತ್ತಾರೆ. ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಸಹಿತ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಜಾಹೀರಾತು 


























 
   

  


 
        




Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget