ಕಾರ್ಕಳ:ಅತ್ಯಾಚಾರ ಆರೋಪಿಗೆ ನ್ಯಾಯಾಂಗ ಬಂಧನ.-Times of karkala

  
ಕಾರ್ಕಳ : ಅತ್ಯಾಚಾರ ಆರೋಪಿಗೆ ನ್ಯಾಯಾಂಗ ಬಂಧನ.                    
ಕಾರ್ಕಳ:ಮೊಬೈಲ್ ಮೂಲಕ ಕರೆ ಮಾಡಿ ಪ್ರೇಮದ ಜಾಲಕ್ಕೆ ಸಿಲುಕಿಸಿ ಕೆಲ ವರ್ಷಗಳಿಂದ ನಿರಂತರ ಅತ್ಯಾಚಾರ ವೆಸಗಿ, ಹಲ್ಲೆ ನಡೆಸಿದ ಆರೋಪಿ ನಯಾಸ್ ನನ್ನು ಕಾರ್ಕಳ ನಗರ ಟಾಣಾ ಪೊಲೀಸರು ಬಂಧಿಸಿದ್ದಾರೆ.             ಆರೋಪಿ ನಯಾಜ್ ಸಂತ್ರಸ್ತೆ ಯುವತಿಗೆ ಬಸ್ ನಿಲ್ದಾಣ ಬಳಿಗೆ ಬರಲು ಹೇಳಿ ಅಲ್ಲಿಂದ ಪತ್ತೊಂಜಿಕಟ್ಟೆ ಎಂಬಲ್ಲಿಗೆ ಕರೆದೊಯ್ದು ಹಲ್ಲೆ ನಡೆಸಿ ಮೊಬೈಲ್ ಎಗರಿಸಿದ ಘಟನೆಯಿಂದ ಈ ಎಲ್ಲ ವಿಚಾರ ಬಯಲಿಗೆ ಬರಲು ಸಾಧ್ಯವಾಗಿದೆ.
ಮೂಲತ: ಶಿವಮೊಗ್ಗದವನಾಗಿದ್ದು, ಪ್ರಸಕ್ತ ಕಾರ್ಕಳದ ಬಂಗ್ಲೆಗುಡ್ಡೆಯಲ್ಲಿ ವಾಸವಾಗಿರುವ  ನಯಾಜ್(26) ಪ್ರಕರಣದ ಆರೋಪಿ.
ಅಪ್ರಾಪ್ತಳಾಗಿದ್ದಾಗ ಆಕೆಗೆ ಮೊಬೈಲ್ ಕರೆಗಳನ್ನು ಮಾಡುತ್ತಿದ್ದ. ಅಸಭ್ಯ ರೀತಿಯಲ್ಲಿ ಸಂಭಾಷಿಸುತ್ತಿದ್ದ. ಲೈಂಗಿಕ ಕ್ರಿಯೆಗೆ ಪ್ರಚೋದಿಸಿತ್ತಿದ್ದನೆಂಬ ಆರೋಪ ನಯಾಜ್ ಮೇಲಿದೆ. 
ಕಳೆದ ವರ್ಷ ಮೇ. 30 ರಂದು ಬಂಗ್ಲೆಗುಡ್ಡೆಯಲ್ಲಿರುವ ತನ್ನ ಮನೆಗೆ ಯಾರೂ ಇಲ್ಲದ ಸಮಯ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಆ ಬಳಿಕವೂ ಹಲವಾರು ಬಾರಿ ಅತ್ಯಾಚಾರ ನಡೆಸಿದ್ದ. ಇದಾದ ಬಳಿಕ ಸೆ. 23 ರಂದು ತನ್ನ ಜೊತೆ ಬರಬೇಕೆಂದು ಬಲವಂತ ಮಾಡಿ ಕಾರ್ಕಳ ಬಸ್ ಸ್ಟಾಂಡ್‌ನಿಂದ ಮೋಟಾರ್ ಸೈಕಲಿನಲ್ಲಿ ಪತ್ತೊಂಜಿಕಟ್ಟೆ ಸಾಮಿಲ್ ಬಳಿ ಕರೆದುಕೊಂಡು ಹೋಗಿ ಕೈಯಿಂದ ಕೆನ್ನೆಗೆ ಹೊಡೆದು ಬ್ಯಾಗಿನಲ್ಲಿದ್ದ ಮೊಬೈಲ್ ಫೋನನ್ನು ಕಸಿದುಕೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.ಸಂತ್ರಸ್ತೆ ಯುವತಿ ನೀಡಿದ ದೂರಿನನ್ವಯ ನಗರ ಠಾಣೆಯಲ್ಲಿ ಫೋಕೋ ಕೇಸುದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸಂತ್ರಸ್ತೆ ಯುವತಿ- ಆರೋಪಿ ವಿಭಿನ್ನ ಕೋಮಿಗೆ ಸೇರಿರುವುದರಿಂದ ಸಂತ್ರಸ್ತೆಯ ಪರವಾಗಿ ಕಾನೂನು ರೀತಿಯ ಹೋರಾಟಕ್ಕೆ ಬಜರಂಗ ದಳ ಮುಂದಾಗಿದೆ. ಬಜರಂಗ ದಳದ ರಾಜ್ಯ ಸಂಚಾಲಕ ಸುನೀಲ್ ಕೆ.ಆರ್.ನೇತೃತ್ವದಲ್ಲಿ ತಂಡವು ಸಂತೃಸ್ಥೆಯ ಮನೆಗೆ ತೆರಳಿ ಧೈರ್ಯ ತುಂಬಿದ್ದಾರೆ. 
ಪೊಲೀಸರು ಅರೋಪಿಯನ್ನು ಬಂಧಿಸಿ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.

ಜಾಹೀರಾತು 


 
   

  


 
        
Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget